ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸಿದ್ದು, ಇದೀಗ ಮತ್ತೊಮ್ಮೆ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲು ಅಧಿಕ ಸಾಮರ್ಥ್ಯದ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಹೌದು, ಕೆಟಿಎಂ ಸಂಸ್ಥೆಯು ಶೀಘ್ರದಲ್ಲೆ ಟ್ವಿನ್ ಸಿಲೆಂಡರ್ 500ಸಿಸಿ ಬೈಕ್ ಅನ್ನು ಭಾರತದಲ್ಲಿ ಪರಚಿಯಿಸಲಿದ್ದು, ಈ ಮೋಟರ್‍‍ಸೈಕಲ್ ಅನ್ನು ಕುದ್ದಾಗಿ ನಮ್ಮ ಭಾರತದಲ್ಲಿಯೆ ನಿರ್ಮಿಸಲಾಗುತ್ತದೆ ಎನ್ನಲಾಗಿದೆ. ಅಷ್ಟೆ ಅಲ್ಲದೇ ಈ ಬೈಕ್ ದೇಶಿಯವಾಗಿ ಉತ್ಪಾದನೆಯಾದಲ್ಲಿ ಬೈಕಿನ ಬೆಲೆ ಕೂಡ ಸುಮಾರು ರೂ.3.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಭಾರತದಲ್ಲಿ 500ಸಿಸಿ ಟ್ವಿನ್ ಸಿಲೆಂಡರ್ ಬೈಕ್ ಅನ್ನು ಪರಿಚಯಿಸುವುದರ ಬಗ್ಗೆ ಕೆಟಿಎಂ ಸಂಸ್ಥೆಯ ಸಿಇಒ ಆದ ಸ್ಟೀಫನ್ ಪಿಯರೆರ್ ಅವರು ಖಚಿತಪಡಿಸಿದ್ದು, ಹೊಸ ಬೈಕಿನ ನಿರ್ಮಾಣ ಮತ್ತು ಬಿಡುಗಡೆಯ ಬಗ್ಗೆ ಇನ್ನು ಚರ್ಚಿಸಲಾಗುತ್ತಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಬಜಾಜ್ ಸಂಸ್ಥೆಯು ಈಗಾಗಲೆ ಮಾರುಕಟ್ಟೆಯಲ್ಲಿ ಕೆಟಿಎಂ ಸಂಸ್ಥೆಯ 125, 200, 250 ಮತ್ತು 390ಸಿಸಿ ಸಾಮರ್ಥ್ಯದ ಬೈಕ್‍ಗಳನ್ನು ಮಾರಾಟ ಮಾಡುತಿದ್ದು, 390 ಅಡ್ವೆಂಚರ್ ಬೈಕ್ ಅನ್ನು ಸಹ ಶೀಘ್ರದಲ್ಲೆ ಬಿಡುಗಡೆಗೊಳಿಸಲಿದೆ. ಇದೀಗ 500ಸಿಸಿ ಸಾಮರ್ಥ್ಯದ ಬೈಕ್ ಅನ್ನು ಪರಿಚಯಿಸುವುದು ಕೆಟಿಎಂ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಕೆಟಿಎಂ 500ಸಿಸಿ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ, ಈ ಬೈಕ್ ಕೆಟಿಎಂ 390 ಮತ್ತು ಹೊಸ 790 ಬೈಕಿನ ವಿನ್ಯಾಸವನ್ನು ಆದರಿಸಲಿದ್ದು, ಟ್ರೆಲ್ಲಿಸ್ ಫ್ರೇಮ್, ಡಬ್ಲ್ಯೂಪಿ ಸಸ್ಪೆಂಷನ್ ಸಿಸ್ತಂ, ಇನ್ವರ್ಟೆಡ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಿಂಭಾಗದಲ್ಲಿ ಮೊನೊಶಾಕ್ ಅಬ್ಸಾರ್ಬರ್ ಅನ್ನು ನೀಡಲಿರಬಹುದಾಗಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಇದರ ಜೊತೆಗೆ 500ಸಿಸಿ ಟ್ವಿನ್ ಸಿಲೆಂಡರ್ ಬೈಕಿನಲ್ಲಿ ಅಲಾಯ್ ವ್ಹೀಲ್ಸ್, ಪೂರ್ಣ ಇನ್ಸ್ಟ್ರೂಮೆಂಟ್ ಕಂಸೋಲ್, ಸ್ಟ್ಯಾಂಡರ್ಡ್ ಆಗಿ ಎಬಿಎಸ್, ಮಧ್ಯಾಕಾರದ ಟೈರ್‍‍ಗಳು, ಆಕ್ರಮಣಕಾರಿ ವಿನ್ಯಾಸ, ಹೆಚ್ಚಿನ ಗ್ರಾಫಿಕ್ಸ್ ಮತ್ತು ಇನ್ನಿತರೆ ಆಕರ್ಷಕ ಉಪಕರಣಗಳನ್ನು ಪಡೆದು, ಯುವಸಮುದಾಯವನ್ನು ಸೇಳೆಯುವ ರೀರಿಯಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಕೆಟಿಎಂ ಸಂಸ್ಥೆಯು ತಮ್ಮ ಹೊಸ 500ಸಿಸಿ ಡ್ಯೂಕ್ ಬೈಕಿಗೆ ಡಬಲ್ ಫ್ರಂಟ್ ಡಿಸ್ಕ್ ಬ್ರೇಕ್‍ಗಳನ್ನು ನೀಡಬೇಕೆಂದು ಆಶಿಸುತ್ತಿದ್ದು, ಜೊತೆಗೆ ವಿವಿದ ರೈಡಿಂಗ್ ಮೋಡ್‍ಗಳನ್ನು ಸಹ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಎಂಜಿನ್ ಸಾಮರ್ಥ್ಯ

ಕೆಟಿಎಂ ಸಂಸ್ಥೆಯು ಪರಚಯಿಸಲಿರುವ ಡ್ಯೂಕ್ 500 ಬೈಕ್, ಸುಮಾರು 80ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿರಬಹುದಾಗಿದ್ದು, ಡ್ಯೂಕ್ 790 ಬೈಕ್ 105 ಬಿಹೆಚ್‍ಪಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇಷ್ಟೆ ಅಲ್ಲದೆ 500ಸಿಸಿ ಬೈಕ್ ಸ್ಲಿಪ್ಪರ್ ಅಸ್ಸಿಸ್ಟ್ ಕ್ಲಚ್ ಮತ್ತು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೇಯನ್ನು ಹೊಂದಿರಲಿದೆ.

ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಕೆಟಿಎಂ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಬೈಕ್ ಜಪಾನ್ ಮಾರುಕಟ್ಟೆಯಲ್ಲಿರುವ ಯಮಾಹಾ ಆರ್‍3 ಮತ್ತು ಕವಾಸಕಿ ನಿಂಜಾ 400 ಬೈಕ್‍ಗಳಿಗೆ ಪೈಪೋಟಿ ನೀಡಲಿದ್ದು, ಇನ್ನು 500ಸಿಸಿ ಟ್ವಿನ್ ಸೆಲೆಂಡರ್ ಬೈಕ್ ಮುಂದಿನ ವರ್ಷ ಇಟಾಲಿಯ ಮಿಲಾನ್‍ನಲ್ಲಿ ನಡೆಯಲಿರುವ ಇಐಸಿಎಂಎ ಮೇಳದಲ್ಲಿ ಬಹಿರಂಗಗೊಳ್ಳಲಿದೆ ಎನ್ನಲಾಗಿದೆ.

Source: speedweek

Article Published On: Monday, April 15, 2019, 8:54 [IST]
English summary
KTM & Bajaj Developing Brand New 500cc Twin-Cylinder Bike For India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+