ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

2020ರ ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್ ಬೈಕ್ ಅನ್ನು ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಬೈಕ್‍‍ವಾಲೆ ಬಹಿರಂಗಗೊಳಿಸಿರುವ ಚಿತ್ರಗಳಲ್ಲಿ ಹೊಸ ಬೈಕಿನಲ್ಲಿ ಹಲವು ಕಾಸ್ಮೆಟಿಕ್ ಹಾಗೂ ಮೆಕಾನಿಕಲ್ ಅಪ್‍‍ಡೇಟ್‍‍ಗಳನ್ನು ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಬೈಕಿನ ಮೂಲ ವಿನ್ಯಾಸವಾದ ಕ್ರೂಸರ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸ್ಪೈ ಚಿತ್ರಗಳಲ್ಲಿ ಹೊಸ ಬೈಕ್ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳನ್ನು ಹೊಂದಿರುವ ಹೊಸ ಎಲ್‍ಇ‍‍ಡಿ ಹೆಡ್‍‍ಲೈಟ್‍‍ಗಳನ್ನು ಹೊಂದಿರುವುದನ್ನು ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಸ್ಪಾಟ್ ಟೆಸ್ಟ್ ಮಾಡಲಾಗಿರುವ ಥಂಡರ್‍‍ಬರ್ಡ್ ಎಕ್ಸ್ ಬೈಕಿನ ಸೈಡ್ ಪ್ಯಾನೆಲ್‍‍ಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಹೊಸ ಟೇಲ್ ಲ್ಯಾಂಪ್, ಹಿಂಬದಿಯ ಫೆಂಡರ್ ಮೇಲೆ ಮರು ಜೋಡಿಸಲಾಗಿರುವ ರೇರ್ ಟರ್ನ್ ಸಿಗ್ನಲ್ ಇಂಡಿಕೇಟರ್, ಇಂಟಿಗ್ರೇಟೆಡ್ ಮಾಡಲಾಗಿರುವ ರಿಜಿಸ್ಟ್ರೇಷನ್ ಪ್ಲೇಟ್‍‍ಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಇದರ ಜೊತೆಗೆ ಥಂಡರ್‍‍ಬರ್ಡ್ ಎಕ್ಸ್ ನಲ್ಲಿ ಸ್ಪ್ಲಿಟ್ ಸೀಟುಗಳಿವೆ. ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿ ಒಂದೇ ಸೀಟ್ ಅನ್ನು ನೀಡಲಾಗಿದೆ. ಹೊಸ ವಿನ್ಯಾಸದ ಸೀಟ್ ಸವಾರರಿಗೆ ಹಾಗೂ ಹಿಂಬದಿಯ ಸವಾರರಿಗೆ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್ ನಲ್ಲಿ ಸಿಂಗಲ್ ಪಾಡ್, ಅನಲಾಗ್ ಸ್ಪೀಡೊಮೀಟರ್ ಹೊಂದಿರುವ ಎಲ್‍‍ಸಿ‍‍ಡಿ ಸ್ಕ್ರೀನ್ ಇಂಟಿಗ್ರೇಟೆಡ್ ಆಗಿರುವ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿವೆ. ಹೊಸ ಬೈಕ್ ಇಗ್ನಿಷನ್ ಮಾಡ್ಯುಲ್ ಹಾಗೂ ಹೈ-ಲೋ ಬೀಮ್ ಶಿಫ್ಟರ್‍‍ಗಳಿಗಾಗಿ ಹೊಸ ಹಾಗೂ ಹಳೆಯ ಟಾಗಲ್ ಟೈಪಿನ ಸ್ವಿಚ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಸ್ಪಾಟ್ ಟೆಸ್ಟ್ ಮಾಡಲಾದ ಥಂಡರ್‍‍ಬರ್ಡ್ ಎಕ್ಸ್ ಬೈಕ್ ಕಪ್ಪು ಬಣ್ಣವನ್ನು ಹೊಂದಿದೆ. ಈ ಬಣ್ಣವು ಬೈಕಿಗೆ ಆಕರ್ಷಕ ಲುಕ್ ನೀಡುತ್ತದೆ. ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವುದಕ್ಕಿಂತ ನಯವಾದ, ಉದ್ದವಾದ ಫ್ಯೂಯಲ್ ಟ್ಯಾಂಕ್ ಅನ್ನು ಹೊಸ ಥಂಡರ್‍‍ಬರ್ಡ್ ಎಕ್ಸ್ ಬೈಕ್ ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಹೊಸ ಥಂಡರ್‍‍ಬರ್ಡ್ ಎಕ್ಸ್ ಬೈಕಿನಲ್ಲಿ ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಇರುವ 346 ಸಿಸಿಯ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಎಂಜಿನ್ ಅನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಹಳೆಯ ಬೈಕ್ 19.8 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಎಂಜಿನ್ ಅನ್ನು ಅಪ್‍‍ಗ್ರೇಡ್‍‍ಗೊಳಿಸಿರುವ ಕಾರಣಕ್ಕೆ ಪವರ್ ಉತ್ಪಾದನೆಯ ಅಂಕಿ ಅಂಶಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.65 ಲಕ್ಷಗಳಾಗುವ ಸಾಧ್ಯತೆಗಳಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕಿನ ಬೆಲೆಯು ಈಗಿರುವ ಬೆಲೆಗಿಂತ ರೂ.20,000 ಹೆಚ್ಚಾಗುವ ಸಾಧ್ಯತೆಗಳಿವೆ. ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಬೈಕಿನ ನಿಖರವಾದ ಬೆಲೆಯ ಬಗ್ಗೆ ತಿಳಿಯಲಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಎಕ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಥಂಡರ್‍‍ಬರ್ಡ್ ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಈ ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಎಂಜಿನ್ ಅಪ್‍‍ಗ್ರೇಡ್‍‍ಗೊಳಿಸುವ ಜೊತೆಗೆ ಹಲವಾರು ಬದಲಾವಣೆಗಳನ್ನು ಮಾಡಿದೆ.

Source: Bikewale

Article Published On: Wednesday, December 18, 2019, 17:54 [IST]
English summary
Spy Pics: 2020 Royal Enfield Thunderbird X Spotted Testing - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+