ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಕೆಟಿಎಂ ಸಂಸ್ಥೆಯು ಡ್ಯೂಕ್ 125 ಬೈಕ್ ಬಿಡುಗಡೆಯ ನಂತರ ತನ್ನ ಮತ್ತೊಂದು ಜನಪ್ರಿಯ ಆವೃತ್ತಿಯಾದ ಆರ್‌ಸಿ 125 ಬೈಕ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಟೀಸರ್ ಚಿತ್ರವನ್ನು ಬಹಿರಂಗ ಪಡಿಸುವ ಮೂಲಕ ಇದೇ ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಆರ್‌ಸಿ 125 ಬೈಕ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ 125 ಸಿಸಿ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಡ್ಯೂಕ್ 125 ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಆರ್‌ಸಿ 125 ಆವೃತ್ತಿಯನ್ನು ಬಿಡುಗಡೆಗೊಳಿಸುವ ಉದ್ದೇಶದೊಂದಿಗೆ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದಲ್ಲದೇ ಹೊಸ ಬೈಕ್ ಮಾದರಿಯನ್ನು ತನ್ನ ಸಾಂಪ್ರದಾಯಿಕ ಬಣ್ಣವಾದ ವೈಟ್ ಮತ್ತು ಆರೇಂಜ್ ಹೊರತುಪಡಿಸಿ ಹೊಸ ಬಣ್ಣಗಳ ಆಯ್ಕೆ ನೀಡಲು ನಿರ್ಧರಿಸಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ತಾಂತ್ರಿಕವಾಗಿ ಡ್ಯೂಕ್ 125 ಬೈಕಿನ ಎಂಜಿನ್ ಮಾದರಿಯನ್ನೇ ಹೊಂದಿರುವ ಆರ್‌ಸಿ 125 ಮಾದರಿಯು ಸಹ ಎಂಟ್ರಿ ಲೆವಲ್ ಪರ್ಫಾಮೆನ್ಸ್ ವಿಭಾಗದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಬೈಕ್ ಅನ್ನು ಈಗಾಗಲೇ ವಿವಿಧ ಹಂತಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಲಾಗಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಕೆಟಿಎಂ ಸಂಸ್ಥೆಯು ಪ್ರಮುಖವಾಗಿ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 1200ಸಿಸಿ ಸಾಮರ್ಥ್ಯದ 1290 ಸೂಪರ್ ಡ್ಯೂಕ್ ಬೈಕ್ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಹೀಗಿರುವಾಗ ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತಿರುವ ಕೆಟಿಎಂ ಸಂಸ್ಥೆಯು 125ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಆರ್‌ಸಿ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದರೂ ಆರ್‌ಸಿ 200 ಮಾದರಿಯಿಂದಲೇ ಬಹುತೇಕ ಹೊರ ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಹಾಗೆಯೇ ಆರ್‌ಸಿ 200 ಮಾದರಿಯಲ್ಲಿ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಆರ್‌ಸಿ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆಗೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಎಂಜಿನ್ ಮತ್ತು ಟಾಪ್ ಸ್ಪೀಡ್

ಆರ್‌ಸಿ 125 ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಆರ್‌ಸಿ 125 ಬೈಕ್ ಮಾದರಿಯು ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್‌ ನೀಡಲಿದ್ದು, ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, 17-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಅಂಡರ್ ಬೆಲ್ಲಿ ಎಕ್ಸಾಸ್ಟ್ ಸೌಲಭ್ಯ ಹೊಂದಿರಲಿದೆ.

MOST READ: ಇನ್ಮುಂದೆ ಹೆಲ್ಮೆಟ್ ಹಾಕದೇ ಪೆಟ್ರೋಲ್ ಬಂಕ್‌ಗೆ ಬರಲೇಬೇಡಿ...!

ಕೆಟಿಎಂ ಆರ್‌ಸಿ125 ಟೀಸರ್ ಔಟ್- ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಪಕ್ಕಾ..!

ಬೆಲೆ (ಅಂದಾಜು)

ಮಾಹಿತಿಗಳ ಪ್ರಕಾರ ಹೊಸ ಆರ್‌ಸಿ 125 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ರೂ. 1.60 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಯಮಹಾ ಆರ್ 15 ಬೈಕಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Source: GaadiWaadi

Article Published On: Friday, June 14, 2019, 10:56 [IST]
English summary
KTM Reveals First Official Teaser For The RC125. Read in Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+