ಜಾವಾ ಪ್ರಿಯರಿಗೆ ಗುಡ್ ನ್ಯೂಸ್ - ಮತ್ತೆ ಶುರುವಾಗಲಿದೆ ಬುಕ್ಕಿಂಗ್
ಜಾವಾ ಮೋಟಾರ್‍ಸೈಕಲ್ ಸಂಸ್ಥೆಯು ರಾಯಲ್ ಎನ್‍ಫೀಲ್ಡ್ 350ಸಿಸಿ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾ ಮತ್ತು ಜಾವಾ 42 ಎಂಬ ಎರಡು ಬೈಕ್‍ಗಳನ್ನು ಬಿಡುಗಡೆ ಮಾಡಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಿಡುಗಡೆಗೂ ಮುಂಚೆಯೆ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿದ ಜಾವಾ ಸಂಸ್ಥೆ, ಈ ಬೈಕ್‍ಗಳ ಜನಪ್ರಿಯತೆ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಸೆಪ್ಟೆಂಬರ್ ವರೆಗಿನ ಸ್ಟಾಕ್‍ಗಳು ಸೋಲ್ಡ್ ಔಟ್ ಆಗಿದೆಯಂತೆ.

ಜಾವಾ ಸಂಸ್ಥೆಯು ಬಿಡುಗಡೆಗೊಳಿಸಿದ 'ಜಾವಾ' ರೂ. 1.64 ಲಕ್ಷ ಮತ್ತು 'ಜಾವಾ 42' ರೂ. 1.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಇಷ್ಟೆ ಅಲ್ಲದೇ ಸಂಸ್ಥೆಯು ಈ ಎರಡೂ ಬೈಕ್‍ಗಳ ಬಿಡುಗಡೆಯ ವೇಳೆಗೆ ಮತ್ತೊಂದು 'ಪೆರಾಕ್' ಎಂಬ ಹೆಸರಿನ ಬೈಕ್ ಅನ್ನು ಅನಾವರಣಗೊಳಿಸಿತ್ತು. ಪೆರಾಕ್ ಬೈಕಿನ ಬುಕ್ಕಿಂಗ್ ಅನ್ನು ಕೂಡಾ ಸಂಸ್ಥೆಯು ಸೆಪ್ಟೆಂಬರ್ ತಿಂಗಳಿನಿಂದ ಶುರು ಮಾಡಲಿದೆಯಂತೆ.
ಶೀಘ್ರವೇ ಬುಕ್ಕಿಂಗ್‍ಗೆ ಚಾಲನೆ
ಜಾವಾ ಸಂಸ್ಥೆಯು ಸೆಪ್ಟೆಂಬರ್ ತಿಂಗಳಿನ ವರೆಗು ಲಭ್ಯವಿರುವ ಬೈಕ್‍ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿದ್ದು, ಮತ್ತೊಮ್ಮೆ ಈ ಬೈಕ್‍ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಶೀಘ್ರವೇ ಶುರು ಮಾಡಲಿದೆ. ಈ ಬೈಕ್‍ಗಳ ಖರೀದಿಗಾಗಿ ಗ್ರಾಹಾಕರು ಜಾವಾ ಸಂಸ್ಥೆಯ ಅಧಿಕೃತ ವೆಬ್‍ಸೈಟ್ ಅಥವಾ ದೇಶದಲ್ಲಿರುವ ಎಲ್ಲಾ ಜಾವಾ ಡೀಲರ್‍ಗಳ ಬಳಿ ರೂ. 5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಡೆಲಿವರಿ ಕೂಡಾ ಪ್ರಾರಂಭವಾಗಲಿದೆ
ಇನ್ನು ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದ್ದು, ಬುಕ್ಕಿಂಗ್ ಮಾಡಿದ ಪ್ರತಿ ಬ್ಯಾಚ್‌ಗಳು ಸಹ ಒಂದೊಂದು ತಿಂಗಳು ಕಾಲ ಹೆಚ್ಚುವರಿಯಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದ ಪ್ರಿಥಮ್‌ಪುರ್‌ನಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.


Click it and Unblock the Notifications