ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಕಳೆದ 2018ರ ನವೆಂಬರ್ ಕೊನೆಯಲ್ಲಿ ಮರಳಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಜಾವಾ ಸಂಸ್ಥೆಯು ತನ್ನ ಜನಪ್ರಿಯ ಕ್ಲಾಸಿಕ್ ಬೈಕ್‌ಗಳನ್ನು ಬಿಡುಗಡೆಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ವರ್ಷದ ಸಂಭ್ರಮಕ್ಕಾಗಿ ಸ್ಪೆಷಲ್ ಎಡಿಷನ್ ಬೈಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಮುಂದಿನ ನವೆಂಬರ್ ಮೊದಲ ವಾರದಲ್ಲಿ ವರ್ಷಾಚರಣೆ ಆಚರಿಸಲು ನಿರ್ಧರಿಸುವ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯು ಜಾವಾ ಪ್ರಿಯರಿಗಾಗಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ 90 ಜಾವಾ 42 ಮತ್ತು ಜಾವಾ ಕ್ಲಾಸಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಸ್ಪೆಷಲ್ ಎಡಿಷನ್ ಖರೀದಿಸಲು ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದೆ. ವಿಶೇಷ ಅಂದ್ರೆ ಸಾಮಾನ್ಯ ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿ ಐದಾರು ತಿಂಗಳಿನಿಂದ ಕಾಯುತ್ತಿರುವ ಗ್ರಾಹಕರಿಗಿಂತಲೂ ಸ್ಪೆಷಲ್ ಎಡಿಷನ್ ಬುಕ್ ಮಾಡಿದ ಗ್ರಾಹಕರಿಗೆ ನವೆಂಬರ್ ಮೊದಲ ವಾರದಲ್ಲೇ ಹೊಸ ಬೈಕ್ ವಿತರಣೆಯಾಗಲಿದೆ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಇನ್ನು ಜಾವಾ ಸಂಸ್ಥೆಯು ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ ಜೊತೆಗೂಡಿ ಹೊಸ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬ್ರಿಟಿಷ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆಯಾದ ಬಿಎಸ್ಎ ಕೂಡಾ ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಜೊತೆಯಾಗಿ ಮತ್ತಷ್ಟು ಹೊಸ ಬೈಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಕ್ಲಾಸಿಕ್ ಬೈಕ್ ಅಭಿವೃದ್ದಿಯಲ್ಲಿ ಜಾವಾದಂತೆ ಬಿಎಸ್ಎ ಕೂಡಾ ಸಾಕಷ್ಟು ಮುಂಚೂಣಿಯಲ್ಲಿದ್ದು, ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಕ್ಲಾಸಿಕ್ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡಿ ನಂತರದ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಿಂದ ಹೊರನಡೆದಿತ್ತು.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಇದೀಗ ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಜೊತೆಗೂಡಿ ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಮತ್ತೆ ಹೊಸ ಸಂಚಲನಕ್ಕೆ ಕಾರಣವಾಗಿರುವರಿಂದ ಬಿಎಸ್ಎ ಕೂಡಾ ತನ್ನ ಹಳೆಯ ಕ್ಲಾಸಿಕ್ ಬೈಕ್‌ಗಳ ವಿನ್ಯಾಸ ಪ್ರೇರಿತ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದಕ್ಕಾಗಿ ಕ್ಲಾಸಿಕ್ ಲೆಜೆಂಡ್ಸ್ ಸಂಪರ್ಕಿಸಿರುವ ಬಿಎಸ್ಎ ಸಂಸ್ಥೆಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ ಹಲವು ಹೊಸ ಬೈಕ್ ವಿನ್ಯಾಸಗಳನ್ನು ಸಿದ್ದಪಡಿಸಿದ್ದು, ಇದರಲ್ಲಿ ಕೆಲವು ಬೈಕ್ ಮಾದರಿಗಳನ್ನು ಕ್ಲಾಸಿಕ್ ಲೆಜೆಂಡ್ಸ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಹೀಗಾಗಿ ಜಾವಾ, ಬಿಎಸ್ಎ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಅಭಿವೃದ್ದಿಪಡಿಸುತ್ತಿರುವ ಹೊಸ ಬೈಕ್‌ಗಳು 200ಸಿಸಿ ಯಿಂದ400ಸಿಸಿ ವಿಭಾಗದಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇವು ಮತ್ತಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಇದರೊಂದಿಗೆ ಜಾವಾ ಬೈಕ್‌ಗಳ ಬೇಡಿಕೆಗೆ ತಕ್ಕಂತೆ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಧೀರ್ಘ ಕಾಲದ ಕಾಯುವಿಕೆ ಅವಧಿಯನ್ನು ತಗ್ಗಿಸಲು ಮಧ್ಯಪ್ರದೇಶದ ಪ್ರೀತಂಪುರದಲ್ಲಿರುವ ಬೈಕ್ ಉತ್ಪಾದನಾ ಘಟಕವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುತ್ತಿದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಇದರೊಂದಿಗೆ ಗ್ರಾಹಕರ ಬೇಡಿಕೆಯೆಂತೆ ವಿವಿಧ ಬೈಕ್ ಶ್ರೇಣಿಯೊಂದಿಗೆ ಬೇಡಿಕೆ ಪೂರೈಕೆ, ಮಾರಾಟ ನಂತರ ಸೇವೆಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಜಾವಾ ಸಂಸ್ಥೆಯು ಗ್ರಾಹಕರ ಪರ-ವಿರೋಧದ ನಡುವೆಯು ಹೊಸ ಬೈಕ್ ಮಾರಾಟದಲ್ಲಿ ಇದೀಗ ಒಂದು ವರ್ಷ ಪೂರೈಸುತ್ತಿದೆ.

MOST READ: ಸೈಕಲ್ ಅನ್ನೇ ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಿ ಮಾರಾಟ ಮಾಡುತ್ತಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿರುವ ಜಾವಾ ಸಂಸ್ಥೆಯು ಮುಂಬರುವ ಡಿಸೆಂಬರ್ ಹೊತ್ತಿಗೆ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಮೊದಲ ವರ್ಷದ ಸಂಭ್ರಮದಲ್ಲಿರುವ ಜಾವಾದಿಂದ ಸ್ಪೆಷಲ್ ಎಡಿಷನ್ ಬೈಕ್..!

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

More from DriveSpark

Article Published On: Wednesday, October 9, 2019, 10:43 [IST]
English summary
Jawa Anniversary Edition to be launched soon; only 90 bikes to be sold. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+