ಭಾರತಕ್ಕೆ ಕಾಲಿಟ್ಟ 21 ಲಕ್ಷ ರೂ. ಬೆಲೆಯ ಎಂವಿ ಅಗಸ್ಟಾ ಎಫ್3-800 ಬೈಕ್
ಮೋಟೊರಾಯಲ್ ಕಂಪನಿಯು ಎಂವಿ ಅಗಸ್ಟಾ ಎಫ್3-800 ಆರ್‍ಸಿ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.21.99 ಲಕ್ಷಗಳಾಗಿದೆ. ಪ್ರಿಮೀಯಂ ಸ್ಟಾಂಡರ್ಡ್ ಎಫ್3-800 ಬೈಕಿಗಿಂತ ರೂ.4 ಲಕ್ಷ ಹೆಚ್ಚಿನ ಬೆಲೆಯನ್ನು ಹೊಂದಿದೆ.

ಈ ಬೈಕಿನಲ್ಲಿ ರೇಸಿಂಗ್ ಕಿಟ್‍ಗಳನ್ನು ಅಳವಡಿಸಲಾಗಿದ್ದು, ರೇಸ್ ಟ್ರಾಕ್‍ಗಳಿಗಾಗಿ ಹೇಳಿ ಮಾಡಿಸಿದ ಬೈಕ್ ಆಗಿದೆ. ಸ್ಟಾಂಡರ್ಡ್ ಎಫ್3-800 ಆರ್‍ಸಿ ಬೈಕ್ ಆಕರ್ಷಕವಾಗಿದ್ದು, ಇಟಲಿ ಮೂಲದ ಕಂಪನಿಯ ಪ್ರಕಾರ ಈ ಬೈಕ್ ಅನ್ನು ರೇಸಿಂಗ್‍ಗಾಗಿ ಸಿದ್ದಪಡಿಸಲಾಗಿದೆ. ಇದರಲ್ಲಿ ಹೊಸ ವ್ಹೀಲ್‍ಗಳನ್ನು ಅಳವಡಿಸಲಾಗಿದ್ದು, ಕೆಂಪು ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತವೆ. 2018ರಲ್ಲಿ ಬಿಡುಗಡೆಯಾದ ಸ್ಟಾಂಡರ್ಡ್ ಎಫ್3-800 ಬೈಕಿನಲ್ಲಿದ್ದಂತೆ ಹೊಸ ಬೈಕಿನಲ್ಲೂ ಸಹ ಡಾರ್ಕ್ ಥೀಮ್ ಇದ್ದು, ಜೊತೆಗೆ ಇಟಾಲಿಯನ್ ಟ್ರೈ ಕಲರ್‍ಗಳನ್ನು ಹೊಂದಿದೆ.

798ಸಿಸಿಯ ಎಂಜಿನ್ 145 ಬಿಹೆಚ್‍ಪಿಯನ್ನು 13,000 ಆರ್‍ಪಿಎಂನಲ್ಲಿ ಉತ್ಪಾದಿಸಿದರೆ, 88 ಎನ್‍ಎಂ ಟಾರ್ಕ್ ಅನ್ನು 10,600 ಆರ್‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಹಲವಾರು ಬಗೆಯ ಎಲೆಕ್ಟ್ರಾನಿಕ್ ಅಂಶಗಳನ್ನು ಅಳವಡಿಸಲಾಗಿದೆ.

ಈ ಬೈಕಿನಲ್ಲಿ ರೈಡ್ ಬೈ ವೈರ್, ಫೋರ್ ರೈಡರ್ ಮೋಡ್, 8 ಲೆವೆಲ್‍ನ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ರೇಸ್ ಮೋಡ್ ಸೆಟ್ಟಿಂಗ್ ಹೊಂದಿರುವ ಬಾಷ್ ಎಬಿಎಸ್ ಹಾಗೂ ರೇರ್ ವ್ಹೀಲ್ ಲಿಫ್ಟ್ ಅಪ್ ಮಿಟಿಗೇಷನ್‍ಗಳನ್ನು ಅಳವಡಿಸಲಾಗಿದೆ.

ಈ ಬೈಕಿನ ಅಂಗವಾಗಿರುವ ರೇಸಿಂಗ್ ಕಿಟ್ ಅನ್ನು, ಈ ಬೈಕ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ನೀಡಲಾಗುವುದು. ಈ ಕಿಟ್‍ನ ಭಾಗವಾಗಿ ಎಸ್‍ಸಿ ಪ್ರಾಜೆಕ್ಟ್ ಟಿಟಾನಿಯಂ, ಕಾರ್ಬನ್ ಫೈಬರ್ ಎಕ್ಸಾಸ್ಟ್, ವಿಶೇಷವಾದ ಇಸಿಯು ನೀಡಲಾಗಿದ್ದು, ಇದರಿಂದಾಗಿ ಈ ಬೈಕಿನಲ್ಲಿರುವ ಎಕ್ಸಾಸ್ಟ್ ಸಿಸ್ಟಂ ಅನ್ನು ವಿಶೇಷವಾದ ಮ್ಯಾಪಿಂಗ್‍ನಿಂದ ಚಲಾಯಿಸಬಹುದಾಗಿದೆ. ರೇಸ್ ರೈಡರ್ ಮೋಡ್‍ಗಾಗಿ ಟ್ರಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‍ಗಳಿವೆ.

ಹಗುರವಾದ ಭಾರವನ್ನು ಹೊಂದಿರುವ ಹಲವು ಬಿಡಿಭಾಗಗಳಾದ ಫೈಬರ್‍ಗ್ಲಾಸ್ ಪಿಲಿಯನ್ ಕೌಲ್, ಅಲ್ಯುಮಿನಿಯಂ ರೇರ್ ಸೆಟ್ಸ್, ಅಲ್ಯುಮಿನಿಯಂ ಬ್ರೇಕ್ ಹಾಗೂ ಕ್ಲಚ್ ಲೀವರ್‍ಗಳನ್ನು ಹೊಂದಿರುವ ಈ ಬೈಕಿನ ತೂಕವು 173 ಕೆ.ಜಿಗಳಿಂದ 165 ಕೆ.ಜಿಗಳಿಗೆ ಇಳಿಯಲಿದೆ.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ಪ್ಯಾಡ್ ಡಾಕ್ ಸ್ಟಾಂಡ್ ಅನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಇದರ ಜೊತೆಗೆ ಬೈಕನ್ನು ಖರೀದಿಸಿದವರಿಗೆ ನೀವು ಈ ಬೈಕ್ ಅನ್ನು ಚಲಾಯಿಸುವ ಅದೃಷ್ಟಶಾಲಿಗಳಲ್ಲಿ ಒಬ್ಬರು ಎಂದು ಸೂಚಿಸುವ ನೆನಪಿನ ಕಾಣಿಕೆಗಳನ್ನು ನೀಡಲಾಗುವುದು.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಎಫ್3-800 ಹಾಗೂ ಆರ್‍ಸಿ ಎರಡೂ ಬೈಕುಗಳಲ್ಲಿರುವ ಸಸ್ಪೆಂಷನ್ ಹಾಗೂ ಬ್ರೇಕಿಂಗ್ ಸಿಸ್ಟಂಗಳು ಫುಲಿ ಅಡ್ಜಸ್ಟಬಲ್ 43 ಎಂಎಂ ಮಾರ್ಜೊಕಿ ಯುಎಸ್‍ಡಿ ಫೋರ್ಕ್, ಫುಲಿ ಅಡ್ಜಸ್ಟಬಲ್ ಸಾಚ್ಸ್ ಮೊನೊಶಾಕ್ ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಆಗಿದ್ದು, ಬೈಕಿನ ಮುಂಭಾಗದಲ್ಲಿ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್‍ಗಳು ಹಾಗೂ ಹಾಗೂ ಹಿಂಭಾಗದಲ್ಲಿ ಟೂ ಪಿಸ್ಟನ್ ಕ್ಯಾಲಿಪರ್‍ಗಳಿವೆ.
MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!

ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ 21.99 ಲಕ್ಷಗಳಾಗಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್-10ಆರ್ ಬೈಕ್ ಅನ್ನು ಖರೀದಿಸಿ ಟ್ರಾಕ್‍ಗಳಲ್ಲಿ ಚಲಾಯಿಸುವಂತೆ ಮಾಡಬಹುದಾದರೂ, ಎಂವಿ ಅಗಸ್ಟಾ ಬೈಕ್ ನೀಡುವ ಮಜಾವೇ ಬೇರೆ.


Click it and Unblock the Notifications








