ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಭಾರತ ಸರ್ಕಾರವು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜನಗೊಳಿಸಲು ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತಿದೆ. ರಿಜಿಸ್ಟ್ರೇಷನ್ ಶುಲ್ಕದಿಂದ ವಿನಾಯಿತಿ, ಫೇಮ್ ಯೋಜನೆಯಡಿಯಲ್ಲಿ ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ರಿವೋಲ್ಟ್ ಇಂಟೆಲಿಕಾರ್ಪ್, ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಎಲೆಕ್ಟ್ರಿಕ್ ಬೈಕುಗಳ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಗುರಿಯನ್ನಿಟ್ಟು ಕೊಂಡಿದೆ. ಆದ ಕಾರಣ ಆರ್‌ವಿ 400 ಎಲೆಕ್ಟ್ರಿಕ್ ಬೈಕ್ ಅನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ರಿವೋಲ್ಟ್ ಇಂಟೆಲಿಕಾರ್ಪ್ ಈ ವರ್ಷದ ಜೂನ್‍‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‍‍ವಿ 400, ಎಲೆಕ್ಟ್ರಿಕ್ ಬೈಕ್ ಅನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು. ಮೊದಲ ರಿವೋಲ್ಟ್ ಆರ್‌ವಿ 400 ಇ-ಬೈಕ್ ಅನ್ನು ಮನೇಸಾರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿತ್ತು.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ರಿವೋಲ್ಟ್ ಆರ್‌ವಿ 400, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಭಾರತದ ಮೊದಲ ಬೈಕ್ ಆಗಿದೆ. ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಅನ್ನು ಆರ್‍‍ವಿ 300, ಆರ್‍‍ವಿ 400, ಆರ್‍‍ವಿ 400 ಪ್ರೀಮಿಯಂ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಈ ಎಲ್ಲಾ ಮೂರೂ ಮಾದರಿಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿದ್ದರೂ, ವಿವಿಧ ಬಣ್ಣ, ಬ್ಯಾಟರಿ ಪ್ಯಾಕ್ ಹಾಗೂ ಬೆಲೆಗಳನ್ನು ಹೊಂದಿವೆ. ಇದುವರೆಗೂ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಎಂ‍ಆರ್‍‍ಪಿ ಅಥವಾ ಮೈ ರಿವೋಲ್ಟ್ ಪ್ರೈಸ್ ಎಂಬ ಯೋಜನೆಯಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸಲು ಬಯಸುವವರು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಇ‍ಎಂ‍ಐ ರೀತಿಯಲ್ಲಿ ಹಣ ಪಾವತಿಸಿ ಬೈಕುಗಳನ್ನು ಖರೀದಿಸಬಹುದಿತ್ತು. ಆರ್‍‍ವಿ 300 ಬೈಕುಗಳಿಗೆ ಪ್ರತಿ ತಿಂಗಳು ರೂ.2,999 ಪಾವತಿಸಬೇಕಾಗಿತ್ತು.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಆರ್‍‍ವಿ 400 ಬೈಕುಗಳಿಗೆ ಪ್ರತಿ ತಿಂಗಳು ರೂ.3,499 ಹಾಗೂ ಆರ್‍‍ವಿ ಪ್ರೀಮಿಯಂ ಬೈಕುಗಳಿಗೆ ಪ್ರತಿ ತಿಂಗಳು ರೂ.3,999 ಪಾವತಿಸಬೇಕಾಗಿತ್ತು. ಒಟ್ಟು 37 ತಿಂಗಳುಗಳ ಕಾಲ ಪ್ರತಿ ತಿಂಗಳು ಈ ರೀತಿಯಾಗಿ ಪಾವತಿಸಬೇಕಾಗಿತ್ತು. ಈ ಶುಲ್ಕವು ವಿವಿಧ ರೀತಿಯ ತೆರಿಗೆಗಳನ್ನು ಒಳಗೊಂಡಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಈ ಶುಲ್ಕದಲ್ಲಿ ರೆಗ್ಯುಲರ್ ಸರ್ವಿಸಿಂಗ್, ಮೆಂಟೆನೆನ್ಸ್ ಹಾಗೂ ಬೈಕಿನ ಇನ್ಶೂರೆನ್ಸ್ ಗಳೂ ಸೇರಿವೆ. ಈ ಯೋಜನೆಯಡಿಯಲ್ಲಿ ಬೈಕುಗಳನ್ನು ಖರೀದಿಸಬಯಸುವವರು ಸಾಲದ ಅರ್ಜಿಯನ್ನು ತುಂಬಬೇಕು. ಇದರ ಜೊತೆಗೆ ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಐಟಿ ರಿಟರ್ನ್ಸ್ ಅಥವಾ ಎರಡನ್ನೂ ಸಲ್ಲಿಸಬೇಕು.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಈ ಯೋಜನೆಗಾಗಿ ರಿವೋಲ್ಟ್ ಕಂಪನಿಯು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಇದು ಯಾವುದೇ ರೀತಿಯ ಲೀಸ್ ಯೋಜನೆಯಲ್ಲ. ಬದಲಿಗೆ ನಿಮಗೆ ನೀಡಲಾಗುವ ಸಾಲ. ಬೈಕ್ ಇಷ್ಟವಾಗದೇ ವಾಪಸ್ ಮಾಡಲು ಬಯಸಿದಲ್ಲಿ, 37 ತಿಂಗಳ ಹಣವನ್ನು ಪೂರ್ತಿಯಾಗಿ ಪಾವತಿಸಬೇಕಾಗುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಸಾಲದ ಮೂಲಕ ಅಥವಾ ಇ‍ಎಂ‍ಐ ಮೂಲಕ ಬೈಕುಗಳನ್ನು ಖರೀದಿಸದೇ ಬಯಸುವವರಿಗಾಗಿ ರಿವೋಲ್ಟ್ ಕಂಪನಿಯು ಒಂದೇ ಬಾರಿಗೆ ಹಣ ಪಾವತಿಸುವ ಆಯ್ಕೆಯನ್ನು ಈಗ ನೀಡುತ್ತಿದೆ. ಈ ಯೋಜನೆಯನ್ನು ಆರ್‍‍ವಿ 300 ಹಾಗೂ ಆರ್‍‍ವಿ 400 ಪ್ರೀಮಿಯಂ ಬೈಕುಗಳ ಮೇಲೆ ನೀಡಲಾಗುತ್ತಿದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಆರ್‍‍‍ವಿ 300 ಬೈಕುಗಳಿಗಾಗಿ ರೂ.84,999 ಹಾಗೂ ಆರ್‍‍ವಿ 400 ಪ್ರೀಮಿಯಂ ಬೈಕುಗಳಿಗಾಗಿ ರೂ.98,999ಗಳನ್ನು ಒಂದೇ ಬಾರಿಗೆ ಪಾವತಿಸಿ ಈ ಬೈಕುಗಳನ್ನು ಖರೀದಿಸಬಹುದು. ಈ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಆರ್‍‍ಟಿ‍ಒ ಶುಲ್ಕ, ಇನ್ಶೂರೆನ್ಸ್, ಆರ್‍‍ಸಿ ಸ್ಮಾರ್ಟ್ ಕಾರ್ಡ್‍‍‍ಗಳಿಗಾಗಿ ಪ್ರತ್ಯೇಕವಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಎಲೆಕ್ಟ್ರಿಕ್ ಬೈಕುಗಳ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ ಆರ್‍‍ವಿ 300 ಬೈಕಿನಲ್ಲಿ 1.5 ಕಿ.ವ್ಯಾ ಚಿಕ್ಕ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 65 ಕಿ.ಮೀಗಳಾಗಿದ್ದು, ಒಂದು ಬಾರಿ ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಇಕೊ ಮೋಡಿನಲ್ಲಿ 180 ಕಿ.ಮೀ, ನಾರ್ಮಲ್ ಮೋಡಿನಲ್ಲಿ 110 ಕಿ.ಮೀ ಹಾಗೂ ಸ್ಪೋರ್ಟ್ ಮೋಡಿನಲ್ಲಿ 80 ಕಿ.ಮೀ ದೂರವನ್ನು ಕ್ರಮಿಸಬಹುದು.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಆರ್‍‍ವಿ 400 ಬೈಕಿನಲ್ಲಿ 3.24 ಕಿ.ವ್ಯಾ ಲಿಥಿಯಂ ಬ್ಯಾಟರಿ ಅಳವಡಿಸಲಾಗಿದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 85 ಕಿ.ಮೀಗಳಾಗಿದೆ. ಈ ಬ್ಯಾಟರಿಯನ್ನು ಹೊರಗೆ ತೆಗೆಯಬಹುದಾಗಿದ್ದು, 19 ಕೆ.ಜಿ ತೂಕವನ್ನು ಹೊಂದಿದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಈ ಬ್ಯಾಟರಿಯನ್ನು ಮನೆಯಲ್ಲಿರುವ ಸಾಮಾನ್ಯವಾದ ವಾಲ್ ಸಾಕೆಟ್‍‍ಗಳಿಂದ ಚಾರ್ಜ್ ಮಾಡಬಹುದಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ, 156 ಕಿ.ಮೀ ದೂರವನ್ನು ಕ್ರಮಿಸಲಿದೆ. ಮೊದಲಿಗೆ ಈ ಬೈಕಿನ ಡೀಲರ್‍‍‍ಗಳನ್ನು ದೆಹಲಿಯಲ್ಲಿ ಆರಂಭಿಸಲಾಗಿತ್ತು. ಈಗ ಪುಣೆಯಲ್ಲಿ ಆರಂಭಿಸಲಾಗಿದೆ.

ಕಡೆಗೂ ಬದಲಾಯಿತು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ವಿಧಾನ

ಮುಂದಿನ ತಿಂಗಳುಗಳಲ್ಲಿ ಬೆಂಗಳೂರು, ಹೈದರಾಬಾದ್, ಮುಂಬೈ, ಅಹಮದಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಡೀಲರ್‍‍ಗಳನ್ನು ತೆರೆಯಲಾಗುವುದು. ಮೊದಲ ಬ್ಯಾಚಿನಲ್ಲಿ ಬುಕ್ಕಿಂಗ್ ಮಾಡಲಾದ ರಿವೋಲ್ಟ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಈಗ ಎರಡನೇ ಬ್ಯಾಚಿಗಾಗಿ ಬುಕ್ಕಿಂಗ್ ಆರಂಭಿಸಲಾಗಿದೆ.

More from DriveSpark

Article Published On: Monday, October 7, 2019, 12:40 [IST]
English summary
Revolt electric motorcycle one time pay option launched - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+