ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಹೊಸ ಮೋಟಾರ್ ವಾಹನ ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಈ ಕಾಯ್ದೆಯನ್ವಯ ದೇಶಾದ್ಯಂತ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ದೇಶದ ಜನತೆ ಭಾರೀ ಪ್ರಮಾಣದ ದಂಡವನ್ನು ತೆರಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಇದರ ನಡುವೆ ಹಲವು ಆಶ್ಚರ್ಯಕರ ನಿಯಮಗಳನ್ನು ಜಾರಿಗೊಳಿಸಿ ದಂಡ ವಿಧಿಸಲಾಗಿದೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಈಗ ಜಾರಿಗೊಳಿಸಲಾಗುತ್ತಿರುವ ನಿಯಮವು, ವಿಚಿತ್ರವಾಗಿ ಕಂಡರೂ ಹೊಸ ನಿಯಮವೇನಲ್ಲ. ಈ ನಿಯಮವು ಹಳೆಯದಾಗಿದ್ದು, ಈಗ ಜಾರಿಗೊಳಿಸಲಾಗುತ್ತಿದೆ. ಈ ನಿಯಮದ ಪ್ರಕಾರ ಯಾವುದೇ ದ್ವಿಚಕ್ರ ವಾಹನ ಸವಾರರು, ತಮ್ಮ ವಾಹನವನ್ನು ಸವಾರಿ ಮಾಡುವಾಗ ಚಪ್ಪಲಿ ಅಥವಾ ಸ್ಯಾಂಡಲ್‍‍ಗಳನ್ನು ಬಳಸುವಂತಿಲ್ಲ. ಈ ನಿಯಮವನ್ನು 2019ರ ಮೋಟಾರ್ ವಾಹನ ಕಾಯ್ದೆಯು ಜಾರಿಗೆ ಬರುವ ಮುನ್ನವೇ ಅಳವಡಿಸಲಾಗಿದೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಈ ನಿಯಮದ ಪ್ರಕಾರ, ಸವಾರರು ಹವಾಯಿ ಚಪ್ಪಲಿ, ಫ್ಲಿಪ್ ಫ್ಲಾಪ್ ಅಥವಾ ಸ್ಲಿಪರ್‍‍ಗಳನ್ನು ದ್ವಿಚಕ್ರ ವಾಹನ ಸವಾರಿ ಮಾಡುವ ಸಮಯದಲ್ಲಿ ಧರಿಸುವಂತಿಲ್ಲ. ಈ ರೀತಿಯ ಪಾದರಕ್ಷೆಗಳನ್ನು ಧರಿಸುವುದರಿಂದ ದ್ವಿಚಕ್ರ ವಾಹನ ಚಲಾಯಿಸುವಾಗ ಸವಾರನಿಗೆ ಗೇರುಗಳನ್ನು ಬದಲಿಸಲು ತೊಂದರೆಯಾಗಲಿದೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಜೊತೆಗೆ ಬೈಕ್ ಸ್ಲಿಪ್ ಆಗಬಹುದು ಎಂಬ ಕಾರಣಕ್ಕಾಗಿ ಈ ನಿಯಮವನ್ನು ಅಳವಡಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ, ರೂ.1,000 ದಂಡ ವಿಧಿಸಲಾಗುವುದು. ಪದೇ ಪದೇ ಈ ನಿಯಮವನ್ನು ಉಲ್ಲಂಘಿಸಿದರೆ, 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗುವುದು.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಇದರ ಜೊತೆಗೆ ಕಾಯ್ದೆಯಲ್ಲಿರುವ ಮತ್ತೊಂದು ನಿಯಮವನ್ನು ಸಹ ಕಟ್ಟು ನಿಟ್ಟಾಗಿ ಜಾರಿಗೆ ತರಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಭಾರೀ ತೂಕದ ಜೆ‍‍ಸಿಬಿಯನ್ನು ಟ್ರಕ್‍‍ನಲ್ಲಿ ಸಾಗಿಸುತ್ತಿದ್ದ ಓಡಿಶಾದ ಟ್ರಕ್ ಚಾಲಕನಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಈಗ ಉತ್ತರ ಪ್ರದೇಶ ಪೊಲೀಸರ ಕಣ್ಣು, ಟ್ರಕ್ ಚಾಲಕರ ಮೇಲೆ ಬಿದ್ದಿದೆ. ಆದರೆ ಈ ಬಾರಿ ವಿಭಿನ್ನ, ವಿಶಿಷ್ಟವಾದ ಸಂಚಾರಿ ನಿಯಮ ಉಲ್ಲಂಘನೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಉತ್ತರ ಪ್ರದೇಶ ಪೊಲೀಸರು, ಟ್ರಕ್ ಚಾಲನೆ ಮಾಡುವಾಗ ಲುಂಗಿ, ಬನಿಯನ್ ಧರಿಸುವ ಚಾಲಕರಿಗೆ ದಂಡ ವಿಧಿಸಲಿದ್ದಾರೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ದಕ್ಷಿಣ ಭಾರತದಲ್ಲಿನ ಬಹುತೇಕ ಟ್ರಕ್ ಚಾಲಕರು ಆರಾಮದಾಯಕವೆನಿಸುವ ಕಾರಣಕ್ಕೆ ಲುಂಗಿ ಹಾಗೂ ಬನಿಯನ್‍‍ಗಳನ್ನು ಧರಿಸಿ, ಟ್ರಕ್ ಚಲಾಯಿಸುತ್ತಾರೆ. ಟ್ರಕ್ ಚಾಲನೆ ವೇಳೆಯಲ್ಲಿ ಉಂಟಾಗುವ ವಿಪರೀತ ಸೆಖೆಯ ಕಾರಣಕ್ಕೆ ಟ್ರಕ್ ಚಾಲಕರು ಲುಂಗಿ ಹಾಗೂ ಬನಿಯನ್ ಧರಿಸುವುದು ಸಾಮಾನ್ಯವಾದ ಸಂಗತಿಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಲುಂಗಿ ಬನಿಯನ್ ಧರಿಸಿ ಟ್ರಕ್ ಚಾಲನೆ ಮಾಡುವ ಟ್ರಕ್ ಚಾಲಕರಿಗೆ ಉತ್ತರ ಪ್ರದೇಶ ಪೊಲೀಸರು ರೂ.2,000 ದಂಡ ವಿಧಿಸಲಿದ್ದಾರೆ. ಕೇವಲ ಟ್ರಕ್ ಚಾಲಕರಿಗೆ ಮಾತ್ರವೇ ದಂಡ ವಿಧಿಸುತ್ತಿಲ್ಲ. ಬದಲಿಗೆ, ಟ್ರಕ್ ಚಾಲಕರಿಗೆ ಸಹಾಯ ಮಾಡಲು, ಚಾಲಕನ ಜೊತೆಯಲ್ಲಿ ಚಲಿಸುವ ಕ್ಲೀನರ್ ಹಾಗೂ ಸಹಾಯಕರಿಗೂ ಲುಂಗಿ, ಬನಿಯನ್ ಧರಿಸಿದ್ದರೆ ದಂಡ ವಿಧಿಸಲಾಗುವುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಇನ್ನು ಮುಂದೆ, ಟ್ರಕ್ ಚಾಲಕರು ಹಾಗೂ ಅವರ ಸಹಾಯಕರು ಟ್ರಕ್‌ ಚಾಲನೆ ಮಾಡುವಾಗ ಶರ್ಟ್ ಅಥವಾ ಟೀ ಶರ್ಟ್, ಉದ್ದವಾದ ಪ್ಯಾಂಟ್ ಹಾಗೂ ಸುರಕ್ಷತಾ ಬೂಟುಗಳನ್ನು ಧರಿಸಬೇಕಾಗುತ್ತದೆ. ಇಲ್ಲದಿದ್ದರೆ ರೂ.2,000 ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘಿಸಿ ಉತ್ತರಪ್ರದೇಶದಲ್ಲಿ ಹಾದು ಹೋಗುವ ಯಾವುದೇ ರಾಜ್ಯದ ಟ್ರಕ್ ಹಾಗೂ ಲಾರಿ ಚಾಲಕರಿಗೆ ಈ ದಂಡವನ್ನು ವಿಧಿಸಲಾಗುವುದು.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಗಮನಿಸಬೇಕಾದ ಸಂಗತಿಯೆಂದರೆ, ಈ ನಿಯಮವನ್ನು ಈಗ ಅಳವಡಿಸಲಾಗಿಲ್ಲ. ಮೋಟಾರ್ ವಾಹನ ಕಾಯ್ದೆ 1939 ಹಾಗೂ 1989ರಲ್ಲಿಯೇ ಈ ನಿಯಮಗಳನ್ನು ಅಳವಡಿಸಲಾಗಿತ್ತು. ಆಗ ಈ ಕಾಯ್ದೆಗಳಲ್ಲಿ ಡ್ರೆಸ್ ಕೋಡ್‍‍ಗಳನ್ನು ಉಲ್ಲಂಘಿಸಿದರೆ ರೂ.500 ದಂಡ ವಿಧಿಸುವ ನಿಯಮವನ್ನು ಅಳವಡಿಸಲಾಗಿತ್ತು.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಹೊಸ ಕಾಯ್ದೆಯನ್ವಯ ದಂಡದ ಮೊತ್ತವನ್ನು ರೂ.2,000ಗಳಿಗೆ ಏರಿಸಲಾಗಿದೆ. ಟ್ರಕ್ ಚಾಲಕರು ಹಾಗೂ ಅವರ ಸಹಾಯಕರು ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಟ್ರಕ್ ಚಾಲನೆ ಮಾಡುವುದರಿಂದ ಇದುವರೆಗೂ ಈ ಡ್ರೆಸ್ ಕೋಡ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸಿರಲಿಲ್ಲ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಆದರೆ ಈಗ ಉತ್ತರ ಪ್ರದೇಶ ಪೊಲೀಸರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಇದಾದ ನಂತರ ಬೇರೆ ರಾಜ್ಯಗಳ ಪೊಲೀಸರು ಸಹ ಈ ನಿಯಮವನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಲಕ್ನೋ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪೂರ್ಣೇಂದು ಸಿಂಗ್‍‍ರವರು ಲುಂಗಿ ಹಾಗೂ ಬನಿಯನ್ ಧರಿಸುವವರಿಗೆ ಹೊಸ ದಂಡವನ್ನು ವಿಧಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರಕ್ ಚಾಲಕರ ಡ್ರೆಸ್ ಕೋಡ್ 1939ರ ಮೋಟಾರ್ ವಾಹನ ಕಾಯ್ದೆಯ ಭಾಗವಾಗಿತ್ತು.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

1989ರಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಈ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ರೂ.500 ದಂಡ ವಿಧಿಸುವುದನ್ನು ಅಳವಡಿಸಲಾಯಿತು. ಈಗ ಜಾರಿಗೆ ಬಂದಿರುವ ಹೊಸ ಕಾಯ್ದೆಯನ್ವಯ ಡ್ರೆಸ್ ಕೋಡ್ ಉಲ್ಲಂಘನೆ ಮಾಡುವ ಟ್ರಕ್ ಚಾಲಕರಿಗೆ ರೂ.2,000ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಉತ್ತರ ಪ್ರದೇಶದ ಗಂಗಾಫಲ್‌ನ ಹೆಚ್ಚುವರಿ ಸಾರಿಗೆ ಆಯುಕ್ತರು ಮಾತನಾಡಿ, ಕೆಲವು ಸಂಚಾರ ಸುರಕ್ಷತಾ ನಿಯಮಗಳನ್ನು ರೂಪಿಸಲು ಹಾಗೂ ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡವನ್ನು ವಿಧಿಸುವ ಅಧಿಕಾರವನ್ನು ಮೋಟಾರ್ ವಾಹನ ಕಾಯ್ದೆಯು ರಾಜ್ಯಗಳಿಗೆ ನೀಡಿದೆ.

ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಈ ಕಾಯ್ದೆಯ ಪ್ರಕಾರ, ಲುಂಗಿ ಹಾಗೂ ಬನಿಯನ್‍‍ಗಳನ್ನು ಧರಿಸಿ ಟ್ರಕ್ ಚಾಲನೆ ಮಾಡುವುದನ್ನು ನಿಷೇಧಿಸಲಾಗಿದೆ. ಟ್ರಕ್ ಚಾಲನೆ ಮಾಡುವ ಚಾಲಕರು ಪೂರ್ಣವಾದ ಪ್ಯಾಂಟ್, ಸರಿಯಾದ ಶರ್ಟ್ ಹಾಗೂ ಶೂಗಳನ್ನು ಧರಿಸಿರಬೇಕು. ಈ ನಿಯಮವು ಚಾಲಕರ ಸಹಾಯಕರು ಹಾಗೂ ಕ್ಲೀನರ್‍‍ಗಳಿಗೂ ಸಹ ಅನ್ವಯಿಸುತ್ತದೆ ಎಂದು ಹೇಳಿದರು.

More from DriveSpark

Article Published On: Tuesday, September 10, 2019, 11:11 [IST]
English summary
Truck drivers in lungi baniyan will be fined rs 2000 uttarpradesh more details - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+