ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಕೆಟಿಎಂ ಇಂಡಿಯಾ ಸಂಸ್ಥೆಯು ತಮ್ಮ ಡ್ಯೂಕ್ ಹೊಸ 790 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಕ್ನಾಕ್ಡ್ ಡೌನ್(ಸಿಕೆಡಿ) ಮಾರ್ಗದಲ್ಲಿ ಕಾಲಿಡಲಿದೆ. ಈ ಲೇಖನದಲ್ಲಿ ಈ ಕುರಿತಾದ ಹೆಚ್ಚು ಮಾಹಿತಿಯನ್ನು ಪಡೆಯಿರಿ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಕೆಟಿಎಂ ಬಿಡುಗಡೆಗೊಳಿಸಲಿರುವ ಹೊಸ 790 ಬೈಕ್ ಪುಣೆಯಲ್ಲಿರುವ ಬಜಾಜ್ ಆಟೋವಿನ ಚಕನ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗಲಿದ್ದು, ಮಾಹಿತಿಗಳ ಪ್ರಕಾರ ಇದೀಗ ಮೊದಲ ಬಾರಿಗೆ ಈ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದೆ. ಇಷ್ಟೆ ಅಲ್ಲದೇ ಈ ಬೈಕಿನ ಖರೀದಿಗಾಗಿ ಡೀಲರ್‍‍ಗಳು ರೂ. 10,000 ಪಡೆಯುವ ಸಲುವಾಗಿ ಪ್ರೀ-ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ವೈಶಿಷ್ಟ್ಯತೆಗಳು

ಇನ್ನು ಕೆಟಿಎಂ ಪರಿಚಯಿಸಲಿರುವ ಡ್ಯೂಕ್ 790 ಬೈಕಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಎಲ್ಇಡಿ ಡಿಆರ್‍ಎಲ್, ಟಿಎಫ್‍‍ಟಿ ಕಲರ್ ಇನ್ಸ್ಟ್ರೂಮೆಂಟ್ ಕಂಸೋಲ್, ಸ್ಮಾರ್ಟ್‍ಫೋನ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿರಲಿದೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಡ್ಯೂಕ್ 790 ಬೈಕ್ 825ಎಂಎಂನ ಸೀಟ್ ಹೈಟ್, 189ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದ್ದು, ಟ್ರೆಲ್ಲಿಸ್ ಫ್ರೇಮ್, 43ಎಂಎಂ ಅಪ್ಸೈಡ್ ಫ್ರಂಟ್ ಫೋರ್ಕ್ಸ್ ಹಾ

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಹೊಸ ಡ್ಯೂಕ್ 790 ಬೈಕ್ ರೈಡಿಂಗ್ ಪ್ರಿಯರಿಗೆ ಉತ್ತಮ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಈ ಬೈಕ್ 5 ಸೆಕೆಂಡಿನಲ್ಲಿ ಸುಮಾರು 100 ಕಿಲೋಮೀಟರ್‍‍ನಷ್ಟು ಆಕ್ಸಿಲರೇಷನ್ ಅನ್ನು ನೀಡುವುದಲ್ಲದೇ, ಗಂಟೆಗೆ 220 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಸಹ ಪಡೆದುಕೊಂಡಿರಲಿದೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಕೆಟಿಎಂ ಡ್ಯೂಕ್ 390 ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ನೀಡಲಾಗಿದೆ. ಇಷ್ಟೆ ಅಲ್ಲದೇ, ವಿವಿಧ ಪರಿಸ್ಥಿತಿಗಳಲ್ಲಿ ಬಳಕೆಯಾಗಲು ರೈಡಿಂಗ್ ಮೋಡ್ಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಒದಗಿಸಲಾಗುತ್ತಿದೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಎಂಜಿನ್ ಸಾಮರ್ಥ್ಯ

ಹೊಸ ಕೆಟಿಎಂ ಡ್ಯೂಕ್ 790 ಬೈಕ್ 799ಸಿಸಿ ಪ್ಯಾರಲಲ್ ಟ್ವಿನ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 105ಬಿಹೆಚ್‍ಪಿ ಮತ್ತು 85ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಬೆಲೆ ಮತ್ತು ಬಿಡುಗಡೆ (ಅಂದಾಜು)

ದುಬಾರಿ ಬೆಲೆಯಲ್ಲಿ ಬಿಡುಗಡೆಯಾಲರುವ ಹೊಸ ಕೆಟಿಎಂ ಡ್ಯೂಕ್ 790 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ರಿಂದ 9 ಲಕ್ಷದ ಬೆಲೆಯನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದ್ದು, ಇದೇ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕೆಟಿಎಂ ಡ್ಯೂಕ್ 790 ಬೈಕ್ ವಿಶೇಷತೆ ಏನು.?

ಒಟ್ಟಿನಲ್ಲಿ ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರೀ ನೀಡಲಿರುವ ಹೊಸ ಕೆಟಿಎಂ ಡ್ಯೂಕ್ 790 ಬೈಕ್‍ಗಳು ಮಾರಾಟವಾಗುತ್ತಿರುವ ಸುಜುಕಿ ಜಿಎಸ್ಎಕ್ಸ್-ಎಸ್750, ಡುಕಾಟಿ ಸ್ಕ್ರಾಂಬ್ಲರ್, ಹೋಂಡಾ ಸಿಬಿಆರ್ 650ಆರ್, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮತ್ತು ಕವಾಸಕಿ ಜೆಡ್900 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Image Courtesy: news.maxabout.com

More from DriveSpark

Article Published On: Monday, February 4, 2019, 11:09 [IST]
English summary
KTM Duke 790 launching very soon in India, bookings now open. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+