ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಡ್ಯೂಕ್ 790 ಸೂಪರ್ ಬೈಕ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಉತ್ಸುಕವಾಗಿರುವ ಕೆಟಿಎಂ ಸಂಸ್ಥೆಯು 790 ಅಡ್ವೆಂಚರ್ ಬೈಕ್ ಬಿಡುಗಡೆ ಮಾಹಿತಿಯನ್ನು ಬಹಿರಂಗಪಡಿಸಿದ್ದು, 2020ರ ಕೊನೆಯಲ್ಲಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಪರ್ಫಾಮೆನ್ಸ್ ಬೈಕ್ ಪ್ರಿಯರ ಬೇಡಿಕೆಯೆಂತೆ ಭಾರತದಲ್ಲಿ ಸೂಪರ್ ಬೈಕ್ ಮಾರಾಟವನ್ನು ಹೆಚ್ಚಿಸುವತ್ತ ಮಹತ್ವದ ಯೋಜನೆ ರೂಪಿಸುತ್ತಿರುವ ಕೆಟಿಎಂ ಸಂಸ್ಥೆಯು ಕಳೆದ ತಿಂಗಳು ಡ್ಯೂಕ್ 790 ಬಿಡುಗಡೆಗೊಳಿಸಿದ್ದು, ಇದೀಗ ಆಫ್ ರೋಡ್ ಬೈಕ್ ಮಾದರಿಗಳಾದ ಅಡ್ವೆಂಚರ್ 390 ಮತ್ತು ಅಡ್ವೆಂಚರ್ 790 ಬೈಕ್‌ಗಳನ್ನು ಪ್ರದರ್ಶನ ಮಾಡಿ ಬಿಡುಗಡೆಗೆ ಸಿದ್ದವಾಗುತ್ತಿದೆ. 2020ರ ಜನವರಿ ಕೊನೆಯಲ್ಲಿ ಅಡ್ವೆಂಚರ್ 390 ಬಿಡುಗಡೆಯಾಗಲಿದ್ದರೆ ಅಗಸ್ಟ್ ಅಥವಾ ಸಪ್ಟೆಂಬರ್ ಅವಧಿಯಲ್ಲಿ 790 ಅಡ್ವೆಂಚರ್ ಮಾದರಿಯು ಖರೀದಿಗೆ ಲಭ್ಯವಾಗಲಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್‌ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಗುಣವಾಗಿ ಕೆಟಿಎಂ ಸಂಸ್ಥೆಯು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಅಭಿವೃದ್ದಿಪಡಿಸಿದ್ದು, ಇನ್ನುಳಿದ ಬೈಕ್ ಮಾದರಿಗಳು ಸಹ ಶೀಘ್ರದಲ್ಲೇ ಹೊಸ ಎಂಜಿನ್ ಪಡೆದುಕೊಳ್ಳಲಿವೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

790 ಅಡ್ವೆಂಚರ್ ಬೈಕ್ ಮಾದರಿಯು 799ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, ಅಡ್ವೆಂಚರ್ ಟೂರರ್ ಫರ್ಪಾಮೆನ್ಸ್ ಮಾದರಿಯಾಗಿ 94-ಬಿಎಚ್‌ಪಿ ಮತ್ತು 88-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸ್ಟ್ರೀಟ್, ಆಫ್ ರೋಡ್, ರೈನ್ ಮತ್ತು ರ‍್ಯಾಲಿ ಎನ್ನುವ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಆಫ್ ರೋಡ್ ಮಾದರಿಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿರುವ 790 ಅಡ್ವೆಂಚರ್ ಮಾದರಿಯು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯ ಬೈಕ್ ಆವೃತ್ತಿಯಾಗಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ಬೈಕಿನಲ್ಲಿ ಎಲ್ಇಡಿ ಡ್ಯುಯಲ್ ಹೆಡ್‌ಲ್ಯಾಂಪ್, 43-ಎಂಎಂ ನಾನ್ ಅಡ್ಜೆಸ್ಟ್‌ಬಲ್ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಮುಂಭಾಗದಲ್ಲಿ ಪ್ರಿಲೋಡ್ ಅಡ್ಜೆಸ್ಟ್‌ಬಲ್ ಮೊನೋಶಾರ್ಕ್ ಸಸ್ಫೆಷನ್ ಹೊಂದಿದ್ದು, ರೈಡಿಂಗ್ ಸುರಕ್ಷತೆಗಾಗಿ ಟ್ರಾಕ್ಷನ್ ಕಂಟ್ರೊಲ್, ಕಾರ್ನರ್ ಎಬಿಎಸ್, ಮಲ್ಟಿ ಇನ್‌ಫಾರ್ಮೆಷನ್ ಟಿಎಫ್‌ಟಿ ಸ್ಕ್ರೀನ್ ಫೀಚರ್ಸ್‌ಗಳನ್ನು ಹೊಂದಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಹಾಗೆಯೇ ಆಫ್ ರೋಡ್ ರೈಡಿಂಗ್‌ಗಾಗಿ ಆರಾಮದಾಯಕ ಆಸನ, 15 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ವೀಂಡ್ ಸ್ಕ್ರೀನ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯವು ಹೊಸ ಬೈಕ್ ಬಲಿಷ್ಠತೆಗೆ ಪೂರಕವಾಗಿದ್ದು, ಬರೋಬ್ಬರಿ 189 ಕೆಜಿ ತೂಕ ಪಡೆದಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಅಡ್ವೆಂಚರ್ ಟೂರ್‌ಗೆ ಪೂರಕವಾಗಿ ಗರಿಷ್ಠ ಫೀಚರ್ಸ್‌ಗಳನ್ನು ಹೊಂದಿರುವುದು ಬೈಕ್ ಬೆಲೆ ಹೆಚ್ಚಳ ಸಾಧ್ಯತೆಗಳಿದ್ದು, ಡ್ಯೂಕ್ 790 ಬೈಕ್ ಮಾದರಿಗಿಂತಲೂ ದುಬಾರಿ ಬೆಲೆ ಪಡೆಯಲಿರುವ 790 ಅಡ್ವೆಂಚರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ರೂ.11 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನು ಕೆಟಿಎಂ ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್ ಸಹ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 1290 ಸೂಪರ್ ಅಡ್ವೆಂಚರ್ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹಿಮಾಲಯನ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಮಾರಾಟಗೊಳ್ಳಲಿದೆ.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

390 ಅಡ್ವೆಂಚರ್ ಬೈಕ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 373-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 44-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಕೆಟಿಎಂ 790 ಅಡ್ವೆಂಚರ್ ಬಿಡುಗಡೆಯ ಮಾಹಿತಿ ಬಹಿರಂಗ

ದೆಹಲಿ ಎಕ್ಸ್‌ಶೋರಂ ಪ್ರಕಾರ 390 ಅಡ್ವೆಂಚರ್ ಮಾದರಿಯು ರೂ. 2.30 ಲಕ್ಷದಿಂದ ರೂ. 2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳ ಪ್ರೇರಣೆಯಿಂದಾಗಿ ಈ ಬೈಕ್ ಕೂಡಾ ತುಸು ದುಬಾರಿ ಎನ್ನಿಸಲಿದೆ.

More from DriveSpark

Article Published On: Sunday, December 29, 2019, 11:00 [IST]
English summary
KTM 790 Adventure India Launch Confirmed For Next Year. Read more in Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+