ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

1960ರ ದಶಕದಲ್ಲಿ 2 ಸ್ಟ್ರೋಕ್ ಬೈಕ್‍ಗಳಲ್ಲಿ ತನ್ನ ಸಮಾರ್ಥ್ಯವನು ಸಾರುತ್ತ, ಇಂದಿಗೂ ಸಹ ತನ್ನ ವಿನ್ಯಾಸ ಮತ್ತು ಎಂಜಿನ್ ಬಗ್ಗೆ ಜನಪ್ರೀಯತೆಯನ್ನು ಪಡೆದಿರುವ ಜಾವಾ ಬೈಕ್‍ಗಳು ಕೆಲವು ಕಾರಣಾಂತರಗಳಿಂದ ಮಾರುಕಟ್ಟೆಯಿಂದ ಹೊರ ಹೋಗಬೇಕಾಯಿತು. ಆದ್ರೆ ಹೊಸ ಅಪ್ಡೆಟ್ ಮತ್ತು ಹೊಸ ವಿನ್ಯಾಸಗಳೊಂದಿಗೆ ಮತ್ತೆ ಮಾರುಕಟ್ಟೆಯಲ್ಲಿ ರೀ ಎಂಟ್ರಿ ಕೊಟ್ಟ ಜಾವಾ ಮತ್ತು ಜಾವಾ 42 ಬೈ‍ಕ್‍ಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಜಾವಾ ಬೈಕ್‍ಗಳನ್ನು 1973ರಲ್ಲಿ ಯಜ್ಡಿ ಬೈಕ್‍ಗಳಾಗಿ ಪರಿವರ್ತನೆಗೊಂಡು ದಶಕಗಳವರೆಗೆ 2 ಸ್ಟ್ರೋಕ್ ಎಂಜಿನ್ ಆಧಾರಿತ ದ್ವಿಚಕ್ರ ವಾಹನ ಚಾಲಕರ ಫೇವರೇಟ್ ಆಗಿದ್ದವು, ಆದರೆ ಹೊಸ ನಿಯಮಾವಳಿಗಳ ಹಂತಗಳನ್ನು ದಾಟದಿರುವ ಕಾರಣ ಈ ಬೈಕ್‍ಗಳ ಮಾರಾಟಗಳನ್ನು ಸ್ಥಗಿತಗೊಳಿಸಬೇಕಾಯಿತು. ಹಾಗಾದರೆ ಈ ಲೇಖನದಲ್ಲಿ ಜಾವಾ ಸೇರಿದಂತೆ ಯೆಜ್ಡಿ ಹಾಗು ಮಾರುಕಟ್ಟೆಯಲ್ಲಿ ಮರೆಯಾಗಿ ಈಗ ಕೇವಲ ನೆನಪಾಗಿ ಉಳಿದ 2 ಸ್ಟ್ರೋಕ್ ಬೈಕ್‍ಗಳ ಬಗ್ಗೆ ಮಾಹಿತಿಯನ್ನು ತಿಳಿಯಿರಿ.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಜಾವಾ 250 ಟೈಪ್ A

ಭಾರತದಲ್ಲಿ ಮಾರಾಟವಾದ ಜಾವಾ ಬೈಕ್‍ಗಳ ಪೈಕಿ ಮೊದಲನೆಯದಾಗಿ ಟೈಪ್ 353/4 ಹೆಚ್ಚಾಗಿ ಜನಪ್ರೀಯತೆಯನ್ನು ಪಡೆದುಕೊಂಡಿತ್ತು. ಈ ಬೈಕ್ ಕ್ಲಾಸಿಕ್ ಶೈಲಿಯ ವಿನ್ಯಾಸವನ್ನು ಪದೆದುಕೊಂಡಿದ್ದು, 249ಸಿಸಿ 2 ಸ್ಟ್ರೋಕ್, ಏರ್ ಕೂಲ್ದ್ ಎಂಜಿನ್ ಸಹಾಯದಿಂದ 12 ಬಿಹೆಚ್‍ಪಿ ಹಾರ್ಸ್‍ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ರೋಡ್‍ಕಿಂಗ್

1990ರ ದಶಕದಲ್ಲಿ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳಿಗೆ ಈ ಬೈಕ್ ಪೈಪೋಟಿ ನೀಡುತಿತ್ತು. ಈ ಬೈಕ್ 248.5 ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 16 ಬಿಹೆಚ್‍ಪಿ ಮತ್ತು 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿತ್ತು. ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳಿಗೆ ಹೋಲಿಸಿದರೆ ಈ ಬೈಕ್ ವೇಗದ ಆಕ್ಸಿಲರೇಟರ್ ಮತ್ತು 140 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ಆಯಿಲ್‍ಕಿಂಗ್

ಹೆಸರುಗೆ ತಕಕ್ ಹಾಗೆಯೆ ಈ ಬೈಕ್ ಆಯಿಲ್ ಪಂಪ್ ಅನ್ನು ಆಧರಿಸಿತ್ತು. ಏಕೆಂದರೆ ಈ ಬೈಕ್‍ನಲ್ಲಿನ ಆಯಿಲ್ ಟ್ಯಾಂಕ್‍ನಲ್ಲಿ ಆಯಿಲ್ ಇಲ್ಲವಾದರೂ ಸಹ ಈ ಬೈಕ್ ಅನ್ನು ಚಲಾಯಿಸಬಹುದಾಗಿತ್ತು. ಜಾವಾ ಆಯಿಲ್‍ಕಿಂಗ್ ಬೈಕ್ 250ಸಿಸಿ ಎಂಜಿನ್ ಸಹಾಯದಿಂದ 16 ಬಿಹೆಚ್‍ಪಿ ಮತ್ತು 24ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ಮೊನಾರ್ಕ್

ಯಜ್ಡಿ ರೋಡ್‍ಕಿಂಗ್ ಬೈಕ್‍ ಎಂಜಿನ್‍ನಿಂದ ಆಧಾರಿತವಾಗಿದ್ದ ಮೊನಾರ್ಕ್ ಬೈಕ್‍ಗಳು ರೈಡರ್‍‍ಗಳ ಫೇವರೇಟ್ ಆಗಿತ್ತು. ಏಕೆಂದರೆ ಇದರಲ್ಲಿನ ಚಾಸಿಸ್ ಮತ್ತು ಪರ್ಫಾರ್ಮೆನ್ಸ್ ರೈಡರ್‍‍ಗಳನ್ನು ಆಕರ್ಷಿಸಿತ್ತು. ಈ ಬೈಕ್ 16 ಬಿಹೆಚ್‍ಪಿ ಮತ್ತು 24 ಎನ್ಎಂ ಟಾರ್ಕ್ ಅನುನ್ ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು ಹಾಗು ಈ ಬೈಕ್ ಕೇವಲ 136 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ಕ್ಲಾಸಿಕ್

ಯಜ್ಡಿ ಕ್ಲಾಸಿಕ್ ಬೈಕ್ ಕೂಡಾ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತಿತ್ತು. ಹೆಸರಿನಂತೆಯೆ ಕ್ಲಾಸಿಕ್ ಆಕರ್ಷಕವಾದ ವಿನ್ಯಾಸವನ್ನು ಪಡೆದ ಈ ಬೈಕ್ 'ಫೊರೆವರ್ ಬೈ, ಫೊರೆವರ್ ವ್ಯಾಲ್ಯೂ' ಎಂಬ ಸ್ಲೋಗನ್ ಅನ್ನು ಹೊಂದಿತ್ತು. ಈ ಬೈಕ್ 250ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 13 ಬಿಹೆಚ್‍ಪಿ ಮತ್ತು 20ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ಕ್ಲಾಸಿಕ್ ಸಿಎಲ್-II

ಜಾವಾ ರೋಡ್‍ಕಿಂಗ್ ಬೈಕ್‍ಗಿಂತಲೂ ಹೆಚ್ಚಿನ ಬದಾವಣೆಗಳೊಂದಿಗೆ ಬಂದ ಯಜ್ಡಿ ಕ್ಲಾಸಿಕ್ ಸಿಎಲ್-II ಬೈಕ್ 248.5 ಸಿಸಿ ಎಂಜಿನ್ ಸಹಾಯದಿಂದ 13 ಬಿಹೆಚ್‍ಪಿ ಮತ್ತು 20ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದದ್ದು, 131 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿತ್ತು. ಹಾಗೆಯೆ ಈ ಬೈಕ್ ಗಂಟೆಗೆ 110 ಕಿಲೋಮೀಟರ್‍‍ನ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಹೊಂದಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ 175

ಯೆಜ್ಡಿ 175 ಬೈಕ್ ಹೆಸರಿಗೆ ತಕ್ಕ ಹಾಗೆ 175ಸಿಸಿ ಸಿಂಗಲ್ ಸಿಲೆಂಡರ್ 2 ಸ್ಟ್ರೋಕ್ ಎಂಜಿನ್ ಸಹಾಯದಿಂದ 9.5 ಬಿಹೆಚ್‍ಪಿ ಮತ್ತು 14.27ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಗಂಟೆಗೆ 95 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಹೊಂದಿತ್ತು. ಹಾಗೆಯೆ ಚಾಲನೆಯ ವೇಳೆ ಕಡಿಮೆ ತೂಕ ಮತ್ತು ಆರಾಕದಾಯಕಾರಿಯಾದ ಚಾಲನ ಅನುಭವವನ್ನು ನೀಡುತ್ತಿತ್ತಂತೆ ಈ ಬೈಕ್.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ 60

ಯೆಜ್ಡಿ 60 ಬೈಕ್ ಅನ್ನು ಪ್ರತ್ಯೆಕವಗಿ ಯುವ ಸಮುದಾಯಕ್ಕಾಗಿಯೇ ವಿನ್ಯಾಸ ಮಾಡಲಾಗಿದ್ದು, ಅವರ ಅಭಿರುಚಿಗೆ ತಕ್ಕ ಹಾಗೆ ತಯಾರು ಮಾಡಲಾಗಿತ್ತು. ಈ ಮಿನಿ ಬೈಕ್ ಜಾವಾ 50 ಬೈಕಿನ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದು, 60ಸಿಸಿ 2 ಸ್ಟ್ರೋಕ್, ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 3.6 ಬಿಹೆಚ್‍ಪಿ ಸಾಮರ್ಥ್ಯವನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು ಕೇವಲ 3 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ 350

ರಾಜ್‍ದೂತ್ ಎಂದು ಕರೆಯಲ್ಪಡುತ್ತಿದ್ದ ಯಮಹಾ ಆರ್‍‍ಡಿ 350 ಬೈಕ್‍ಗಳಿಗೆ ಪೈಪೋಟಿಯಾಗಿ ಯೆಜ್ಡಿ 350 ಬೈಕ್ ಅನ್ನು ಬಿಡುಗಡೆ ಮಾಡಲಾಗಿತ್ತು. ಸಣ್ಣ ಗಾತ್ರದ ಈ ಬೈಕ್ 2 ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದ್ದು, ಯಮಹಾ ಬೈಕ್‍ಗಿಂತಲೂ ಕೇವಲ ಬೆಲೆಯಲ್ಲಿ ಮಾತ್ರ ಪೈಪೋಟಿಯನ್ನು ನೀಡುತ್ತಿತ್ತು.

ಮಾರುಕಟ್ಟೆಯಿಂದ ಕಣ್ಮರೆಯಾದ ಜನಪ್ರಿಯ ಜಾವಾ ಮತ್ತು ಯಜ್ಡಿ ಬೈಕ್‍ಗಳಿವು

ಯಜ್ಡಿ ಡೀಲಕ್ಸ್

ಕೊನೆಯದಾಗಿ ಯಜ್ಡಿ ಡೀಲಕ್ಸ್ ಬೈಕ್‍ಗಳು ಜಾವಾ ಕ್ಲಾಸಿಕ್ ಹಾಗು ರೋಡ್‍ಕಿಂಗ್ ಮಾಡಲ್‍ಗಳಿಂದ ಪ್ರೇರೇಪಿತವಾಗಿದ್ದು, ಎಂಜಿನ್, ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು ಸಹ ಆ ಬೈಕ್‍ಗಳಿಂದಲೇ ಆಧರಿಸಲಾಗಿತ್ತು. ಈ ಬೈಕ್ 248.5 ಸಿಸಿ ಎಂಜಿನ್ ಸಹಾಯದಿಂದ 13 ಬಿಹೆಚ್‍ಪಿ ಮತ್ತು 20ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ತೂಕದಲ್ಲಿ 131 ಕಿಲೋಗ್ರಾಂ ಅನ್ನು ಹೊಂದಿತ್ತು.

Source: Cartoq

More from DriveSpark

Article Published On: Monday, May 20, 2019, 12:30 [IST]
English summary
Jawa Yezdi Top 10 Forgotten Motorcycles In India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+