ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್
ವಿಶ್ವದ ಅತಿದೊಡ್ಡ ದ್ವಿಚಕ್ರ ತಯಾರಕರಾದ ಹೀರೋ ಮೋಟೊಕಾರ್ಪ್ ಬಿಎಸ್-6 ಗ್ಲ್ಯಾಮರ್ ಬೈಕ್ ಅನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೀರೋ ಮೋಟೊಕಾರ್ಪ್ ಭಾರತದಲ್ಲಿ ಕಡಿಮೆ ಬೆಲೆಗೆ ಪ್ರಯಾಣಿಕರ ಬೈಕ್‍ಗಳನ್ನು ಬಿಡುಗಡೆಗೊಳಿಸುವುದರಲ್ಲಿ ಜನಪ್ರಿಯತೆಯನ್ನು ಹೊಂದಿದೆ.

ಬಿಎಸ್-6 ಮಾಲಿನ್ಯ ನಿಯಮ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಿರುವುದರಿಂದ ಹೀರೋ ತನ್ನ ಸರಣಿಯಲ್ಲಿನ ಸ್ಪ್ಲೈಂಡರ್ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುತ್ತದೆ. ಹೀರೋ ಗ್ಲಾಮರ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಅಂತರ್ಜಾಲದಲ್ಲಿ ಬಹಿರಂಗವಾಗಿದೆ.

ಸ್ಪೈ ಚಿತ್ರದಲ್ಲಿ ಕಂಡಂತೆ ಬೈಕ್‍ನ ಬಾಡಿ ಬಣ್ಣದ ಮಿರರ್‍ಗಳು, ಪಿಲಿಯನ್ ಗ್ರ್ಯಾಬ್ ರೈಲ್ ಅನ್ನು ಹೊಂದಿದೆ. ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಹೀರೋ ಗ್ಲ್ಯಾಮರ್ ಇತರ ಪ್ರಮುಖ ಬದಲಾವಣೆಗಳು ಯಾವುದು ಕಂಡು ಬಂದಿಲ್ಲ.

ಹೊಸ ಬಿಎಸ್-6 ಮಾದರಿಯ ಬೆಲೆಯು ತುಸು ಹೆಚ್ಚಾಗಿರಲಿದೆ. ಹೊಸ ವಿಮಾ ದರಗಳು, ಎಬಿಎಸ್ ಅಥವಾ ಸಿಬಿಎಸ್ ಬ್ರೇಕಿಂಗ್ ಅನ್ನು ಅಳವಡಿಸುದರಿಂದ ಹೊಸ ಬೈಕಿನ ಬೆಲೆಯು ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ. ಭಾರತದ ಎಕ್ಸ್ ಶೋರೂಂ ಬೆಲೆಕ್ಕಿಂತ ಸುಮಾರು ಶೇ.10ರಷ್ಟು ಬೆಲೆಯನ್ನು ಹೆಚ್ಚಿಸಬಹುದು. ಪ್ರಸ್ತತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62,000ಗಳಾಗಿದೆ.

2019ರ ಇಐಸಿಎಂಎನಲ್ಲಿ ಹೀರೋ ಮೋಟೊಕಾರ್ಪ್ ಗ್ಲ್ಯಾಮರ್ ಬೈಕ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿತ್ತು. ವೀಡಿಯೋದಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸಿದ್ದರು. ಮೂರು ಮಾರ್ಗದ ಕ್ಯಾಟಲ್ಯಾಟಿಕ್ ಕರ್ನವಾಟರ್, ಫ್ಯೂಲ್ ಇಂಜೆಕ್ಷನ್ ಮತ್ತು ಎಂಜಿನ್ ಕಂಟ್ರೂಲ್ ಯುನಿಟ್‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

ಹೀರೋ ಗ್ಲ್ಯಾಮರ್ ಬ್ರ್ಯಾಡ್‍ನ ಐಸಾಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಂ(ಐ3ಎಸ್) ಅನ್ನು ಅಳವಡಿಸಬಹುದು. ಇದರಿಂದ ಇಂಧನ ಧಕ್ಷತೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಹೀರೋ ಕಂಪನಿಯು ತನ್ನ ಸರಣಿಯಲ್ಲಿರುವ ಪ್ರಮುಖ ಬೈಕ್‍ಗಳನ್ನು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿ ನವೀಕರಿಸಲಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೈಕಿನಲ್ಲಿ 124.7 ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9 ಬಿಹೆಚ್‍ಪಿ ಪವರ್ ಮತ್ತು 10.35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ ದ್ವಿಚಕ್ರ ವಾಹನ ಉತ್ಪಾದಕರು ಕೆಲವು ತಿಂಗಳುಗಳಿಂದ ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುವಲ್ಲಿ ನಿರತರಾಗಿದ್ದಾರೆ. ಕೆಲವು ದ್ವಿಚಕ್ರ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳ ಹೆಚ್ಚು ಗಮನಹರಿಸುತ್ತಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ 2020ರ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮುಂದಿನ ವರ್ಷದಲ್ಲಿ ಬಿಡಗಡೆಯಾಗಲಿದೆ ಎಂಬುವುದು ಬಹುತೇಕೆ ಖಚಿತವೆಂದು ಹೇಳಬಹುದು. ಕಡೆಮೆ ಬೆಲೆಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಹೀರೋ ಈ ಬೈಕಿನ ಬೆಲೆಯು ಹೆಚ್ಚಸುವುದು ಅನಿವಾರ್ಯವಾಗಿದೆ.
Spy Shot Courtesy: Gagan Choudhary


Click it and Unblock the Notifications