ಕೇವಲ ರೂ.38 ಸಾವಿರಕ್ಕೆ ಬಿಡುಗಡೆಗೊಂಡ ಪೊಲಾರಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಇಂಧನ ಆಧಾರಿತ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚುವರಿ ಶುಲ್ಕಗಳಿಂದಾಗಿ ಬಹುತೇಕ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಪೊಲಾರಿಟಿ ಸಂಸ್ಥೆಯು ಅತ್ಯುತ್ತಮ ಬೆಲೆಗಳಲ್ಲಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ಇದು ಅತ್ಯುತ್ತಮ ಬೆಲೆಯ ಎಲೆಕ್ಟ್ರಿಕ್ ಬೈಕ್- ರೂ.38 ಸಾವಿರಕ್ಕೆ ಬಿಡುಗಡೆಗೊಂಡ ಪೊಲಾರಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್

ಪುಣೆ ಮೂಲದ ಪೊಲಾರಿಟಿ ಸಂಸ್ಥೆಯು ತನ್ನ ಮೊದಲ ಪ್ರಯತ್ನದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 6 ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳ ಬೆಲೆಯು ರೂ.38 ಸಾವಿರದಿಂದ ಹೈ ಎಂಡ್ ಮಾದರಿಯು 1.10 ಲಕ್ಷ ಬೆಲೆ ಪಡೆದುಕೊಂಡಿವೆ. ಬಿಡುಗಡೆ ಮಾಡಲಾದ ಬೈಕ್‌ಗಳು ಸ್ಪೋರ್ಟ್ಸ್ ಮತ್ತು ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಖರೀದಿಗೆ ಲಭ್ಯವಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ.

ಸ್ಪೋರ್ಟ್ಸ್ ವರ್ಷನ್‌ನಲ್ಲಿ ಎಸ್1ಕೆ, ಎಸ್2ಕೆ ಮತ್ತು ಎಸ್3ಕೆ ಎನ್ನುವ ಎಲೆಕ್ಟ್ರಿಕ್ ಬೈಕ್‌ಗಳು ಬಿಡುಗಡೆಯಾಗಿದ್ದು, ಇವುಗಳ ಬೆಲೆಯು ಆರಂಭಿಕವಾಗಿ ರೂ.38 ಸಾವಿರದಿಂದ ಹೈ ಎಂಡ್ ಮಾದರಿಯು ರೂ.1.05 ಲಕ್ಷ ಬೆಲೆ ಹೊಂದಿದೆ.

ಇದು ಅತ್ಯುತ್ತಮ ಬೆಲೆಯ ಎಲೆಕ್ಟ್ರಿಕ್ ಬೈಕ್- ರೂ.38 ಸಾವಿರಕ್ಕೆ ಬಿಡುಗಡೆಗೊಂಡ ಪೊಲಾರಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್

ಹಾಗೆಯೇ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಇ1ಕೆ, ಇ2ಕೆ ಮತ್ತು ಇ3ಕೆ ಎನ್ನುವ ಮೂರು ಎಲೆಕ್ಟ್ರಿಕ್ ಬೈಕ್‌ಗಳು ಖರೀದಿಗೆ ಲಭ್ಯವಿದ್ದು, ಇವುಗಳ ಬೆಲೆಯು ಆರಂಭಿಕವಾಗಿ ರೂ.40 ಸಾವಿರದಿಂದ ಹೈ ಎಂಡ್ ಮಾದರಿಯು ರೂ.1.10 ಲಕ್ಷ ಬೆಲೆ ಪಡೆದುಕೊಂಡಿವೆ.

ಪೊಲಾರಿಟಿ ಬೈಕ್‌ಗಳ ಬೆಲೆ ಪಟ್ಟಿ

ವೆರಿಯೆಂಟ್ ದರ
ಇ1ಕೆ ರೂ. 38,000
ಇ2ಕೆ ರೂ. 65,000
ಇ3ಕೆ ರೂ. 1.05 ಲಕ್ಷ
ಎಸ್1ಕೆ ರೂ. 40,000
ಎಸ್2ಕೆ ರೂ. 70,000
ಎಸ್3ಕೆ ರೂ. 1.10 ಲಕ್ಷ

ಪೊಲಾರಿಟಿ ಇ-ಬೈಕ್‌ಗಳು ನೋಡಲು ಸೈಕಲ್ ವಿನ್ಯಾಸವನ್ನೇ ಹೊಂದಿದ್ದರೂ ಸಹ ವಿಭಿನ್ನ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗರಿಷ್ಠ ಮೈಲೇಜ್ ಮತ್ತು ವೇಗವನ್ನು ಪಡೆದುಕೊಂಡಿದ್ದು, ಹೊಸ ಬೈಕ್‌ಗಳು 1kW, 2kW, 3kW ಸಾಮಾರ್ಥ್ಯದ ಬಿಎಲ್‌ಡಿಸಿ ಮೋಟಾರ್ ಜೋಡಣೆ ಹೊಂದಿವೆ. ಜೊತೆಗೆ 1 ಸಾವಿರ ಬಾರಿ ರೀಚಾರ್ಜ್ ಮಾಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಒದಗಿಸಲಾಗಿದ್ದು, ಬ್ಯಾಟರಿ ಮೇಲೆ ಗರಿಷ್ಠ ಮೂರು ವರ್ಷಗಳ ವಾರಂಟಿ ಘೋಷಿಸಲಾಗಿದೆ.

ಇದು ಅತ್ಯುತ್ತಮ ಬೆಲೆಯ ಎಲೆಕ್ಟ್ರಿಕ್ ಬೈಕ್- ರೂ.38 ಸಾವಿರಕ್ಕೆ ಬಿಡುಗಡೆಗೊಂಡ ಪೊಲಾರಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್

ಮೈಲೇಜ್ ಮತ್ತು ಟಾಪ್ ಸ್ಪೀಡ್

ಪೊಲಾರಿಟಿ ಎಲೆಕ್ಟ್ರಿಕ್ ಬೈಕ್‌ಗಳು ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆ ಹೊಂದಿದ್ದು, ಎಂಟ್ರಿ ಲೆವೆಲ್ ಮಾದರಿಯಾದ ಇ1ಕೆ ಬೈಕ್ ಆವೃತ್ತಿಯು ಪ್ರತಿ ಗಂಟೆಗೆ 40 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ ಎಸ್3ಕೆ ಟಾಪ್ ಎಂಡ್ ಆವೃತ್ತಿಯು ಪ್ರತಿ ಗಂಟೆಗೆ 100ಕಿ.ಮಿ ಟಾಪ್ ಸ್ಪೀಡ್ ಸಾಧಿಸಬಲ್ಲದು.

ಇಲ್ಲದೇ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಚಾರ್ಜಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆಯ್ಕೆ ರೂಪದಲ್ಲಿ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದ್ದು, ಆಸಕ್ತ ಗ್ರಾಹಕರು ರೂ.1 ಸಾವಿರ ಮುಗಂಡದೊಂದಿಗೆ ಪೊಲಾರಿಟಿ ಇ-ಬೈಕ್‌ಗಳಿಗೆ ಬುಕ್ಕಿಂಗ್ ತೆರೆಯಲಾಗಿದೆ.

ಸದ್ಯಕ್ಕೆ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಪ್ರದರ್ಶನ ಮಾಡಿ ಬೆಲೆ ಮಾಹಿತಿ ಹಂಚಿಕೊಂಡಿರುವ ಪೊಲಾರಿಟಿ ಸಂಸ್ಥೆಯು ಮುಂಬರುವ ಜನವರಿ ಹೊತ್ತಿಗೆ ಹೊಸ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಮೊದಲ 70 ಸಾವಿರ ಮಹಾರಾಷ್ಟ್ರದಲ್ಲಿನ ಗ್ರಾಹಕರಿಗೆ ರಾಜ್ಯ ಜಿಎಸ್‌ಟಿ ದರವನ್ನು ಬಿಟ್ಟುಕೊಡುವುದಾಗಿ ಹೇಳಿದೆ.

ಇದು ಅತ್ಯುತ್ತಮ ಬೆಲೆಯ ಎಲೆಕ್ಟ್ರಿಕ್ ಬೈಕ್- ರೂ.38 ಸಾವಿರಕ್ಕೆ ಬಿಡುಗಡೆಗೊಂಡ ಪೊಲಾರಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್

ಇನ್ನು ಪೊಲಾರಿಟಿ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ಸ್ ಜೋಡಿಸಲಾಗಿದ್ದು, ಲಾರ್ಜ್ ಸ್ಪೋಕ್ ವೀಲ್ಹ್, ನಾಬಿ ಟೈರ್ಸ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೊಲ್, ಎಲ್ಇಡಿ ಲೈಟ್ಸ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಹೆಚ್ಚುವರಿಯಾಗಿ ಬ್ಲೂಟೂಥ್ ಕನೆಕ್ವಿವಿಟಿ, ಜಿಪಿಎಸ್ ನ್ಯಾವಿಗೆಷನ್ ನೀಡಲಾಗಿದೆ. ಹಾಗೆಯೇ ಪೆಡಲ್ ಅಸಿಸ್ಟ್ ಸೌಲಭ್ಯವನ್ನು ಸಹ ಹೊಂದಿರುವ ಪೊಲಾರಟಿ ಎಲೆಕ್ಟ್ರಿಕ್ ಬೈಕ್‌ಗಳು ಅತ್ಯುತ್ತಮ ಆಯ್ಕೆಯಾಗಲಿದ್ದು, 2020ರ ಮೊದಲ ತ್ರೈಮಾಸಿಕ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

Article Published On: Saturday, September 21, 2019, 8:45 [IST]
English summary
Polarity Smart Electric Bikes Launched In India: Prices Start At Rs 38,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+