ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಜಾವಾ ಮೋಟಾರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮರಳಿ ಬಂದಿದ್ದು, ತನ್ನ ಬೈಕುಗಳ ಮಾರಾಟಕ್ಕಾಗಿ ಬುಕ್ಕಿಂಗ್‍‍ಗಳನ್ನು ಆರಂಭಿಸಿದೆ. ಆದರೆ ಬುಕ್ಕಿಂಗ್ ಆದ ನಂತರ ಬೈಕುಗಳನ್ನು ಪಡೆಯಲು ಹೆಚ್ಚಿನ ಅವಧಿಯ ವೇಟಿಂಗ್ ಪಿರಿಯಡ್ ಇದೆ. ಕೆಲವು ನಗರಗಳಲ್ಲಿ ಈ ಬೈಕ್ ಅನ್ನು ಪಡೆಯಲು ಸುಮಾರು ಒಂಭತ್ತು ತಿಂಗಳು ಕಾಯಬೇಕು. ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು ತನ್ನ ಸರಬರಾಜುದಾರರ ಮೇಲೆ ಒತ್ತಡ ಹೇರುತ್ತಿದೆ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಜಾವಾ ಕಂಪನಿಯು ಸಹ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆದಷ್ಟು ಬೇಗ ಗ್ರಾಹಕರಿಗೆ ಬೈಕುಗಳನ್ನು ಸರಬರಾಜು ಮಾಡಲಿದೆ. ಬೆಂಗಳೂರಿನ ಕುನಾಲ್ ಖಡ್ಸೆ ಎಂಬುವವರು ಜಾವಾ ಬೈಕಿನ ಡೆಲಿವರಿಯನ್ನು ಪಡೆದು, ಈ ಬೈಕ್ ಅನ್ನು ಮುಂಬೈನಲ್ಲಿ ಮಾಡಿಫೈ ಮಾಡಿಸಿದ್ದಾರೆ. ಕುನಾಲ್ ಖಡ್ಸೆ ಈ ಬೈಕ್ ಅನ್ನು ಮಾಡಿಫೈ ಮಾಡಲು ಮುಂಬೈನಲ್ಲಿರುವ ಬಾಂಬೆ ಕಸ್ಟಮ್ ವರ್ಕ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಮಾಡಿಫೈಗೊಂಡಿರುವ ಬೈಕಿನ ಒಂದು ಚಿತ್ರದಿಂದ ಈ ಬೈಕ್ ಯಾವ ರೀತಿಯಾಗಿ ಮಾಡಿಫೈಗೊಂಡಿದೆ ಎಂಬುದನ್ನು ಗಮನಿಸಬಹುದು. ಮಾಡಿಫೈಗೊಂಡಿರುವ ಜಾವಾ ಬೈಕ್ ಪೂರ್ತಿಯಾಗಿ ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಈ ಬೈಕ್ ಅನ್ನು ಬ್ಲಾಕ್ ಎಂದು ಕರೆಯಲಾಗುತ್ತಿದೆ. ಮಾರಾಟ ಮಾಡಲಾಗುತ್ತಿರುವ ಜಾವಾ 42 ಬೈಕ್ ಆರು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಈ ಆರು ಬಣ್ಣಗಳಲ್ಲಿ ಕಪ್ಪು ಬಣ್ಣದ ಬೈಕುಗಳು ಲಭ್ಯವಿಲ್ಲ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಆದ್ದರಿಂದ, ಕುನಾಲ್ ಖಡ್ಸೆರವರು ತಮ್ಮ ಬೈಕ್ ಅನ್ನು ಕಪ್ಪು ಬಣ್ಣಕ್ಕೆ ಮಾಡಿಫೈಗೊಳಿಸಲು ನಿರ್ಧರಿಸಿದರು. ಅದರಂತೆ ಅವರ ಜಾವಾ ಬೈಕಿಗೆ ಮ್ಯಾಟ್ ಬ್ಲ್ಯಾಕ್ ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನಲ್ಲಿರುವ ವ್ಹೀಲ್‍‍ಗಳನ್ನು, ಸಸ್ಪೆಂಷನ್, ಎಕ್ಸಾಸ್ಟ್ ಹಾಗೂ ಪೂರ್ತಿ ಎಂಜಿನ್ ಅನ್ನು ಕಪ್ಪು ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನಲ್ಲಿರುವ ಜಾವಾ ಲೊಗೊವನ್ನು ಗೊಲ್ಡ್ ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ. ಜಾವಾ ಡೆಕಾಲ್ ಅನ್ನು ಫ್ಯೂಯಲ್ ಟ್ಯಾಂಕ್ ಮೇಲೆ ಅಳವಡಿಸಲಾಗಿದೆ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಬಾಂಬೆ ಕಸ್ಟಮ್ ವರ್ಕ್ಸ್ ಹಾಗೂ ಕುನಾಲ್ ಖಡ್ಸೆ ಇಷ್ಟಕ್ಕೆ ಸುಮ್ಮನಾಗಿಲ್ಲ. ಜಾವಾ 42 ಬೈಕಿಗೆ ಇನ್ನೂ ಹಲವು ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ. ಮುಂಭಾಗದ ಮಡ್‌ಗಾರ್ಡ್ ಅನ್ನು ಕತ್ತರಿಸಿ ಎರಡೂ ತುದಿಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಮಾರಾಟವಾಗುವ ಜಾವಾ 42 ಬೈಕ್ ತಲೆಕೆಳಗಾದ ಫೋರ್ಕ್ ಹಾಗೂ ರೆಟ್ರೊ ಹ್ಯಾಂಡಲ್‌ಬಾರ್‌ಗಳೊಂದಿಗೆ ಬರುತ್ತದೆ. ಆದರೆ ಮಾಡಿಫೈಗೊಂಡ ಈ ಬೈಕಿನಲ್ಲಿ ಸಾಂಪ್ರದಾಯಿಕ ಮಾದರಿಯ ಟೆಲಿಸ್ಕೋಪಿಕ್ ಫೋರ್ಕ್ ಅಪ್ ಫ್ರಂಟ್ ಹಾಗೂ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಅಳವಡಿಸಲಾಗಿದೆ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಫೋರ್ಕ್ ಅನ್ನು ರಾಯಲ್ ಎನ್‌ಫೀಲ್ಡ್ ಥಂಡರ್‍‍ಬರ್ಡ್‍‍ನಿಂದ ಪಡೆದಿರುವಂತೆ ಕಾಣುತ್ತದೆ. ಮಾಡಿಫೈಗೊಂಡ ನಂತರ ರೇಕ್ ಆಂಗಲ್ ಹೆಚ್ಚಾದಂತೆ ಕಾಣುತ್ತದೆ. ರೆಟ್ರೊ ಹೆಡ್‌ಲ್ಯಾಂಪ್‌ನ ಆಕರ್ಷಣೆಯನ್ನು ಹೆಚ್ಚಿಸಲು ಎಕ್ಸ್ ಗುರುತನ್ನು ಹಾಕಲಾಗಿದೆ. ಬೈಕಿನ ಹಿಂಭಾಗದಿಂದ ಜಾವಾ 42 ಬೈಕ್ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಲಾಂಗ್ ಸೀಟ್, ಫೆಂಡರ್, ಟೇಲ್ ಲ್ಯಾಂಪ್ ಹಾಗೂ ಇಂಡಿಕೇಟರ್‍‍ಗಳನ್ನು ತೆಗೆದು ಹಾಕಲಾಗಿದೆ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಇವುಗಳ ಬದಲಿಗೆ ಕಸ್ಟಮ್ ನಿರ್ಮಿತ ಕೌಲ್ನೊಂದಿಗೆ ಫ್ಲಾಟ್ ಕೆಫೆ ರೇಸರ್ ಶೈಲಿಯ ಸೀಟ್ ಅನ್ನು ಅಳವಡಿಸಲಾಗಿದೆ. ಕೌಲ್ ಕೆಳಗೆ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳನ್ನು ಅಳವಡಿಸಲಾಗಿದೆ. ಟೇಲ್‍‍ಲ್ಯಾಂಪ್ ಬದಲಿಗೆ ಎಲ್‍ಇ‍‍ಡಿ ಸ್ಟ್ರಿಪ್ ಅಳವಡಿಸಲಾಗಿದೆ. ಸ್ಟಾಕ್ ಟ್ವಿನ್ ಎಕ್ಸಾಸ್ಟ್ ಪೈಪ್‌ಗಳು ಮಾಡಿಫೈಗೊಂಡಿರುವ ಬೈಕಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಮೊದಲನೇ ಬಾರಿ ಮಾಡಿಫೈಗೊಂಡ ಜಾವಾ42 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾಡಿಫೈಗೊಂಡಿರುವ ಜಾವಾ ಬ್ಲಾಕ್ ಬೈಕ್ ಇದುವರೆಗೂ ನಾವು ನೋಡಿರುವ ಅತ್ಯಂತ ಶ್ರೇಷ್ಠ ಮಾಡಿಫೈ ಬೈಕುಗಳಲ್ಲಿ ಒಂದಾಗಿದೆ. ಇದು ಮಾಡಿಫೈಗೊಂಡ ಮೊದಲ ಜಾವಾ ಬೈಕ್ ಸಹ ಹೌದು. ಆಕರ್ಷಕವಾಗಿ ಮಾಡಿಫೈಗೊಳಿಸಿರುವ ಬಾಂಬೆ ಕಸ್ಟಮ್ ವರ್ಕ್ಸ್‌ಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಗ್ರಾಹಕರು ತಮ್ಮ ಜಾವಾ ಬೈಕುಗಳ ಡೆಲಿವರಿಗಳನ್ನು ಪಡೆದ ನಂತರ ಮುಂಬರುವ ದಿನಗಳಲ್ಲಿ ಈ ರೀತಿಯ ಅನೇಕ ಮಾಡಿಫೈ ಬೈಕುಗಳನ್ನು ಕಾಣಬಹುದು. ಇದೇ ವೇಳೆ ಜಾವಾ ಕಂಪನಿಯು ತನ್ನ ಬೈಕುಗಳಿಗಾಗಿ ಬಿಡಿಭಾಗಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Article Published On: Tuesday, July 16, 2019, 11:04 [IST]
English summary
Jawa 42 Modified Into All-Black Cafe Racer — One Of The Classiest Customisations We Have Seen - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+