ಬಿಡುಗಡೆಗೊಂಡ ಎಬಿಎಸ್ ಆಧಾರಿತ ಕೆಟಿಎಂ 250 ಡ್ಯೂಕ್ ಬೈಕ್
ಕೆಟಿಎಂ ಇಂಡಿಯಾ ಸಂಸ್ಥೆಯು ತಮ್ಮ 250 ಡ್ಯೂಕ್ ಬೈಕಿಗೆ ಹೊಸದಾಗಿ ಎಬಿಎಸ್ ಟೆಕ್ನಾಲಜಿಯನ್ನು ನೀಡಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.94 ಲಕ್ಷಕ್ಕೆ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಬಿಎಸ್ ರಹಿತ 250 ಡ್ಯೂಕ್ ಬೈಕ್‍ಗಳು ರೂ.1.80 ಲಕ್ಷದ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ.

ಕೆಟಿಎಂ 250 ಡ್ಯೂಕ್ ಮಾತ್ರವೇ ಸಂಸ್ಥೆಯಲ್ಲಿನ ಎಬಿಎಸ್ ರಹಿತ ಬೈಕ್ ಆಗಿ ಸ್ಥಾನವನ್ನು ಪಡೆದುಕೊಂಡಿದ್ದು, ಇದೀಗ ಸಂಸ್ಥೆಯು ಈ ಬೈಕಿಗು ಸಹ ಎಬಿಎಸ್ ಅನು ಅಳವಡಿಸಿ ತನ್ನ ಉತ್ಪಾದನೆಗಳಲ್ಲಿರುವ ಎಲ್ಲಾ ಬೈಕ್‍ಗಳಿಗು ಸಹ ಬರಲಿರುವ ಸುರಕ್ಷಾ ಕಾಯ್ದೆಯ ಅನುಸಾರ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. 125 ಡ್ಯೂಕ್ ಬೈಕಿಗೆ ಸಿಂಗಲ್ ಚಾನಲ್ ಎಬಿಎಸ್, 250 ಡ್ಯೂಕ್ ಹಾಗು 390 ಡ್ಯೂಕ್‍ಗು ಸಹ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ನೀಡಲಾಗಿದೆ.

ಕೆಟಿಎಂ 250 ಡ್ಯೂಕ್ ಬೈಕಿನ ಎಬಿಎಸ್ ರಹಿತ ಮತ್ತು ಎಬಿಎಸ್ ಆಧಾರಿತ ಮಾಡಲ್‍ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಏಪ್ರಿಲ್ 1, 2019 ರಿಂದ ಹೊಸ ಸುರಕ್ಷಾ ಕಾಯ್ದೆಯು ಬಂದ ನಂತರ ಎಬಿಎಸ್ ರಹಿತ 250 ಡ್ಯೂಕ್ ಬೈಕ್‍ಗಳ ಮಾರಾಟವು ಸ್ಥಗಿತಗೊಳ್ಳಲಿದೆ.

ಕೆಟಿಎಂ 250 ಡ್ಯೂಕ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಈ ಬೈಕ್ ತನ್ನದೇ ಸಂಸ್ಥೆಯ ಮತ್ತೊಂದು ಬೈಕ್ ಆದ 390 ಡ್ಯೂಕ್ ಬೈಕಿನ ವಿನ್ಯಾಸವನ್ನೆ ಆಧರಿಸಲಾಗಿದ್ದು, ಎಲ್ಇಡಿ ಡಿಆರ್‍ಎಲ್ ಇಂಟಿಗ್ರೇಟೆಡ್ ಹಾಲೊಜೆನ್ ಹೆಡ್‍ಲ್ಯಾಂಪ್ ಯೂನಿಟ್, ಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ಪ್ಲಿಟ್ ಸೀಟ್ ಅನ್ನು ಪಡೆದುಕೊಂಡಿದೆ.

ಹೊಸದಾಗಿ ಎಬಿಎಸ್ ಅಳವಡಿಕೆಯನ್ನು ಬಿಟ್ಟರೆ, ಈ ಬೈಕಿನ ವಿನ್ಯಾಸದಲ್ಲಾಗಲಿ ಅಥವಾ ತಾಂತ್ರಿಕತೆಯಲ್ಲಾಗಲಿ ಯಾವುದೆ ಬದಲಾವಣೆಗಳನ್ನು ನೀಡಲಿಲ್ಲ. ಕೆಟಿಎಂ 250 ಡ್ಯೂಕ್ ಬೈಕ್ 249ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 30 ಬಿಹೆಚ್‍ಪಿ ಮತ್ತು 24ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಬೈಕಿನ ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 43ಎಂಎಂ ಅಪ್‍ಸೈಡ್ ಡೌನ್ ಫ್ರಂಟ್ ಪೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ನೀಡಲಾಗಿದೆ. ಬೆಕಿಂಗ್ ವಿಚಾರದ ಸಲುವಾಗಿ ಮುಂಭಾಗದಲ್ಲಿ 300ಎಂಎಂ ಹಾಗು ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಕೆಟಿಎಂ ಸಂಸ್ಥೆಯು ಇದೀಗ ತಾವು ಬಿಡುಗಡೆಗೊಳಿಸಲಿರುವ 390 ಅಡ್ವೆಂಚರ್ ಬೈಕಿನ ಉತ್ಪಾದನೆಯಲ್ಲಿ ತೊಡಗಿದ್ದು, ಈಗಾಗಲೆ ಎಂಜಿನ್ ಕಾರ್ಯಕ್ಷಮತೆಯನ್ನು ಪರಿಶೀಲಿಸುವಾಗ ಸ್ಪಾಟ್ ಟೆಸ್ಟಿಂಗ್‍ನ ವೇಳೆ ಕಾಣಿಸಿಕೊಂಡಿದೆ. ಇನ್ನು ಈ ಬೈಕಿನ ಬಿಡುಗಡೆ ಅವಧಿಯ ಮಾಹಿತಿ ಲಭ್ಯವಾಗಿಲ್ಲವಾದರೂ, ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೊಸ ಸುರಕ್ಷಾ ಕಾಯ್ದೆಯು ಜಾರಿಯಾಗುವ ಮುನ್ನವೇ ಕೆಟಿಎಂ ಸಂಸ್ಥೆಯು ತಮ್ಮೆಲ್ಲಾ ಉತ್ಪಾದನೆಗಳಿಗೆ ಎಬಿಎಸ್ ಟೆಕ್ನಾಲಜಿಯನ್ನು ನೀಡಲಾಗಿದ್ದು, ಇದೀಗ 250 ಡ್ಯೂಕ್ ಬೈಕಿಗು ಸಹ ಅಳವಡಿಸಲಾಗಿದೆ. ಈ ನಿಟ್ಟಿನಲಿ ಎಬಿಎಸ್ ಆಧಾರಿತ ಕೆಟಿಎಂ 250 ಡ್ಯೂಕ್ ಬೈಕ್ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್200, ಟಿವಿಎಸ್ ಅಪಾಚೆ ಆರ್‍ಟಿಆರ್ 200 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








