ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಜಾವಾ ಹೊಸ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೆ ತಡ ತಾ ಮುಂದು ನಾ ಮುಂದು ಅಂತಾ ಲಕ್ಷಾಂತರ ಗ್ರಾಹಕರು ರೂ. 5 ಸಾವಿರ ನೀಡಿ ಬುಕ್ಕಿಂಗ್ ಮಾಡಿದ್ದರು. ಆದ್ರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಜಾವಾ ಸಂಸ್ಥೆಯು ಗ್ರಾಹಕರ ಕಾಯುವಿಕೆಯ ತಾಳ್ಮೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಲ್ಲದೇ ಬುಕ್ಕಿಂಗ್ ಮಾಡಲಾದ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಬೈಕ್ ವಿತರಣೆ ಮಾಡಲು ಇನ್ನು 8 ತಿಂಗಳು ಬೇಕಾಗಬಹುದು ಎನ್ನುತ್ತಿದೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಹೌದು, ಜಾವಾ ಬೈಕ್ ಖರೀದಿಗಾಗಿ ಗ್ರಾಹಕರು ಇನ್ನು ಕೆಲವು ತಿಂಗಳು ಕಾಯಲೇಬೇಕಾದ ಅನಿವಾರ್ಯತೆಗಳಿದ್ದು, ಮಂದಗತಿಯಲ್ಲಿ ಸಾಗಿರುವ ಬೈಕ್ ಉತ್ಪಾದನಾ ಪ್ರಕ್ರಿಯೆಯಿಂದಾಗಿ ಸದ್ಯಕ್ಕೆ ಜಾವಾ ಖರೀದಿಯು ಅಸಾಧ್ಯದ ಮಾತಾಗಿದೆ. ಹೀಗಾಗಿಯೇ ಕೆಲವು ಗ್ರಾಹಕರು ಬುಕ್ಕಿಂಗ್ ಹಣವನ್ನು ವಾಪಸ್ ಪಡೆಯುತ್ತಿದ್ದು, ಇನ್ನು 8 ತಿಂಗಳು ಕಾಲ ಕಾಯಲೇಬೇಕಾದ ಹಿನ್ನೆಲೆ ಇನ್ನಷ್ಟು ಗ್ರಾಹಕರು ಬುಕ್ಕಿಂಗ್ ವಾಪಸ್ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ವಾಹನಗಳಿಗೆ 2 ರಿಂದ 3 ತಿಂಗಳು ಕಾಲ ಕಾಯುವುದನ್ನು ನೋಡಿದ್ದೇವೆ. ಆದ್ರೆ ಬುಕ್ಕಿಂಗ್ ಮಾಡಿ ಎಂಟರಿಂದ ಹತ್ತು ತಿಂಗಳು ಕಾಲ ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಿರುವ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಜಾವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಮಾಹಿತಿಗಳ ಪ್ರಕಾರ, ದೇಶದ ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಜಾವಾ ಕಾಯುವಿಕೆಯ ಅವಧಿಯ 7ರಿಂದ 8 ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದ್ದು, ಬೆಂಗಳೂರಿನ ಜಾವಾ ಡೀಲರ್ಸ್‌ಗಳನ್ನು ಸಂಪರ್ಕಿಸಿದಾಗ ಹೊಸ ಬೈಕ್ ವಿತರಣೆಯು ಪೂರ್ಣಗೊಳ್ಳಲು ಕನಿಷ್ಠ 5 ರಿಂದ 6 ತಿಂಗಳು ಕಾಲ ಕಾಯಲೇಬೇಕಾದ ಅನಿವಾರ್ಯತೆಯಿದೆ ಎನ್ನುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಸದ್ಯ ಜಾವಾ ಸಂಸ್ಥೆಯು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಬೈಕ್ ವಿತರಣೆ ಮಾಡುವುದರ ಮೇಲೆ ಹೆಚ್ಚು ಗಮನಹರಿಸದೇ ಹೊಸ ಹೊಸ ಡೀಲರ್ಸ್‌ಗಳನ್ನು ತೆರೆಯುವುದರಲ್ಲೇ ಹೆಚ್ಚು ಆಸಕ್ತಿ ತೊರುತ್ತಿದ್ದು, ದೇಶಾದ್ಯಂತ 100ಕ್ಕೂ ಡೀಲರ್ಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದರೂ ಸಹ ಇದುವರೆಗೆ ಕನಿಷ್ಠ 200 ಬೈಕ್‌ಗಳನ್ನು ವಿತರಣೆ ಮಾಡಿಲ್ಲ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಹೀಗಾಗಿ ಹೊಸ ಬೈಕ್ ಬಿಡುಗಡೆಯಾದಾಗ ಹಿರಿಹಿರಿ ಹಿಗ್ಗಿದ್ದ ಜಾವಾ ಬೈಕ್ ಪ್ರಿಯರೇ ಇಂದು ಬೈಕ್ ವಿತರಣೆ ವಿಳಂಬವಾಗುತ್ತಿರುವುದಕ್ಕೆ ರೊಸಿಹೋಗಿದ್ದು, ಬುಕ್ಕಿಂಗ್ ಮಾಡಿದ್ದ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ. ಜೊತೆಗೆ ಗ್ರಾಹಕರ ಪ್ರಶ್ನೆಗಳಿಗೆ ಯಾವುದೇ ಸಮಂಜಸವಾದ ಉತ್ತರ ನೀಡಿದ ಡೀಲರ್ಸ್‌ಗಳ ವಿರುದ್ಧವೂ ಬಹುತೇಕ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಇದರಿಂದ ಕೆಲವು ಗ್ರಾಹಕರು ಬುಕ್ಕಿಂಗ್ ವಾಪಸ್ ಪಡೆದು ಪರ್ಯಾಯ ಬೈಕ್ ಮಾದರಿಯಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಥಂಡರ್‌ಬರ್ಡ್ 350ಎಕ್ಸ್ ಖರೀದಿಯತ್ತ ಮುಖಮಾಡುತ್ತಿದ್ದು, ಹೊಸ ಕ್ಲಾಸಿಕ್ ಬೈಕ್ ಖರೀದಿ ಮಾಡಬೇಕೆಂಬ ಯೋಜನೆಯಲ್ಲಿದ್ದ ಗ್ರಾಹಕರಿಗೆ ಜಾವಾ ನಿರಾಸೆ ಉಂಟುಮಾಡಿದೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಇನ್ನು ಜಾವಾ ಮತ್ತು ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈ.ಲಿ ಸಂಸ್ಥೆಗಳು ಜಂಟಿಯಾಗಿ ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರು ಇನ್ನು 8 ತಿಂಗಳು ಕಾಯಲೇಬೇಕು..!

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

More from DriveSpark

Article Published On: Thursday, April 25, 2019, 12:53 [IST]
English summary
Jawa Motorcycles City-Wise Waiting Period — Here’s How Long You Have To Wait For Your Jawa!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+