ಬಿಡುಗಡೆಗೊಂಡ ಕೆಟಿಎಂ ಡ್ಯೂಕ್ 790
ಕೆಟಿಎಂ ಇಂಡಿಯಾ ಕೊನೆಗೂ ತನ್ನ ಬಹುನಿರೀಕ್ಷಿತ ಡ್ಯೂಕ್ 790 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆಗೊಳಿಸಿದೆ. ಹೊಸ ಕೆಟಿಎಂ ಡ್ಯೂಕ್ 790 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.63 ಲಕ್ಷಗಳಾಗಿದೆ. ಈ ಬೈಕಿನೊಂದಿಗೆ ಕೆಟಿಎಂ ಕಂಪನಿಯು ಭಾರತದಲ್ಲಿ ಬಲಶಾಲಿಯಾದ ಬೈಕ್ ಅನ್ನು ಬಿಡುಗಡೆಗೊಳಿಸಿದಂತಾಗಿದೆ.

ಕೆಟಿಎಂ ಡ್ಯೂಕ್ 790 ಬೈಕ್ ಅನ್ನು ಭಾರತದಲ್ಲಿರುವ ಪ್ರಮುಖ ನಗರಗಳ ಆಯ್ದ ಡೀಲರ್‍ಶಿಪ್‍ಗಳ ಬಳಿ ಮಾತ್ರ ಮಾರಾಟ ಮಾಡಲಾಗುವುದು. ಸದ್ಯಕ್ಕೆ ಡ್ಯೂಕ್ 790 ಬೈಕಿನ ಬುಕ್ಕಿಂಗ್‍ಗಳನ್ನು 10 ನಗರಗಳಲ್ಲಿ ಆರಂಭಿಸಲಾಗಿದೆ. 2020ರ ಏಪ್ರಿಲ್ ನಂತರ ಇನ್ನೂ 30 ನಗರಗಳಲ್ಲಿ ಈ ಬೈಕುಗಳ ಮಾರಾಟವನ್ನು ಆರಂಭಿಸಲಾಗುವುದು. ಬೈಕಿನ ಡೆಲಿವರಿಯನ್ನು ಶೀಘ್ರದಲ್ಲೇ ಶುರುಮಾಡುವುದಾಗಿ ತಿಳಿದು ಬಂದಿದೆ.

ಈ ಬೈಕಿನಲ್ಲಿ 799 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರೆಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‍ಪಿಎಂನಲ್ಲಿ 103 ಬಿಹೆಚ್‍ಪಿ ಪವರ್ ಹಾಗೂ 8,000 ಆರ್‍ಪಿಎಂ ನಲ್ಲಿ 86 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಇರಲಿದೆ.

189 ಕೆ,ಜಿ ತೂಕವನ್ನು ಹೊಂದಿರುವ ಈ ಬೈಕ್ ಪ್ರತಿ ಟನ್ನಿಗೆ 612 ಬಿಹೆಚ್‍ಪಿಯಲ್ಲಿ ಪವರ್ ಟು ವೇಟ್ ಅನುಪಾತವನ್ನು ನೀಡುತ್ತದೆ. ಈ ಹೊಸ ಬೈಕ್ - ರೇನ್, ಸ್ಟ್ರೀಟ್ಸ್, ಸ್ಪೋರ್ಟ್ಸ್ ಹಾಗೂ ಟ್ರಾಕ್ ಎಂಬ ನಾಲ್ಕು ರೈಡಿಂಗ್ ಮೋಡ್‍ಗಳನ್ನು ಹೊಂದಿದೆ.

ಈ ಮೋಡ್‍ಗಳನ್ನು ಇತರ ಫೀಚರ್‍ಗಳ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಕೆಟಿಎಂ ಡ್ಯೂಕ್ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಲೀನ್ ಆಂಗಲ್ ಸೆನ್ಸಿಟಿವಿಟಿ, ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಸ್ಟಾಬಿಲಿಟಿ ಕಂಟ್ರೋಲ್, ಸ್ಲಿಪರ್ ಕ್ಲಚ್ ಹಾಗೂ ಕ್ಲಚ್‍ಲೆಸ್ ಅಪ್‍ಶಿಫ್ಟ್ ಹಾಗೂ ಡೌನ್‍ಶಿಫ್ಟ್ ಗಳಿಗಾಗಿ ಟೂ ವೇ ಕ್ವಿಕ್ ಶಿಫ್ಟರ್ ಗಳಿವೆ.

ಹೊಸ ಬೈಕಿನಲ್ಲಿರುವ ಇತರ ಫೀಚರ್ ಎಂದರೆ ಫುಲಿ ಡಿಜಿಟಲ್ ಟಿಎಫ್‍ಟಿ ಇನ್ಸ್ ಟ್ರೂಮೆಂಟ್ ಡಿಸ್‍ಪ್ಲೇ. ಇದರ ಜೊತೆಗೆ ಬೈಕಿನ ಸುತ್ತಲೂ ಎಲ್‍ಇಡಿ ಲೈಟಿಂಗ್‍ಗಳಿವೆ. ಇದರ ಜೊತೆಗೆ ಈ ಬೈಕ್ ಲಾಂಚ್ ಕಂಟ್ರೋಲ್ ಹಾಗೂ ವ್ಹೀಲಿ ಕಂಟ್ರೋಲ್‍ಗಳನ್ನು ಹೊಂದಿದೆ.

ಕೆಟಿಎಂ ಡ್ಯೂಕ್ 790 ಬೈಕಿನ ಮುಂಭಾಗದಲ್ಲಿ 43 ಎಂಎಂನ ಅಪ್‍ಸೈಡ್ ಡೌನ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಫುಲಿ ಅಡ್ಜಸ್ಟಬಲ್ ಮೊನೊ ಶಾಕ್‍ಗಳಿವೆ. ಈ ಎರಡೂ ಸಸ್ಪೆಂಷನ್‍ಗಳೂ ಡಬ್ಲ್ಯುಪಿ ಕಂಪನಿಗೆ ಸೇರಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಡಿಸ್ಕ್ ಗಳಿದ್ದರೆ, ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಡಿಸ್ಕ್ ಅಳವಡಿಸಲಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡ್ಯೂಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಡ್ಯೂಕ್ 790 ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್‍ಗಳಿದ್ದು, ಮ್ಯಾಕ್ಸಿಸ್ ಸೂಪರ್ ಮ್ಯಾಕ್ಸ್ ಎಸ್‍ಟಿ ಟಯರ್‍ಗಳನ್ನು ಅಳವಡಿಸಲಾಗಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಕೆಟಿಎಂ ಡ್ಯೂಕ್ 790 ಬೈಕ್ ಅನ್ನು ಕಂಪ್ಲೀಟ್ಲಿ ನಾಕ್ಡ್ ಡೌನ್ (ಸಿಕೆಡಿ)ಯುನಿಟ್ ಆಗಿ ಭಾರತಕ್ಕೆ ಆಮದು ಮಾಡಿಕೊಂಡು ಚಕಾನ್‍ನಲ್ಲಿರುವ ಬಜಾಜ್ ಘಟಕದಲ್ಲಿ ಅಸೆಂಬ್ಲ್ ಮಾಡಲಾಗುವುದು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಜಿಎಸ್‍ಎಕ್ಸ್-ಎಸ್750, ಡುಕಾಟಿ ಮಾನ್‍ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ-09 ಹಾಗೂ ಕವಾಸಕಿ ಝಡ್900 ಬೈಕುಗಳಿಗೆ ಪೈಪೋಟಿ ನೀಡಲಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 790 ಬೈಕಿನ ಬಿಡುಗಡೆಯನ್ನು ಹಲವು ದಿನಗಳಿಂದ ನಿರೀಕ್ಷಿಸಲಾಗಿತ್ತು. ಹಲವಾರು ಫೀಚರ್‍ಗಳನ್ನು ಹೊಂದಿರುವ ಈ ಬೈಕ್ ಹೆಚ್ಚಿನ ಪರ್ಫಾಮೆನ್ಸ್ ನೀಡುವ ನಿರೀಕ್ಷೆಯಿದೆ. ಭಾರತದ ಮಧ್ಯಮ ತೂಕದ ಬೈಕಿನ ಸೆಗ್‍ಮೆಂಟಿನಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.


Click it and Unblock the Notifications