ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ರಿವೋಲ್ಟ್ ಮೋಟಾರ್ಸ್ ತನ್ನ ಬೈಕುಗಳನ್ನು ಖರೀದಿಸುವ ಗ್ರಾಹಕರಿಗೆ ಗೋ ಮೆಕಾನಿಕ್ ಸರ್ವಿಸ್ ಸ್ಟೇಷನ್‍‍ಗಳ ಮೂಲಕ ಸೇವೆ ನೀಡಲಿದೆ. ಆಯ್ದ ಗೋ ಮೆಕಾನಿಕ್ ಸ್ಟೇಷನ್‍‍ಗಳಲ್ಲಿ ಬ್ಯಾಟರಿ ಬದಲಿಸುವ ಸೇವೆಯನ್ನು ಸಹ ನೀಡಲಾಗುವುದು.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ರಿವೋಲ್ಟ್ ಗ್ರಾಹಕರು ಗೋ ಮೆಕಾನಿಕ್ ವೆಬ್‍‍ಸೈಟಿನಲ್ಲಿ ಅಥವಾ ಸ್ಮಾರ್ಟ್ ಫೋನಿನಲ್ಲಿರುವ ಅಪ್ಲಿಕೇಶನ್‍‍ನಿಂದ ಸರ್ವಿಸ್ ಅಪಾಯಿಂಟ್ ಮೆಂಟ್ ಪಡೆಯಬಹುದು. ಗೋ ಮೆಕಾನಿಕ್ ಸರ್ವಿಸ್ ಸ್ಟೇಷನ್‍‍ಗಳಲ್ಲಿರುವ ಸಿಬ್ಬಂದಿಗೆ ಎಲೆಕ್ಟ್ರಿಕ್ ಬೈಕುಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ತರಬೇತಿ ನೀಡಲಾಗಿದೆ. ರಿವೋಲ್ಟ್ ಕಂಪನಿಯು ಹೆಚ್ಚಿನ ಪ್ರದೇಶಗಳಲ್ಲಿ ಸೇವೆಯನ್ನು ನೀಡುವ ಉದ್ದೇಶದಿಂದ ಗೋಮೆಕಾನಿಕ್‌ನೊಂದಿಗೆ ಈ ಸಹಭಾಗಿತ್ವವನ್ನು ಹೊಂದಿದೆ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಗೋಮೆಕಾನಿಕ್ ವರ್ಕ್‍‍ಶಾಪ್‍‍ಗಳು ರಿವೋಲ್ಟ್ ಗ್ರಾಹಕರಿಗೆ ಸ್ವಾಪ್ ಸೇವೆಯನ್ನು ನೀಡಲು ಬ್ಯಾಟರಿ ಸ್ವಾಪ್ ಸ್ಟೇಷನ್ ಅನ್ನು ಸಹ ಹೊಂದಲಿವೆ. ಇದರಿಂದಾಗಿ ನಗರದಾದ್ಯಂತ ಸ್ವಾಪ್ ಕೇಂದ್ರಗಳನ್ನು ಸುಲಭವಾಗಿ ವಿಸ್ತರಿಸಲು ಸಹಾಯವಾಗಲಿದೆ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಗೋಮೆಕಾನಿಕ್, ತನ್ನ ಗ್ರಾಹಕರಿಗೆ ಕಾರುಗಳನ್ನು ಸರ್ವಿಸ್ ಮಾಡಲು ಪಿಕ್ ಅಂಡ್ ಡ್ರಾಪ್ ಸೇವೆಯನ್ನು ನೀಡುತ್ತಿದೆ. ರಿವೋಲ್ಟ್ ಗ್ರಾಹಕರಿಗೂ ತಮ್ಮ ಬೈಕುಗಳನ್ನು ಸರ್ವಿಸ್ ಮಾಡಲು ಇದೇ ಸೇವೆಯನ್ನು ನೀಡಲಾಗುತ್ತದೆಯೇ ಎಂಬುದನ್ನು ಖಚಿತ ಪಡಿಸಿಲ್ಲ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಗೋಮೆಕಾನಿಕ್ ಸಹ-ಸಂಸ್ಥಾಪಕರಾದ ಅಮಿತ್ ಭಾಸಿನ್‍‍ರವರು ಮಾತನಾಡಿ, ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಬೈಕ್ ಕಂಪನಿಯ ಸರ್ವಿಸ್ ಹಾಗೂ ಮೆಂಟೆನೆನ್ಸ್ ಪಾಲುದಾರರಾಗಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ಗೋಮೆಕಾನಿಕ್ ಕಂಪನಿಯ ಮೇಲೆ ನಂಬಿಕೆಯಿಟ್ಟಿರುವುದಕ್ಕೆ ರಿವೋಲ್ಟ್ ಕಂಪನಿಗೆ ಕೃತಜ್ಞರಾಗಿರಬೇಕು. ಈ ಸಹಭಾಗಿತ್ವದಿಂದ, ನಮ್ಮ ಎಲೆಕ್ಟ್ರಿಕ್ ಫ್ಯೂಚರ್ ಯೋಜನೆಗೆ ಮತ್ತಷ್ಟು ಬಲ ಸಿಗಲಿದೆ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಕಡ್ಡಾಯವಾಗಲಿವೆ. ಈ ಸೇವೆಯಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೇರೆ ಕಂಪನಿಗಳಿಗಿಂತ ನಾವು ಮುಂದಿರಲಿದ್ದೇವೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಉತ್ತಮ ಗುಣಮಟ್ಟದ ಸರ್ವಿಸ್ ಹಾಗೂ ಮೆಂಟೆನೆನ್ಸ್ ಸೌಲಭ್ಯಗಳನ್ನು ನೀಡಲಿದ್ದೇವೆ ಎಂದು ಹೇಳಿದರು.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಈ ಸಹಭಾಗಿತ್ವದಿಂದಾಗಿ ಎಲೆಕ್ಟ್ರಿಕ್ ಬೈಕುಗಳ ಸರ್ವಿಸ್‍‍ಗೆ ಅನುಗುಣವಾಗಿ ಗೋಮೆಕಾನಿಕ್ ಪ್ರಮುಖ ಮೂಲಸೌಕರ್ಯಗಳನ್ನು ನೀಡಲಿದೆ. ಈ ವರ್ಕ್‍‍ಶಾಪ್‍‍ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಮೀಸಲಾದ ಸರ್ವಿಸಿಂಗ್ ಬೇ ಇರಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ರಿವೋಲ್ಟ್ ಇಂಟೆಲಿ‍‍ಕಾರ್ಪ್‍‍ನ ಸ್ಥಾಪಕರಾದ ರಾಹುಲ್ ಶರ್ಮಾರವರು ಮಾತನಾಡಿ, ಉದಯೋನ್ಮುಖ ಕಂಪನಿಯಾದ ನಾವು ಗ್ರಾಹಕರಿಗೆ ಬೈಕು ಖರೀದಿಯ ನಂತರ ತೊಂದರೆ ರಹಿತ ಸರ್ವಿಸ್ ಅನ್ನು ನೀಡಲು ಬದ್ದರಾಗಿದ್ದೇವೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಈ ಸೇವೆಗಾಗಿ ಗೋಮೆಕಾನಿಕ್‌ನ ಜೊತೆ ಸಹಭಾಗಿತ್ವವನ್ನು ಹೊಂದುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಇದರಿಂದ ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೈಕ್ ಹೊಂದಿರುವ ನಮ್ಮ ಗ್ರಾಹಕರು ಉತ್ತಮ ಸೇವೆಯನ್ನು ಪಡೆದು ತೃಪ್ತರಾಗಲಿದ್ದಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯು ತನ್ನ ಆರ್‍‍ವಿ 300 ಹಾಗೂ ಆರ್‍‍ವಿ 400 ಎಲೆಕ್ಟ್ರಿಕ್ ಬೈಕುಗಳನ್ನು ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸಿತು. ಕಂಪನಿಯು ತನ್ನ ಸಂಪೂರ್ಣ ಶ್ರೇಣಿಯ ಬೈಕುಗಳನ್ನು ಇ‍ಎಂಐನ ವಿಶಿಷ್ಟ ಯೋಜನೆಗಳೊಂದಿಗೆ ಮಾರಾಟ ಮಾಡಲಿದೆ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ರಿವೋಲ್ಟ್ ಬೈಕುಗಳನ್ನು ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ಪುಣೆಯಲ್ಲಿ ಮಾರಾಟ ಮಾಡಲಾಗುವುದು. ಶೀಘ್ರದಲ್ಲೇ ಬೈಕ್‌ಗಳನ್ನು ದೇಶದ ವಿವಿಧ ನಗರಗಳಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿಯು ಭರವಸೆ ನೀಡಿದೆ. ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಬುಕ್ಕಿಂಗ್‍‍ಗಳನ್ನು ಮತ್ತೆ ಆರಂಭಿಸಲಾಗಿದೆ.

ಗೋಮೆಕಾನಿಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ ರಿವೋಲ್ಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ ನಂತರ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು ರಿವೋಲ್ಟ್ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮೆಕ್ಯಾನಿಕ್ ಏನು ಮಾಡುತ್ತಿದ್ದಾನೆ, ಸರ್ವಿಸ್ ಸ್ಟೇಷನ್‍‍ಗಳು ಎಲ್ಲಿವೆ ಎಂಬುದರಿಂದ, ಸ್ಮಾರ್ಟ್ಫೋನ್ ಅಪ್ಲಿಕೇಶನ್‌ನಲ್ಲಿಯೇ ಅಪಾಯಿಂಟ್‍‍ಮೆಂಟ್ ಮಾಡುವವರೆಗೂ ಎಲ್ಲಾ ಸೇವೆಗಳನ್ನು ಸುಲಭಗೊಳಿಸಿದೆ.

Most Read Articles

Kannada
English summary
Revolt Motors To Offer Service Support For Customers Through GoMechanic Service Stations - Read in kannada
Story first published: Wednesday, September 11, 2019, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X