ರಿವೋಲ್ಟ್ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕ್ ಟೀಸರ್ ಬಿಡುಗಡೆ
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನದತ್ತ ಎಲ್ಲರ ಚಿತ್ತ ನೆಟ್ಟಿದೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಕ್ಕೆ ವಿಶೇಷ ಅನುದಾನ ನೀಡಿದೆ. ಭಾರತದ ಹಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಇದೀಗ ರಿವೋಲ್ಟ್ ಸಂಸ್ಥೆಯು ಇದೇ ಸಾಲಿನಲ್ಲಿ ಸೇರ್ಪಡೆಗೊಂಡಿದೆ.

ರಿವೋಲ್ಟ್ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಎರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಬಳಿಕ ತನ್ನ ಮುಂದಿನ ಕೆಫೆ ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ರಿವೋಲ್ಟ್ ಕಂಪನಿ ವತಿಯಿಂದ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ನೂತನ ಬೈಕ್ ಇದಾಗಿದೆ. ಇದು ಕೆಫೆ-ರೇಸರ್ ಕೂಡ ಎಲೆಕ್ಟಿಕ್ ಬೈಕ್ ಆಗಿರಬಹುದು.

ದೇಶಿಯ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ ಆರ್‍ವಿ 300 ಮತ್ತು ಆರ್‍ವಿ 400 ಬಿಡುಗಡೆ ಮಾಡುವ ಸಮಾರಂಭದಲ್ಲಿ ತನ್ನ ಮುಂದಿನ ಎಲೆಕ್ಟ್ರಿಕ್ ಬೈಕಿನ ಟೀಸರ್ ಅನ್ನು ಪ್ರದರ್ಶಿಸಿದರು. ಕೆಫೆ-ರೇಸರ್ ಎಲೆಕ್ಟ್ರಿಕ್ ಬೈಕ್ ಟೀಸರ್‍ನಲ್ಲಿ ಕಂಡುಬದಂತೆ ದುಂಡಾದ ಹೆಡ್‍ಲ್ಯಾಂಪ್ ಮತ್ತು ಕ್ಲಿಪ್ ಆನ್ ಹ್ಯಾಂಡಲ್‍ಬಾರ್‍ಗಳನ್ನು ಹೊಂದಿದ್ದು, ಶಾರ್ಪ್ ಲೈನ್‍ಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ನೂತನ ಕೆಫೆ ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್‍ನಲ್ಲಿ ಹೆಂಡ್‍ಲ್ಯಾಂಪ್‍ಗಳು ಮತ್ತು ಟೈಲ್‍ಲೈಟ್‍ಗಳು ಎಲ್‍ಇಡಿ ಲೈಟಿಂಗ್‍ನೊಂದಿಗೆ ಬರಲಿದ್ದು, ಫ್ಲೋಟಿಂಗ್ ಟೈಲ್ ಶೈಲಿಯ ಸಿಂಗಲ್ ಸೀಟ್ ಬೈಕ್ ಇದಾಗಿದೆ. ಮುಂದಿನ ಕೆಫೆ-ರೇಸರ್ ಶೈಲಿಯ ಎಲೆಕ್ಟಿಕ್ ಮೋಟರ್ ಬೈಕಿನ ವಿನ್ಯಾಸದ ಒಂದು ಟೀಸರ್ ಚಿತ್ರ ಮಾತ್ರ ಪ್ರದರ್ಶಿಸಿದ್ದು ಬಿಟ್ಟರೆ ಈ ಬೈಕಿನ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಅಧಿಕೃತವಾಗಿ ನೀಡಿಲ್ಲ.

ರಿವೋಲ್ಟ್ ಮೋಟಾರ್ಸ್ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ಎರಡು ಎಲೆಕ್ಟ್ರಿಕ್ ಬೈಕ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಆರ್‍ವಿ 400 ಹೆಚ್ಚು ಪ್ರೀಮಿಯಂ ಹೊಂದಿದ್ದು, ಆರ್‍ವಿ 300 ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಬಿಡುಗಡೆ ಮಾಡಿದ್ದಾರೆ.

ಆರ್‍ವಿ400 ಬೈಕಿನಲ್ಲಿ 3.2ಕೆಡಬ್ಲ್ಯು ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಚಲಿಸುವ ಸಾಮರ್ಥ್ಯ ಹೊಂದಿದ್ದು, ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಮಾಡಿದರೆ 156 ಕಿ.ಮೀ ಚಲಿಸುತ್ತದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮುಂಬರುವ ಕೆಫೆ-ರೇಸರ್ ಎಲೆಕ್ಟ್ರಿಕ್ ಬೈಕಿನಲ್ಲೂ ಇದೇ ಪವರ್‍ಟ್ರೇನ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಆದರೆ ಎಲೆಕ್ಟಿಕ್ ಬೈಕಿನ ಪವರ್ ಮತ್ತು ಕ್ಷಮತೆಯೆನ್ನು ಹೆಚ್ಚಿಸಬಹುದು.ಇಂದಿನಿಂದ ದೆಹಲಿ ಮತ್ತು ಪುಣೆಯ ಕಂಪನಿ ಡೀಲರ್‍ಗಳು ಆರ್‍ವಿ 300 ಮತ್ತು ಆರ್‍ವಿ 400 ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಅನ್ನು ಸ್ವೀಕರಿಸಲು ರಿವೋಲ್ಟ್ ಅಧಿಕೃತವಾಗಿ ಪ್ರಾರಂಭಿಸಿದೆ. ರೂ. 1,000 ಕ್ಕೆ ಈ ಎರಡು ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಮಾಡಬಹುದು.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆರ್‍ವಿ 400 ಮತ್ತು ಆರ್‍ವಿ 300 ಎಲೆಕ್ಟ್ರಿಕ್ ಬೈಕ್ ಸಧ್ಯ ದೆಹಲಿ ಮತ್ತು ಪುಣೆಯಲ್ಲಿ ಮಾತ್ರ ಲಭ್ಯವಿದ್ದು, ಸೆಪ್ಟಂಬರ್‍ನಿಂದ ಡೆಲಿವರಿ ಮಾಡಲು ಪ್ರಾರಂಭಿಸುತ್ತಾರೆ. ದೇಶದ ಇತರ ಪ್ರಮುಖ ನಗರಗಳಿಗೂ ಈ ಎರಡು ಎಲೆಕ್ಟಿಕ್ ಬೈಕ್‍ನ್ನು ವಿಸ್ತರಿಸಲು ಮುಂದಾಗಿದೆ.

ದೇಶಿಯ ಮಾರುಕಟ್ಟೆಗೆ ರಿವೋಲ್ಟ್ ಮೋಟಾರ್ಸ್ ತಮ್ಮ ಮುಂದಿನ ಬಹುನಿರೀಕ್ಷಿತ ಕೆಫ-ರೇಸರ್ ಎಲೆಕ್ಟ್ರಿಕ್ ಬೈಕಿನ ಟೀಸರ್ ಚಿತ್ರವನ್ನು ಪ್ರದರ್ಶಿಸಿದೆ. ಮುಂಬರುವ ಕೆಫೆ-ರೇಸರ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಪ್ರಸ್ತುತವಾಗಿ ಆರಂಭಿಕ ಹಂತದಲಿದ್ದು, 2020ರ ಮಧ್ಯದಲ್ಲಿ ನೂತನ ಕೆಫೆ-ರೇಸರ್ ಎಲೆಕ್ಟ್ರಿಕ್ ಬೈಕ್‍ನ್ನು ಬಿಡುಗಡೆ ಮಾಡವ ಸಾಧ್ಯತೆಗಳಿವೆ.


Click it and Unblock the Notifications








