ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಸಲು ಭರ್ಜರಿ ಆಫರ್
ಕೆಟಿಎಂ ಅಕ್ಟೋಬರ್ ತಿಂಗಳಿನಲ್ಲಿ 125 ಡ್ಯೂಕ್ ನೇಕೆಡ್ ಆವೃತ್ತಿಯ ಬೈಕ್‍ಗೆ ಆಕರ್ಷಕ ಹಣಕಾಸು ರಿಯಾಯಿತಿಯನ್ನು ನೀಡುತ್ತಿದೆ. ಶೇ.95 ರಷ್ಟು ಭಾರೀ ರಿಯಾಯಿತಿಯನ್ನು ಹೊಂದಿದ್ದು, ಕೇವಲ ರೂ.12,000 ಡೌನ್‍ಪೇಮೆಂಟ್ ಮತ್ತು ಕೇವಲ ರೂ.4,000 ಸುಲಭ ಮಾಸಿಕ ಕಂತುಗಳ(ಇಎಂಐ) ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಭಾರತದ ಎಲ್ಲಾ ಕೆಟಿಎಂ ಡೀಲರ್‍ಗಳ ಬಳಿ ಗ್ರಾಹಕರು ಹೊಸ ಆಫರ್ ಅನ್ನು ಪಡೆದುಕೊಳ್ಳಬಹುದು. ಈ ಹಬ್ಬದ ಸಮಯದಲ್ಲಿ ಮಾರಾಟವನ್ನು ಹೆಚ್ಚಿಸಲು ಕಂಪನಿಯ ಸಾಲಿನಿಂದ ಎಂಟ್ರಿ ಲೆವೆಲ್ ಬೈಕಿಗೆ ಆಕರ್ಷಕ ಆಫರ್ ಅನ್ನು ಘೋಷಿಸಿದೆ. ಕೆಟಿಎಂ 125 ಡ್ಯೂಕ್ ಮತ್ತು ಆರ್‍ಸಿ ಕಂಪನಿಗೆ ಪ್ರಮುಖ ಉತ್ತೇಜನ ನೀಡಿದ್ದು, 10 ತಿಂಗಳಲ್ಲಿ 50,000 ಯುನಿಟ್‍ಗಳ ಮಾರಾಟವಾಗಿವೆ.

ಆರ್ಸಿ 125 ಮತ್ತು 125 ಡ್ಯೂಕ್ ಒಂದು ತಿಂಗಳ ಹಿಂದೆ ಈ ಬೈಕಿಗಳ ಬೆಲೆಯಲ್ಲಿ ಸ್ವಲ್ಫ ಹೆಚ್ಚಿಸಿದ್ದರು. ಕೆಟಿಎಂ 125 ಡ್ಯೂಕ್ ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.32 ಲಕ್ಷ ಬೆಲೆ ಹೊಂದಿದೆ.

ಕೆಟಿಎಂ ಡ್ಯೂಕ್ 125 ಬೈಕ್ 124 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250 ಆರ್‍ಪಿಎಂನಲ್ಲಿ 14.5 ಬಿಎಚ್‍ಪಿ ಪವರ್ ಮತ್ತು 8,000 ಆರ್‍ಪಿಎಂನಲ್ಲಿ 12 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಕೆಟಿಎಂ ಡ್ಯೂಕ್ 125 ಮುಂಭಾಗದಲ್ಲಿ 43 ಎಂಎಂ ಅಪ್‍ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಬೈಕಿನ ಮುಂಭಾಗದ ಟಯರ್‍ನಲ್ಲಿ 300 ಎಂಎಂ ಡಿಸ್ಕ್ ಮತು ಹಿಂಭಾಗದ ಟಯರ್‍ನಲ್ಲಿ 230 ಎಂಎಂ ಯುನಿಟ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಡ್ಯೂಕ್ 125ನ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಡ್ಯೂಕ್ 125 ಚಾಸಿಸ್, ಸ್ವಿಂಗಾ ಆರ್ಮ್ ಮತ್ತು ಇತರ ಯುನಿಟ್‍ಗಳನ್ನು ಡ್ಯೂಕ್ ಸರಣಿಯ ಇತರ ಬೈಕ್‍ಗಳಿಂದ ಎರೆವಲು ಪಡೆಯಲಾಗಿದೆ. ಡ್ಯೂಕ್ 125 ಅನ್ನು ಕೆಟಿಎಂ ಭಾರತೀಯ ಸಾಲಿನಲ್ಲಿ ಆರ್‍ಸಿ 125 ಎಂಬ ಬೈಕ್ ಫೇರ್ಡ್ ಆವೃತಿಯಾಗಿವೆ. ಈ ಎರಡು ಬೈಕ್‍ಗಳು ಎಂಜಿನ್, ಸಸ್ಪೆಂಷನ್ ಮತ್ತು ಬ್ರೇಕ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳು ಒಂದೇ ರೀತಿಯಲ್ಲಿವೆ.

ಡ್ಯೂಕ್ 125 ಆರೇಂಜ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಸೀಟ್ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಸೀಟ್ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶವಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಕರ್ಷಕ ಬೆಲೆ, ಪರ್ಫಾಮೆನ್ಸ್ ವೈಶಿಷ್ಟ್ಯತೆಯನ್ನು ಹೊಂದಿರುವ ಡ್ಯೂಕ್ 125 ಮತ್ತು ಆರ್‌ಸಿ 125 ಬೈಕ್‌ಗಳು ಅತಿ ಕಡಿಮೆ ಅವಧಿಯಲ್ಲಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ, ಕಡಿಮೆ ಎಂಜಿನ್ ಹೊಂದಿದ್ದರೂ ಸಹ ಬೈಕ್ ಶೈಲಿ ಮತ್ತು ಎಂಜಿನ್ ಕಾರ್ಯಕ್ಷಮತೆಯೇ ಈ ಬೈಕ್‌ಗಳ ಪ್ರಮುಖ ಆಕರ್ಷಣೆಯಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕೆಟಿಎಂ ತನ್ನ ಎಂಟ್ರಿ ಲೆವೆಲ್ ಬೈಕ್‍ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಕಂಪನಿಯು 125 ಡ್ಯೂಕ್ ಅನ್ನು ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಭರ್ಜರಿ ಆಫರ್ ಅನ್ನು ಘೋಷಿಸಿದೆ. ಡ್ಯೂಕ್ ಹಬ್ಬದ ವೇಳೆಯಲ್ಲಿ ಹೆಚ್ಚು ಮಾರಾಟವಾಗಬಹುದು ಎಂದು ಕಂಪನಿ ನಿರೀಕ್ಷಿಸುತ್ತಿದೆ.


Click it and Unblock the Notifications