ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗಿದ್ದೆ ಎಂದಿದ್ದೆ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿಯಲ್ಲಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಬಿಡುಗಡೆಯಾದ ಕೆಲವೇ ತಿಂಗಳಿನಲ್ಲೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಜಾವಾ ತೀವ್ರ ಪೈಪೋಟಿ ನೀಡುತ್ತಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು 2 ತಿಂಗಳ ಹಿಂದಷ್ಟೇ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಸಾವಿರಾರು ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ. ಇದು ಸಹಜವಾಗಿಯೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಹಿನ್ನಡೆಯಾಗದೇ ಇರಲಾರದು.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯ ಮೂರು ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನ ಬಿಡುಗಡೆ ಮಾಡಿದಲ್ಲಿ ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕ್‌ಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಇದರಿಂದ ರಾಯಲ್ ಎನ್‌ಫೀಲ್ಡ್ ಖರೀದಿ ಯೋಜನೆಯಲ್ಲಿದ್ದ ಬಹುತೇಕ ಗ್ರಾಹಕರು ಜಾವಾ ಬೈಕ್ ಖರೀದಿಯತ್ತ ಮುಖ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಜನವರಿ ತಿಂಗಳ ಬೈಕ್ ಮಾರಾಟ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಜನವರಿ ತಿಂಗಳ ಬೈಕ್ ಮಾರಾಟದಲ್ಲಿ ಶೇ.7 ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಜಾವಾ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಇದಲ್ಲದೇ ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

MOST READ: 102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂಗಳ ಎದುರಲ್ಲೇ ಹೊಸ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಇನ್ನು ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳು..!

ಜಾವಾ ಅಬ್ಬರದ ಮುಂದೆ ಮಂಕಾದ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ..!

ಒಟ್ಟಿನಲ್ಲಿ ಭಾರತೀಯ ಗ್ರಾಹಕರ ಅಭಿರುಚಿಗಳನ್ನು ಅರಿತು ಜಾವಾ ಬೈಕ್‌ಗಳಲ್ಲಿ ಹೊಸ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾವಾ ಬೈಕ್‌ಗಳನ್ನು ಹೊರತರುವ ಇರಾದೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಳ್ಳಲಿವೆ ಎನ್ನವುದನ್ನು ಕಾಯ್ದುನೋಡಬೇಕಿದೆ.

Article Published On: Tuesday, February 5, 2019, 11:39 [IST]
English summary
Jawa Effect: Royal Enfield Sales Down By 7 Per cent In January 2019. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+