ನಿಂಜಾ 300 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಕವಾಸಕಿ
ಕವಾಸಕಿ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ನಿಂಜಾ 300 ಬೈಕಿನ ಉತ್ಪಾದನೆ ಹಾಗೂ ಮಾರಾಟವನ್ನು ಸ್ಥಗಿತಗೊಳಿಸಿದೆ. ಬೈಕ್‍ವಾಲೆ ವರದಿಗಳ ಪ್ರಕಾರ, ಈ ಬೈಕಿನ ಉತ್ಪಾದನೆಯನ್ನು ಅಕ್ಟೋಬರ್ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ.

ಕೆಲವು ಬೈಕ್‍ಗಳು ಮಾರಾಟವಾಗದೇ ಡೀಲರ್‍ಗಳ ಬಳಿ ಉಳಿದಿದ್ದು, ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ನಿಂಜಾ 300 ಬೈಕ್, ಕವಾಸಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದ ಎಂಟ್ರಿ ಲೆವೆಲ್ ಬೈಕ್ ಆಗಿದೆ.

ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.98 ಲಕ್ಷಗಳಾಗಿದೆ. ಕವಾಸಕಿ ಕಂಪನಿಯು ಈ ಬೈಕಿನ ಜೊತೆಗೆ ನಿಂಜಾ 400 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕಿನ ಬೆಲೆಯು ರೂ.2 ಲಕ್ಷಗಳಾಗಿತ್ತು.

ಕವಾಸಕಿ ಕಂಪನಿಯು ನಿಂಜಾ 300 ಬೈಕ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸುವುದೇ ಇಲ್ಲವೇ ಎಂಬುದನ್ನು ಇನ್ನೂ ಖಚಿತ ಪಡಿಸಿಲ್ಲ. ಮಾರಾಟವಾಗುತ್ತಿದ್ದ ಸಮಯದಲ್ಲಿ ಈ ಬೈಕ್ ಹೆಚ್ಚು ಮಾರಾಟವಾಗುತ್ತಿದ್ದ ಕವಾಸಕಿ ಕಂಪನಿಯ ಬೈಕ್ ಆಗಿತ್ತು.

ಈ ಬೈಕ್ ಅನ್ನು ಸ್ಥಗಿತಗೊಳಿಸುವುದು ಕವಾಸಕಿ ಕಂಪನಿಯ ಮಾರಾಟಕ್ಕೆ ಹೆಚ್ಚು ಹೊಡೆತ ನೀಡಲಿದೆ. ಕವಾಸಕಿ 300 ಬೈಕಿನಲ್ಲಿ 296 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 39 ಬಿಹೆಚ್‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಈ ಬೈಕಿನಲ್ಲಿ ಅಸಿಸ್ಟ್, ಸ್ಲಿಪರ್ ಕ್ಲಚ್, ಹಿಂಭಾಗದ ಸಸ್ಪೆಂಷನ್‍ಗಳಿಗಾಗಿ ಅಡ್ಜಸ್ಟಬಲ್ ಮೊನೊ ಶಾಕ್, ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್, ಸ್ಟಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ಹಾಗೂ ಆಧುನಿಕ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ಗಳನ್ನು ನೀಡಲಾಗುತ್ತದೆ.

ಕವಾಸಕಿ 400 ಬೈಕಿನಲ್ಲಿ 399 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಯುನಿಟ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 47.5 ಬಿಹೆಚ್‍ಪಿ ಪವರ್ ಹಾಗೂ 38 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ನಿಂಜಾ 400 ಬೈಕಿನಲ್ಲಿ ದೊಡ್ಡ ಗಾತ್ರದ ಸಸ್ಪೆಂಷನ್, ಬ್ರೇಕ್ ಜೊತೆಗೆ ಹಲವಾರು ಫೀಚರ್‍ಗಳಿವೆ. ಕವಾಸಕಿ ನಿಂಜಾ 400 ಬೈಕಿನಲ್ಲಿ ಝಡ್‍ಎಕ್ಸ್ 10 ಆರ್ ಬೈಕಿನಲ್ಲಿರುವಂತಹ ಆಧುನಿಕ ವಿನ್ಯಾಸಗಳಿವೆ. ಈ ಬೈಕ್ ಅನ್ನು ಎಬೊನಿ ಬ್ಲಾಕ್ ಹಾಗೂ ಲೈಮ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕವಾಸಕಿ ಕಂಪನಿಯು ಇತ್ತೀಚಿಗೆ ಭಾರತದ ಮೊಟ್ಟ ಮೊದಲ ಪ್ರೀಮಿಯಂ ಬಿಎಸ್ ಸೂಪರ್ ನೇಕೆಡ್ ಬೈಕ್ ಆದ ಝಡ್900 ಅನ್ನು ಬಿಡುಗಡೆಗೊಳಿಸಿತ್ತು. ಬಿಎಸ್ 6 ಎಂಜಿನ್ ಹೊಂದಿರುವ ಝಡ್900 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.50 ಲಕ್ಷಗಳಾಗಿದೆ.
MOST READ: ವಾಹನ ಡೀಲರ್‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ನಿಂಜಾ 300 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕವಾಸಕಿ ಕಂಪನಿಯ ಬೈಕ್ ಆಗಿದೆ. ಈ ಬೈಕ್ ಅನ್ನು ಭಾರತದಲ್ಲಿಯೇ ನಿರ್ಮಿಸಲಾಗುತ್ತಿದ್ದ ಕಾರಣಕ್ಕೆ ಬೆಲೆಯನ್ನು ಸ್ಪರ್ಧಾತ್ಮಕವಾಗಿಡಲಾಗಿತ್ತು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍ಆರ್ 310, ಕೆಟಿಎಂ ಆರ್‍ಸಿ 390 ಹಾಗೂ ಯಮಹಾ ಆರ್ 3 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.
Source: BikeWale


Click it and Unblock the Notifications