ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ರಾಯಲ್ ಎನ್‍‍ಫೀಲ್ಡ್ ದೇಶಿಯ ಮಾರುಕಟ್ಟೆಗಾಗಿ ಹೊಸ ಮೂಲ ಮಾದರಿಯ ಥಂಡರ್‍‍ಬರ್ಡ್ 350 ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ರಶ್‍‍ಲೇನ್ ಬಿಡುಗಡೆಗೊಳಿಸಿರುವ ದಾಖಲೆಗಳ ಪ್ರಕಾರ, ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕೈಗೆಟಕುವ ದರದಲ್ಲಿ ಥಂಡರ್‍‍ಬರ್ಡ್ 350 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 350 ಮೂಲ ಮಾದರಿಯು, ಕ್ಲಾಸಿಕ್ 350 ಎಸ್ ಹಾಗೂ ಬುಲೆಟ್ 350 ಎಕ್ಸ್ ಬೈಕುಗಳಂತಿರಲಿದೆ. ಈ ಬೈಕುಗಳು ಕೈಗೆಟಕುವ ದರವನ್ನು ಹೊಂದಿವೆ. ಹೊಸ ಥಂಡರ್‍‍ಬರ್ಡ್ 350 ಬೈಕ್ ಕೆಲವು ಬದಲಾವಣೆಗಳನ್ನು ಹೊಂದಲಿದ್ದು, ಹಲವಾರು ಫೀಚರ್‍‍ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಮೂಲ ಮಾದರಿಯ ಥಂಡರ್‍‍ಬರ್ಡ್ 350 ಬೈಕ್, ಸ್ಟಾಂಡರ್ಡ್ ಮಾದರಿಯಲ್ಲಿರುವ ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಬದಲಿಗೆ ಸಿಂಗಲ್ ಚಾನೆಲ್ ಎ‍‍ಬಿ‍ಎಸ್ ಸಿಸ್ಟಂ ಹೊಂದಿರಲಿದೆ. ಉಳಿದ ಬದಲಾವಣೆಗಳೆಂದರೆ ಬೈಕಿನ ಸುತ್ತಲೂ ಕ್ರೋಮ್ ಬಣ್ಣವಿರುವುದಿಲ್ಲ.

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಹೊಸ ಮೂಲ ಮಾದರಿಯ ಥಂಡರ್‍‍ಬರ್ಡ್ 350 ಬೈಕಿನ ಎಕ್ಸಾಸ್ಟ್ ಪೈಪ್, ಎಂಜಿನ್ ಕವರ್ ಹಾಗೂ ಹ್ಯಾಂಡಲ್‍‍ಬಾರ್‍‍ಗಳು ಕಪ್ಪು ಬಣ್ಣದಲ್ಲಿರಲಿವೆ. ಹೊಸ ಥಂಡರ್‍‍ಬರ್ಡ್‍‍ನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ಹೊಸ ಬೈಕ್, ಕ್ಲಾಸಿಕ್ 350 ಎಸ್ ಹಾಗೂ ಬುಲೆಟ್ 350 ಎಕ್ಸ್ ಬೈಕುಗಳ ರೀತಿಯಲ್ಲಿ ಹೊಸ ಬಣ್ಣವನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಇವುಗಳ ಹೊರತಾಗಿ ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 350 ಬೈಕಿನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಈ ಬೈಕಿನಲ್ಲಿ 346 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ ಎಂಜಿನ್ ಅಳವಡಿಸಲಾಗುವುದು.

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಈ ಎಂಜಿನ್ 19.8 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್‍‍ನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಹಾಗೂ ಹಿಂಭಾಗದಲ್ಲಿ ಶಾಕ್ ಅಬ್ಸರ್ವರ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಹಿಂಭಾಗ ಹಾಗೂ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಗಳಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ರಾಯಲ್ ಎನ್‍‍ಫೀಲ್ಡ್ ಇತ್ತೀಚಿಗೆ ಭಾರತದಲ್ಲಿ ಕ್ಲಾಸಿಕ್ 350 ಹಾಗೂ ಬುಲೆಟ್ 350 ಬೈಕುಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿತ್ತು. ಕೈಗೆಟುಕುವ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ, ಚೆನ್ನೈ ಮೂಲದ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಮಾರಾಟ ಪ್ರಮಾಣವು ಹೆಚ್ಚಾಗುವಂತೆ ಮಾಡಿದ್ದವು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೂಲ ಮಾದರಿಯಲ್ಲಿ ಬಿಡುಗಡೆಯಾದ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಕ್ಲಾಸಿಕ್ 350 ಹಾಗೂ ಬುಲೆಟ್ 350 ಬೈಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು, ಹೊಸ ಮೂಲ ಮಾದರಿಯ ಥಂಡರ್‍‍ಬರ್ಡ್ 350 ಬೈಕುಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗ ಬಹುದೆಂಬ ನಿರೀಕ್ಷೆಯಲ್ಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಆರ್‍ಇ ಥಂಡರ್‍‍ಬರ್ಡ್ 350

ಹೊಸ ಮೂಲ ಮಾದರಿಯ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿರುವುದರ ಜೊತೆಗೆ ರಾಯಲ್ ಎನ್‍‍ಫೀಲ್ಡ್ ತನ್ನ ಸರಣಿಯ ಎಲ್ಲಾ ಬೈಕುಗಳಲ್ಲಿರುವ ಎಂಜಿನ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿದೆ.

Source: Rushlane

Most Read Articles

Kannada
English summary
New Royal Enfield Thunderbird 350 Base Variant In The Works: To Feature Single-Channel ABS - Read in kannada
Story first published: Tuesday, September 24, 2019, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X