ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಳ್ಳಲಾಗಿತ್ತು.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು 2019ರ ಸೆಪ್ಟೆಂಬರ್‌ನಿಂದ ಜಾವ ಪೆರಾಕ್ ಬೈಕ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ಹೇಳಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಹಾಗೆಯೇ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಹೀಗಾಗಿ ಮುಂದಿನ 8 ರಿಂದ 9 ತಿಂಗಳ ಕಾಲ ಜಾವಾ ಖರೀದಿಗಾಗಿ ಯಾವುದೇ ಅವಕಾಶಗಳಿಲ್ಲದಿರುವುದು ಜಾವಾ ಪ್ರಿಯರಲ್ಲಿ ನಿರಾಶೆ ಮೂಡಿಸಿದ್ದು, ಸದ್ಯಕ್ಕೆ ಬುಕ್ಕಿಂಗ್ ಸ್ವಿಕರಿಸುವ ಗ್ರಾಹಕರಿಗೆ ಮಾತ್ರ ಫೆಬ್ರುವರಿಯಿಂದ ಬೈಕ್ ವಿತರಣೆ ಆರಂಭಿಸಿದ್ದಲ್ಲಿ ಅದು ಮುಂದಿನ ಸೆಪ್ಟೆಂಬರ್ ತನಕವು ವಿತರಣೆಯಾಗಲಿದೆ. ತದನಂತರವಷ್ಟೇ ಮತ್ತೆ ಬುಕ್ಕಿಂಗ್ ಪ್ರಕ್ರಿಯೆಗಳು ಆರಂಭವಾಗುತ್ತೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಹೌದು, 2019ರ ಸೆಪ್ಟೆಂಬರ್ ಅವಧಿಯ ತನಕ ಜಾವಾ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗಳು ಭರ್ತಿಯಾಗಿದ್ದು, ಆರಂಭದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಫೆಬ್ರುವರಿ ಮೊದಲ ವಾರದಿಂದ ಬೈಕ್ ವಿತರಣೆ ಆರಂಭವಾಗಲಿದೆ ಎಂದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಹೇಳಿಕೊಂಡಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದ್ದು, ಬುಕ್ಕಿಂಗ್ ಮಾಡಿದ ಪ್ರತಿ ಬ್ಯಾಚ್‌‌ಗಳು ಸಹ ಒಂದೊಂದು ತಿಂಗಳು ಕಾಲ ಹೆಚ್ಚುವರಿಯಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದ ಪ್ರಿಥಮ್‌ಪುರ್‌ನಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಆದರೂ ಸಹ ಜಾವಾ ಪ್ರಿಯರು ಅಷ್ಟೊಂದು ಕಾಯುವ ಅವಧಿಯ ನಡುವೆಯು ಬುಕ್ಕಿಂಗ್ ಮಾಡಿದ್ದು, ಸೆಪ್ಟೆಂಬರ್ ಆದ್ರು ಪರವಾಗಿಲ್ಲ ನಮಗೆ ಜಾವಾ ಖರೀದಿ ಮಾಡಲೇಬೇಕು ಎನ್ನುತ್ತಿರುವುದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಗೆ ಅಚ್ಚರಿ ತರಿಸಿದೆ.

ಜಾವಾ ಪೆರಾಕ್ ಕಸ್ಟಮ್ ಬೈಕ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕು..!

ಇಷ್ಟೊಂದು ಕಾಯುವುದರಲ್ಲಿ ಅರ್ಥವಿದ್ಯಾ?

ಸಾಮಾನ್ಯವಾಗಿ ಈ ಪ್ರಶ್ನೆಯು ಬಹುತೇಕರಲ್ಲಿ ಮೂಡುತ್ತೆ. ಆದ್ರೆ ಜಾವಾ ಬೈಕ್ ಖರೀದಿಗಾಗಿ ಒಂಬತ್ತು ತಿಂಗಳಷ್ಟು ಕಾಯುವುದರಲ್ಲಿ ಅರ್ಥವಿದೆ ಎನ್ನಬಹುದು. ಕಾರಣ, ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಡಿಸೈನ್ ಮತ್ತು ಉತ್ತಮ ಪರ್ಫಾಮೆನ್ಸ್ ಹೊಂದಿರುವ ಜಾವಾ ಬೈಕ್ ಪ್ರೇಮಿಗಳ ಹಾಟ್ ಫೆವರಿಟ್ ಎನ್ನಬಹುದು.

More from DriveSpark

Article Published On: Tuesday, January 29, 2019, 19:47 [IST]
English summary
Jawa Motorcycles To Start Bookings For The Perak By September-End This Year. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+