ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಕೆಟಿಎಂ ಸಂಸ್ಥೆಯು ತಮ್ಮ ಜನಪ್ರಿಯ ಕೆಟಿಎಂ 790 ಬೈಕಿನ ಅಡ್ವೆಂಚರ್ ಆರ್ ಮತ್ತು 790 ಅಡ್ವೆಂಚರ್ ಎಂಬ ಎರಡು ಮಾದರಿಗಳನ್ನು ಇಟಾಲಿಯ ಮಿಲಾನ್‍‍ನಲ್ಲಿ ನಡೆದ ಇಐಸಿಎಂಎ ಮೋಟಾರ್‍‍‍ಸೈಕಲ್ ಶೋನಲ್ಲಿ ಅನಾವರಣಗೊಳಿಸಿದ್ದು, ಇದೀಗ ಭಾರತದಲ್ಲಿ ಇದೇ ವರ್ಷದ ನವೆಂಬರ್ ಅಥವಾ ಡಿಸೆಂಬರ್‍‍ನಲ್ಲಿ ಬಿಡುಗಡೆಗೊಳಿಸುವುದಾಗಿ ಆಟೋಕಾರ್ ಇಂಡಿಯಾ ವರದಿಗಳು ತಿಳಿಸುತ್ತಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಲಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಈ ಬೈಕಿನಲ್ಲಿ ಹೊಸದಾಗಿ ಲಗೇಜ್ ಬ್ಯಾಗ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಕಾಣಬಹುದಾಗಿದೆ. ಕೆಟಿಎಂ ಸಂಸ್ಥೆಯು ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್‌ಗಳು ಕೆಟಿಎಂ ಜನಪ್ರಿಯ 1290 ಸೂಪರ್ ಅಡ್ವೆಂಚರ್ ಹೋಲಿಕೆಯನ್ನೇ ಪಡೆದುಕೊಂಡಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಇನ್ನು ಆರ್‌ಸಿ 390 ಬೈಕ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿ ಕೆಲವು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಈ ಬೈಕಿನ ಜೊತೆಗೆ ಕೆಟಿಎಂ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ 790 ಡ್ಯೂಕ್ ಅನ್ನು ಸಹ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಬೆಲೆಯಲ್ಲಿ ತುಸು ದುಬಾರಿಯಾಗಿರಲಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಎಂಜಿನ್ ಸಾಮರ್ಥ್ಯ

ಬಿಡುಗಡೆಗೆ ಸಜ್ಜಾದ ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿರುವ ಕೆಟಿಎಂ 390 ಅಡ್ವೆಂಚರ್ ಬೈಕ್‌ ಮಾದರಿಯು, ಸುಧಾರಿತ ವಿನ್ಯಾಸಗಳಾದ ಟಿಪಿಎಫ್ ಇನ್ಟ್ರುಮೆಂಟ್ ಡಿಸ್‌ಪ್ಲೇ, ಲಾಂಗ್ ಟ್ರಾವೆಲ್ ಫ್ರಂಟ್ ಮತ್ತು ರಿಯರ್ ಸಸ್ಷೆನ್ ಜೋಡಣೆ ಹೊಂದಿರಲಿವೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಇವುಗಳಲ್ಲದೇ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್, ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಟೆಕ್ನಾಲಜಿ ಮತ್ತು ಪರ್ಫಾಮೆನ್ಸ್‌ಗೆ ಸಹಕಾರಿಯಾಗಬಲ್ಲ ಡ್ಯುಯಲ್-ಸ್ಪೋಟ್ ಟೈರ್ ಮಾದರಿಗಳನ್ನು ಬಳಕೆ ಮಾಡಲಾಗಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಬಿಡುಗಡೆಯ ಅವಧಿ ಮತ್ತು ಬೆಲೆಗಳು (ಅಂದಾಜು)

2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಡ್ಯೂಕ್ 390 ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸಿದ್ದ ಸಾಂಸ್ಥೆಯು ಇದೀಗ ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3 ಲಕ್ಷದಿಂದ ರೂ. 3.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಿಡುಗಡೆಯಾಗುವುದು ಖಚಿತ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಕೆಟಿಎಂ ಸಂಸ್ಥೆಯು ತನ್ನ ಬಹುನೀರಿಕ್ಷಿತ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Wednesday, June 12, 2019, 10:40 [IST]
English summary
KTM Duke 390 Adventure Launch Likely In November 2019. Read In Kannada
Read more on ಕೆಟಿಎಂ ktm duke
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+