ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಬೈಕ್‍ಗಳಲ್ಲಿ ಜನಪ್ರೀಯತೆಯನ್ನು ಪಡೆಯುತ್ತಿರುವ ಕೆಟಿಎಂ ಸಂಸ್ಥೆಯು ಇಂದು ತಮ್ಮ ಆರ್‍‍ಸಿ 125 ಎಬಿಎಸ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ಈ ಬೈಕಿನ ಬೆಲೆಯನ್ನು ರೂ. 1.47 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಆಸಕ್ತ ಗ್ರಾಹಕರೂ ಈ ಬೈಕಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಕೆಟಿಎಂ ಡೀಲರ್‍ ಅನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಹೊಸ ಬೈಕಿನ ವಿನ್ಯಾಸ

ಬಿಡುಗಡೆಯಾದ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಮಾದರಿಯು ತಮ್ಮ ಮೋಟೋಜಿಪಿ ಮಶೀನ್ ಬೈಕಿನಿಂದ ವಿನ್ಯಾಸವನ್ನು ಆಧರಿಸಲಾಗಿದ್ದು, ಈ ಬೈಕ್ ಫುಲ್ಲಿ ಫೈರ್ಡ್ ಮೋಟಾರ್‍‍ಸೈಕಲ್ ಆಗಿ ಆಕಾರವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಟ್ರೆಲ್ಲಿಸ್ ಫ್ರೇಮ್ ಅನ್ನು ನೀಡಲಾಗಿದ್ದು, ಟ್ರಿಪಲ್ ಕ್ಲಾಂಪ್ ಹ್ಯಾಂಡಲ್‍‍ಬಾರ್ ಹಾಗು ಅಪ್‍ಸೈಡ್ ಡೌನ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಎಂಜಿನ್ ಸಮಾರ್ಥ್ಯ

ಕಡಿಮೆ ಹಂತರ ಪರ್ಫಾರ್ಮೆನ್ಸ್ ಪ್ರಿಯರನ್ನು ಆಕಸಲು ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ 124ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.3 ಬಿಹೆಚ್‍ಪಿ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಒಟ್ಟಾರೆಯಾಗಿ 1,977 ಎಂಎಂ ಅಗಲವನ್ನು ಪಡೆದುಕೊಂಡಿದ್ದು, 835ಎಂಎಂ ಸೀಟ್ ಹೈಟ್ ಹಾಗು 157ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಈ ಬೈಕ್ 1,341 ಎಂಎಂನ ವ್ಹೀಲ್ ಬೆಸ್ ಅನ್ನು ಹೊಂದಿದ್ದು, 9.5 ಲೀಟರ್ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿರುವ ಈ ಬೈಕ್ 154.2 ಕಿಲೋಗ್ರಾಂನ ತೂಕವನ್ನು ಪಡೆದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಹಾಗೆಯೇ ಆರ್‌ಸಿ 200 ಮಾದರಿಯಲ್ಲಿ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಆರ್‌ಸಿ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆಗೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಆರ್‌ಸಿ 125 ಬೈಕ್ ಮಾದರಿಯು ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್‌ ನೀಡಲಿದ್ದು, ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, 17-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಅಂಡರ್ ಬೆಲ್ಲಿ ಎಕ್ಸಾಸ್ಟ್ ಸೌಲಭ್ಯ ಹೊಂದಿರಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಸೇಫ್ಟಿ ಫೀಚರ್ಸ್

ಮೊದಲೇ ಹೇಳಿರುವ ಹಾಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 10 ವಿಧಗಳಲ್ಲಿ ಅಡ್ಜಸ್ಟ್ ಮಾದಿಕೊಳ್ಳಬಹುದಾದ ಮೊನೊಶಾಕ್ ರಿಯರ್ ಅಬ್ಸಾರ್ಬರ್ ಅನ್ನು ಈ ಬೈಕ್ ಹೊಂದಿದ್ದು, ಮುಂಭಾಗದಲ್ಲಿ 300ಎಂಎಂ ಹಾಗು ಹಿಂಭಾಗದಲ್ಲಿ 230ಎಂಎಂನ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಹಾಗೆಯೆ ಬಾಷ್‍ನಿಂದ ಪದೆದ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ಈ ಬೈಕ್‍ನಲ್ಲಿ ಅಳವಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಕೆಟಿಎಂ ಆರ್‍‍ಸಿ 125 ಬೈಕ್ ಸಾಧಾರಣ ಕೆಟಿಎಂ 125 ಬೈಕ್‍ಗಿಂತಲೂ ಬೆಲೆಯಲ್ಲಿ ಸುಮಾರು 17,000 ಅಧಿಕವಿದ್ದು, ಆರ್‍‍ಸಿ 200 ಬೈಕಿಗಿಂತಲೂ ಕಡಿಮೆ ಬೆಲೆಯಲ್ಲಿ ಈ ಬೈಕ್ ಲಭ್ಯವಿದೆ ಅಂತಾನೇ ಹೇಳ್ಬೋದು. ಈ ಬೆಲೆಯನ್ನು ಪಡೆದ ಕೆಟಿಎಂ ಆರ್‍‍ಸಿ 125 ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಯಮಹಾ ಆರ್‍15 ವಿ 3.0 ಬೈಕ್‍ಗೆ ಪೈಪೋಟಿ ನೀಡಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

ಕೆಟಿಎಂ ಸಂಸ್ಥೆಯಲ್ಲಿನ ಬೈಕ್‍ಗಳಲ್ಲಿ ಸಧ್ಯಕ್ಕೆ ಡ್ಯೂಕ್ 125 ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದುಮ್ ಪ್ರತೀ ತಿಂಗಳಿನಲ್ಲಿ ಸುಮಾರು 2000ಕ್ಕು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆಯುತ್ತಿದೆ. ಕೆಟಿಎಂ ಡ್ಯೂಕ್ 125 ಬೈಕ್ ಎಕ್ಸ್ ಶೋರುಂ ಪ್ರಕಾರ ರೂ. 1.30 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿರುವ ಯಮಹಾ ಎಂಟಿ15 ಬೈಕ್‍ಗಳಿಗೆ ಪೋಪೋಟಿಯನ್ನು ನೀಡುತ್ತಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್. ಬೆಲೆ ಎಷ್ಟು.?

2018ರ ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿದ್ದ ಡ್ಯೂಕ್ 125 ಮಾದರಿಯು ಆರಂಭದಲ್ಲಿ ರೂ. 1.18 ಲಕ್ಷದಿಂದ ಸದ್ಯ ರೂ.1.30 ಲಕ್ಷಕ್ಕೆ ಏರಿಕೆಯಾಗಿದ್ದು, 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

Article Published On: Wednesday, June 19, 2019, 15:26 [IST]
English summary
KTM RC 125 ABS Launched In India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+