ದಾಖಲೆ ಮಾರಾಟ ಕಂಡ ಕೆಟಿಎಂ ಡ್ಯೂಕ್ 790
ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಈಗಾಗಲೇ ತಮ್ಮ 790 ಡ್ಯೂಕ್ 41 ಯುನಿಟ್‍ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿವೆ. ಕಂಪನಿಯು ನೇಕೆಡ್ ಸೆಗ್‍ಮೆಂಟ್‍ನ 790 ಡ್ಯೂಕ್‍ನ 100 ಯುನಿಟ್‍ಗಳನ್ನು ವಿದೇಶದಿಂದ ಆಮದು ಮಾಡಿಕೊಂಡಿದೆ.

ಕೆಟಿಎಂ ಸೆಪ್ಟೆಂಬರ್ 23 ರಂದು ಭಾರತದಲ್ಲಿ 790 ಡ್ಯೂಕ್ ಬೈಕ್ ಅನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷ ದರಕ್ಕೆ ಬಿಡುಗಡೆಗೊಳಿಸಿದ್ದರು. ನೇಕೆಟ್ ಸೆಗೆಮೆಂಟ್‍ನ ಈ ಬೈಕ್ ಅನ್ನು ಸಿಕೆಡಿ(ಕಂಪ್ಲೀಟ್ ನಾಕ್ ಡೌನ್) ಮೂಲಕ ಭಾರತಕ್ಕೆ ತರಲಾಗಿದೆ ಮತ್ತು ಬಜಾಜ್ ಘಟಕದಲ್ಲಿ ಈ ಬೈಕ್ ಅನ್ನು ಜೋಡಿಸಲಾಗಿದೆ.

ಡ್ಯೂಕ್ 790 ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750, ಡುಕಾಟಿ ಮಾನ್ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ -09 ಮತ್ತು ಕವಾಸಕಿ 9 ಝಡ್900 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿವೆ. ಕೆಟಿಎಂ 790 ಬೆಲೆಯು ತನ್ನ ಪ್ರತಿಸ್ಪರ್ಧಿಗಳಿಗಿಂತ ದುಬಾರಿಯಾಗಿದೆ. ಭಾರತದಲ್ಲಿ ಹೆಚ್ಚಿನ ಗ್ರಾಹಕಾರನ್ನು ಹೊಂದಿರುವ ಕಂಪನಿಯು 41 ಯುನಿಟ್‍ಗಳನ್ನು ಮಾರಾಟ ಮಾಡವಲ್ಲಿ ಯಶಸ್ವಿಯಾಗಿದೆ.

ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಕೋಲ್ಕತಾ, ಹೈದರಾಬಾದ್, ಸೂರತ್, ಗುವಾಹಟಿ ಮತ್ತು ಚೆನ್ನೈ ಸೇರಿದಂತೆ ದೇಶದ ಒಂಬತ್ತು ನಗರಗಳಲ್ಲಿ ಮಾತ್ರ 790 ಡ್ಯೂಕ್ ಲಭ್ಯವಿದೆ. 2020ರ ಏಪ್ರಿಲ್ ವೇಳೆಗೆ 30 ಕ್ಕೂ ಹೆಚ್ಚು ನಗರಗಳಲ್ಲಿಈ ಬೈಕ್ ಮಾರಾಟ ಮಾಡುವ ಯೋಜನೆಯನ್ನು ಕಂಪನಿ ರೂಪಿಸಿದೆ.

ಕೆಟಿಎಂ ಡ್ಯೂಕ್ 790 ಬೈಕ್ 799 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 ಬಿಎಚ್‍ಪಿ ಪವರ್ ಮತ್ತು 87 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. 169 ಕೆಜಿ ಡ್ರೈ ತೂಕದೊಂದಿಗೆ, ಡ್ಯೂಕ್ 790 ತನ್ನ ವಿಭಾಗದಲ್ಲಿ ಹಗುರವಾದ ಬೈಕ್‍ಗಳಲ್ಲಿ ಒಂದಾಗಿದೆ.

ಡ್ಯೂಕ್ 790 ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 240 ಎಂಎಂ ಡಿಸ್ಕ್ ಅನ್ನು ಅಳವಡಿಸಿದ್ದಾರೆ.

ಡ್ಯೂಕ್ 790 ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ನಾಲ್ಕು ರೈಡಿಂಗ್ ಮೋಡ್‍ಗಳನ್ನು ಹೊಂದಿದೆ. ಅವುಗಳಲ್ಲಿ ರೈನ್, ಸ್ಟ್ರೀಟ್ಸ್, ಸ್ಪೋರ್ಟ್ಸ್, ಮತ್ತು ಟ್ರ್ಯಾಕ್ ಮೋಡ್‍ಗಳಾಗಿವೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಂ), ಲೀನ್ ಆ್ಯಂಗಲ್ ಸೆನೆಸ್ಟಿವ್, ಮೋಟಾರ್ ಸ್ಲಿಪ್ ರೆಗ್ಯೋಲೇಶನ್, ಸ್ಟೇಬಿಲಿಟಿ ಕಂಟ್ರೋಲ್, ಸ್ಲಿಪ್ಲರ್ ಕ್ಲಚ್ ಮತ್ತು ಕ್ಲಚ್‍ಲೆಸ್ ಆಪ್‍ಶಿಫ್ಟ್ ಮತ್ತು ಡೌನ್‍ಶಿಫ್ಟ್ ಮತ್ತು ಕ್ವಿಕ್ ಶಿಪ್ಟರ್ ಅನ್ನು ಸಹ ಒಳಗೊಂಡಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೆಟಿಎಂ ಡ್ಯೂಕ್ 790 ಸಂಪೂರ್ಣ ಡಿಜೆಟಲ್ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಡಿಸ್‍ಪ್ಲೇಯನ್ನು ಹೊಂದಿದ್ದು, ಸವಾರನಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಸುತ್ತಲೂ ಎಲ್‍ಇಡಿ ಲೈಟಿಂಗ್ ಹೊಂದಿದೆ. ಕೆಟಿಎಂ ಕಂಪನಿಯು ಭಾರತದಲ್ಲಿ ಬಹುನಿರೀಕ್ಷಿತ 390 ಅಡ್ವೆಂಚೆರ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಉತ್ತಮ ಗ್ರಾಹಕ ಅನುಭವನ್ನು ನೀಡಲು ಕಂಪನಿಯು ಪ್ರೀಮಿಯಂ ಮಾದರಿಗಳಿಗೆ ಅನುಗುಣವಾಗಿ ಭಾರತದಲ್ಲಿ ತನ್ನ ಶೋ ರೂಂಗಳನ್ನು ನವೀಕರಿಸುತ್ತಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದುಬಾರಿ ಬೆಲೆ ಹೊಂದಿರುವ 790 ಡ್ಯೂಕ್ ದುಬಾರಿಯಾಗಿದ್ದರೂ 41 ಯುನಿಟ್‍ಗಳನ್ನು ಮಾರಾಟ ಮಡಲು ಯಶಸ್ವಿಯಾಗಿದೆ. ಕೆಟಿಎಂ ಬೈಕ್‍ಗಳಿಗೆ ಭಾರತದ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಕೆಟಿಎಂ ಡ್ಯೂಕ್ ಯುವಜನರ ಕನಸಿನ ಬೈಕ್‍ಗಿದೆ. 790 ಡ್ಯೂಕ್ ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ, ಕೆಟಿಎಂ ಕಂಪನಿಯು ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಮಾರಾಟವನ್ನು ಮಾಡುತ್ತಿದ್ದಾರೆ.


Click it and Unblock the Notifications