ಆಕ್ಟೀವಾ 5ಜಿ ಲಿಮಿಟೆಡ್ ಎಡಿಷನ್ ಸ್ಕೂಟರ್‍ನ ಟಿವಿಸಿ ಬಿಡುಗಡೆ ಮಾಡಿದ ಹೋಂಡಾ
ಹೋಂಡಾ ಮೋಟಾರ್‍ಸೈಕಲ್ಸ್ ಲೈನ್-ಅಪ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಆಕ್ಟೀವಾ ಸ್ಕೂಟರ್ ಇದೀಗ ಮಾರುಕಟ್ಟೆಯಲ್ಲಿ ಐದನೆಯ ತಲೆಮಾರಿನ ಮಾದರಿಯು ಖರೀದಿಗೆ ಲಭ್ಯವಿದೆ. ಕಳೆದ ಕೆಲವು ತಿಂಗಳಿನಿಂದ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಆಕ್ಟೀವಾ ಸ್ಕೂಟರ್‍ಗಳ ಮಾರಾಟವನ್ನು ಮತ್ತೆ ಏರಿಸಲು ತಮ್ಮ ಆಕ್ಟೀವಾ 5ಜಿ ಸ್ಕೂಟರ್‍ನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಿತ್ತು.

ಹೋಂಡಾ ಮೋಟಾರ್‍ಸೈಕಲ್ಸ್ ಸಂಸ್ಥೆಯು ಬಿಡುಗಡೆ ಮಾಡಿದ ಆಕ್ಟೀವಾ 5ಜಿ ಸ್ಪೆಷಲ್ ಎಡಿಷನ್ ಸ್ಕೂಟರ್‍ಗಳು ಸ್ಟ್ಯಾಂಡರ್ಡ್ ಆಕ್ಟೀವಾ 5ಜಿ ಸ್ಕೂಟರ್‍ಗಿಂಗಲೂ ಬೆಲೆಯಲ್ಲಿ ಕೇವಲ ರೂ. 400 ಅಧಿಕವಾಗಿದ್ದು, ಈ ಲಿಮಿಟೆಡ್ ಎಡಿಷನ್ ಸ್ಕೂಟರ್‍ಗಳು ಪರ್ಲ್ ಪ್ರೀಶಿಯಸ್ ವೈಟ್‍ನೊಂದಿಗೆ ಮೇಟ್ ಸೆಲೆನ್ ಸಿಲ್ವರ್ ಮತ್ತು ಸ್ಟ್ರೋನ್ಟಿಯಮ್ ಸಿಲ್ವರ್ ಮೆಟಾಲಿಕ್‍ನೊಂದಿಗೆ ಪರ್ಲ್ ಇಗ್ನೌಸ್ ಬ್ಲಾಕ್ ಎಂಬ ಹೊಸ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇವುಗಳೊಂದಿಗೆ ಹೊಸ ಹೋಂಡಾ ಆಕ್ಟೀವಾ 5ಜಿಯಲ್ಲಿ ನೀಡಲಾದ ಕ್ರೋಮ್ ಗಾರ್ನಿಷ್ ಸ್ಕೂಟರ್‍ನ ಅಂದವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಇದಕ್ಕೆ ಸ್ಪೋರ್ಟ್ಸ್ ಕ್ರೋಮ್ ಮೆಟಲ್ ಮಫ್ಲರ್ ಕವರ್, ಮರು ವಿನ್ಯಾಸ ಮಾಡಲಾದ ಸೀಟ್, ಸೈಡ್ ಪ್ಯಾನಲ್ಸ್ ಮತ್ತು ಪಿನ್ ಸ್ಟ್ರೈಪ್ಸ್ ಅನ್ನು ನೀಡಲಾಗಿದೆ. ಇನ್ನು ಈ ಸ್ಕೂಟರ್‍ನ ವಿಶೇಷತೆಯನ್ನು ಗ್ರಾಹಕರಿಗೆ ತಲುಪಿಸಲು ಹೋಂಡಾ ಮೋಟಾರ್‍ಸೈಕಲ್ಸ್ ಸಂಸ್ಥೆಯು ಹೊಸ ಟಿವಿಸಿಯನ್ನು ಸಹ ಬಿಡುಗಡೆ ಮಾಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಆಕ್ಟಿವಾ 5ಜಿ ಸ್ಕೂಟರ್‌ಗಳು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಲಿಮಿಟೆಡ್ ಎಡಿಷನ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.55,032(ಎಸ್‌ಟಿಡಿ ವೆರಿಯೆಂಟ್) ಮತ್ತು ಟಾಪ್ ಎಂಡ್ ಮಾದರಿಗೆ ರೂ.56,897(ಡಿಎಲ್ಎಕ್ಸ್ ವೆರಿಯೆಂಟ್)ಗೆ ಲಭ್ಯವಿರಲಿವೆ.

ಇದರ ಹೊರತವಾಗಿ ಸ್ಪೆಷಲ್ ಎಡಿಷನ್ ಮಾದರಿಗಳು ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಪಡೆದುಕೊಳ್ಳುತ್ತಿರುವ ಸುಜುಕಿ ಅಕ್ಸೆಸ್, ಟಿವಿಎಸ್ ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳಿಗೆ ಲಿಮಿಟೆಡ್ ಎಡಿಷನ್ ಆಕ್ಟಿವಾ 5ಜಿ ಮಾದರಿಯು ಮತ್ತಷ್ಟು ಟಕ್ಕರ್ ನೀಡಲಿದೆ.

ಎಂಜಿನ್ ಸಾಮರ್ಥ್ಯ
ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ ಮತ್ತು ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಪ್ರಮುಖ ಬಣ್ಣಗಳಲ್ಲಿ ಲಭ್ಯವಿರಲಿದೆ.

ಹೊಸ ಎಲ್ಇಡಿ ಹೆಡ್‍ಲೈಟ್‍ಗಳನ್ನು ಹೊರತುಪಡಿಸಿ ಆಕ್ಟಿವಾ 5ಜಿ ಸ್ಕೂಟರಿನಲ್ಲಿ ಅನುಕೂಲಕರ 4 ಇನ್ 1 ಲಾಕ್ ಸಿಸ್ಟಂ ಹೊಂದಿದ್ದು, ಇದರಲ್ಲಿ ಸೀಟ್-ರಿಲೀಸ್ ಬಟನ್, ಇಗ್ನೀಷನ್ ಮತ್ತು ಇನ್ನಿತರೆ ಅನುಕೂಲತೆಗಳನ್ನು ಪಡೆದಿದೆ. ಇನ್ನು ಆಕ್ಟಿವಾ 4ಜಿ ಸ್ಕೂಟರ್‍ನಲ್ಲಿ ಇರುವ ಹಾಗೆಯೇ 5ಜಿ ಸ್ಕೂಟರ್‌ನಲ್ಲೂ ಕೂಡಾ ಚಾರ್ಜಿಂಗ್ ಸಾಕೆಟ್ ಅನ್ನು ಇರಿಸಲಾಗಿದೆ.

ಈ ಸ್ಕೂಟರಿನಲ್ಲಿ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಪುನರಾವರ್ತಿಸಿದ್ದು, ಸೆಮಿ-ಡಿಜಿಟಲ್ ಆಯ್ಕೆಯನ್ನು ಪಡೆದಿದೆ. ಇನ್ನು ಇದರಲ್ಲಿ ಚಾಲಕರು ಸರ್ವಿಸ್ ಇಂಟರ್‍ವಲ್ ಮತ್ತು ಇಕೊ ಸ್ಪೀಡ್ ಇಂಡಿಕೇಟರ್ ಹೊಸದಾಗಿ ಕಾಣಬಹುದಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 60 ಕಿ.ಮಿ ಮೈಲೇಜ್ ಸಾಮರ್ಥ್ಯದೊಂದಿಗೆ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.


Click it and Unblock the Notifications








