ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ರಿವೋಲ್ಟ್ ಕಂಪನಿಯು ನಿನ್ನೆಯಷ್ಟೇ ತನ್ನ ಸರಣಿಯ ಎಲೆಕ್ಟ್ರಿಕ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಬೈಕುಗಳನ್ನು ಮೊಬೈಲ್ ಆಪ್ ಮೂಲಕ ನಿಯಂತ್ರಿಸಬಹುದಾಗಿದೆ. ಇದರಿಂದಾಗಿ ಚಾಲಕನು ಸುಲಭವಾಗಿ ಬೈಕ್ ಅನ್ನು ಕಂಟ್ರೋಲ್ ಮಾಡಬಹುದು. ಈ ಲೇಖನದಲ್ಲಿ ಮೊಬೈಲ್ ಅಪ್ಲಿಕೇಶನ್ ಫೀಚರ್‍‍ಗಳ ಬಗ್ಗೆ ವಿವರಿಸಲಾಗಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳಿಗಾಗಿ ಅಭಿವೃದ್ದಿಪಡಿಸಲಾಗಿರುವ ಆಪ್‍‍ನ ಹೆಸರು ಮೈ ರಿವೋಲ್ಟ್ ಆಗಿದೆ. ಈ ಆಪ್ ಅನ್ನು ಸುಲಭವಾಗಿ ಉಪಯೋಗಿಸಬಹುದು. ಈ ಆಪ್ ಹಲವಾರು ಆಯ್ಕೆಗಳನ್ನು ಹೊಂದಿದ್ದು, ಬೈಕ್ ಸವಾರನು ಬೈಕ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಈ ಮೊಬೈಲ್ ಅಪ್ಲಿಕೇಶನ್‌ನಿಂದಲೇ ಬೈಕ್‌ ಅನ್ನು ಪ್ರಾರಂಭಿಸಬಹುದು. ಸವಾರನು ಬೈಕ್‌ನಲ್ಲಿರುವ ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ ರೈಡಿಂಗ್ ಮೋಡ್‌ಗಳಲ್ಲಿ ತನಗೆ ಬೇಕಾದ ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಎಲೆಕ್ಟ್ರಿಕ್ ವಾಹನಗಳಲ್ಲಿ ಎಕ್ಸಾಸ್ಟ್ ನೋಟ್‍‍ಗಳಿರುವುದಿಲ್ಲ. ಅವುಗಳು ಮೋಟರ್‌ನಿಂದ ಬಿಡುಗಡೆಯಾಗುವ ಸಣ್ಣ ಪ್ರಮಾಣದ ಶಬ್ದವನ್ನು ಮಾತ್ರ ಒಳಗೊಂಡಿರುತ್ತವೆ. ಬೈಕಿಗೆ ಎಕ್ಸಾಸ್ಟ್ ಫೀಲ್ ನೀಡುವ ಸಲುವಾಗಿ, ರಿವೋಲ್ಟ್ ಆರ್‍‍ವಿ 400 ಪ್ರೀಮಿಯಂ ಬೈಕ್ ಅನ್ನು ಆನ್ ಬೋರ್ಡ್ ಸ್ಪೀಕರ್‍‍ನೊಂದಿಗೆ ನೀಡುತ್ತಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ ಬೋರ್ಡ್ ಸ್ಪೀಕರ್ ಮೂಲಕ ಪ್ಲೇ ಮಾಡಬಹುದಾದ ವಿಭಿನ್ನ ಎಕ್ಸಾಸ್ಟ್ ನೋಟ್‍‍ಗಳನ್ನು ಸವಾರನು ಆಯ್ಕೆ ಮಾಡಿಕೊಳ್ಳಬಹುದು. ಈ ಆಪ್‍‍ನಲ್ಲಿ ಸದ್ಯಕ್ಕೆ ರಿವೋಲ್ಟ್, ರೋರ್, ರೆಬೆಲ್ ಹಾಗೂ ರೇಜ್ ಎಂಬ ನಾಲ್ಕು ಎಕ್ಸಾಸ್ಟ್ ನೋಟ್‍‍ಗಳನ್ನು ನೀಡುತ್ತಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಬಳಕೆದಾರರು ಎಕ್ಸಾಸ್ಟ್ ನೋಟ್‍‍ನ ವಾಲ್ಯೂಮ್ ಅನ್ನು ಸಹ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆರ್ಟಿಫಿಶಿಯಲ್ ಎಕ್ಸಾಸ್ಟ್ ನೋಟ್‍ ಬೇಡವೆಂದರೆ ಆಫ್ ಮಾಡಬಹುದು. ಆನ್‌ಬೋರ್ಡ್ ಸ್ಪೀಕರ್‌ಗಳಿಂದ ಬೇರೆ ಶಬ್ದವನ್ನು ಪ್ಲೇ ಮಾಡಲು ಸಾಧ್ಯವಿಲ್ಲ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಬ್ಯಾಟರಿ ಚಾರ್ಜ್ ಕಡಿಮೆಯಾದಾಗ ಮೈ ರಿವೋಲ್ಟ್ ಅಪ್ಲಿಕೇಶನ್ ಸವಾರನಿಗೆ ಸೂಚನೆ ನೀಡುತ್ತದೆ. ಅಪ್ಲಿಕೇಶನ್, ಸವಾರನಿಗೆ ಹತ್ತಿರದಲ್ಲಿರುವ ರಿವೋಲ್ಟ್ ಸ್ವಿಚ್ ಕೇಂದ್ರದ ಬಗ್ಗೆ ಮಾಹಿತಿ ನೀಡುತ್ತದೆ. ಈ ಕೇಂದ್ರಗಳು ಪೂರ್ತಿಯಾಗಿ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಹೊಂದಿರಲಿವೆ.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಸವಾರನು ಖಾಲಿಯಾದ ಬ್ಯಾಟರಿಯ ಬದಲಿಗೆ ಚಾರ್ಜ್ ಆಗಿರುವ ಬ್ಯಾಟರಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳುವುದು ಡಿಸೆಂಬರ್ 31ರವರೆಗೆ ಉಚಿತವಾಗಿರಲಿದೆ. ಅದರ ನಂತರ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುವುದು.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಈ ಆಪ್‍‍ನಿಂದ ಬೈಕ್ ಸವಾರನು, ಬ್ಯಾಟರಿ ಪ್ಯಾಕ್ ಅನ್ನು ಆರ್ಡರ್ ಮಾಡಿ, ಮನೆಯಲ್ಲಿಯೇ ಡೆಲಿವರಿ ಪಡೆಯಬಹುದು. ಈ ಫೀಚರ್‍‍ನಲ್ಲಿ ಡೆಲಿವರಿಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬ್ಯಾಟರಿ ಸ್ವಾಪ್‍‍ನಿಂದಾಗಿ ನಗರದೊಳಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಈ ಫೀಚರ್‍‍ಗಳ ಜೊತೆಗೆ, ಅಪ್ಲಿಕೇಶನ್ ಬೈಕಿನ ಬಗ್ಗೆ ಹಲವಾರು ಮಾಹಿತಿ ಹಾಗೂ ಆಯ್ಕೆಗಳನ್ನು ನೀಡುತ್ತದೆ. ಬೈಕಿನಲ್ಲಿ ಜಿಯೋ ಫೆನ್ಸಿಂಗ್ ಫೀಚರ್‍ ಅಳವಡಿಸಲಾಗಿದೆ. ಈ ಫೀಚರ್ ಬೈಕು ಮೊದಲೇ ನಿಗದಿ ಪಡಿಸಿರುವ ಪೆರಿಮೀಟರ್‍‍ನಿಂದ ಹೊರಗಿದ್ದರೆ ಸವಾರನಿಗೆ ಮಾಹಿತಿ ನೀಡುತ್ತದೆ. ಪೆರಿಮೀಟರ್‍‍ನಿಂದ ಹೊರಗಿದ್ದರೆ, ಈ ಬೈಕ್ ಅನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಬಹುದು.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಈ ಆಪ್ ಬೈಕಿನ ಬಗ್ಗೆ ಮಾಹಿತಿಯನ್ನು ನೀಡುವ ಮೈ ಬೈಕ್ ಆಯ್ಕೆಯನ್ನು ಹೊಂದಿದೆ. ಬಳಕೆದಾರರು ಬೈಕ್‌ನ ಬ್ಯಾಟರಿ, ಸರ್ವಿಸ್ ರೆಕಾರ್ಡ್, ಲೊಕೆಶನ್ ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಬಹುದು. ಈ ಫೀಚರ್‍‍ನಿಂದಾಗಿ ಬೈಕ್ ಸವಾರನು ತಾನು ಇರುವ ಸ್ಥಳವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಮೈ ಟ್ರಿಪ್ ಫೀಚರ್ ಸವಾರನ ಪ್ರಯಾಣದ ವಿವರಗಳನ್ನು ತೋರಿಸುತ್ತದೆ. ಎಲ್ಲಿಂದ ಪ್ರಯಾಣವನ್ನು ಆರಂಭಿಸಲಾಗಿತ್ತು, ಎಲ್ಲಿ ಕೊನೆಯಾಯಿತು. ಎಷ್ಟು ದೂರ ಪ್ರಯಾಣ ಮಾಡಲಾಗಿದೆ. ಪ್ರಯಾಣಕ್ಕೆ ತೆಗೆದುಕೊಂಡ ಸಮಯ, ಪ್ರಯಾಣದ ದಿನಾಂಕ, ಸರಾಸರಿ ವೇಗ ಹಾಗೂ ಎಷ್ಟು ಪ್ರಮಾಣದ ಬ್ಯಾಟರಿಯನ್ನು ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಮೈ ಸ್ವಿಚ್‌ಗಳು ಆಯ್ಕೆಯು ರಿವೋಲ್ಟ್ ಸ್ವಿಚ್ ಕೇಂದ್ರಗಳಲ್ಲಿ ಬೈಕ್ ಸವಾರನು ಎಷ್ಟು ಬಾರಿ ಬ್ಯಾಟರಿ ಸ್ವಾಪ್ ಮಾಡಿದ್ದಾನೆ ಎಂಬ ಮಾಹಿತಿಯನ್ನು ಒಳಗೊಂಡಿದೆ. ಈ ಅಪ್ಲಿಕೇಶನ್‌ನಲ್ಲಿ ಎಮರ್ಜೆನ್ಸಿ ಕಾಂಟ್ಯಾಕ್ಟ್ ನಂಬರ್ ಅನ್ನು ಸಹ ಸೇರಿಸಬಹುದು. ಈ ಅಪ್ಲಿಕೇಶನ್ ಮೂಲಕ ರಿವೋಲ್ಟ್ ಬೈಕ್ ಅನ್ನು ಬುಕ್ ಸಹ ಮಾಡಬಹುದು.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಬೈಕ್ ಅನ್ನು ಹೊಂದದೇ ಇರುವವರು ಸಹ ಈ ಆಪ್ ಬಳಸುವಂತೆ ರಿವೋಲ್ಟ್ ಕಂಪನಿಯು ಈ ಆಪ್ ಅನ್ನು ವಿನ್ಯಾಸಗೊಳಿಸಿದೆ. ರಿವೋಲ್ಟ್ ನೈಟ್ರೋ ಎಂಬ ನಾಲ್ಕನೇ ರೈಡಿಂಗ್ ಮೋಡ್ ಅನ್ನು ಸಹ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಈ ಮೋಡ್ ಬೈಕಿನ ಟಾಪ್ ಸ್ಪೀಡ್ ಅನ್ನು ಹೆಚ್ಚಿಸುತ್ತದೆ. ರಿವೋಲ್ಟ್ ಕಂಪನಿಯು ಆರ್‍‍ವಿ300, ಆರ್‍‍ವಿ400 ಹಾಗೂ ಆರ್‍‍ವಿ 400 ಬೈಕುಗಳನ್ನು ಬಿಡುಗಡೆಗೊಳಿಸಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಪ್‍‍ನ ವಿಶೇಷತೆಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಹುತೇಕ ತಯಾರಕರು ಬೈಕಿನ ಮಾಲೀಕರಿಗಾಗಿ ಮಾತ್ರವೇ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದರೆ, ರಿವೋಲ್ಟ್ ಕಂಪನಿಯು ಹೆಚ್ಚು ಜನರನ್ನು ಸೆಳೆಯಲು, ಬೈಕ್ ಅನ್ನು ಬುಕ್ಕಿಂಗ್ ಮಾಡುವ ಆಯ್ಕೆಯನ್ನು ಗ್ರಾಹಕರಲ್ಲದವರಿಗೂ ನೀಡಿದೆ. ಅಪ್ಲಿಕೇಶನ್‌ನಲ್ಲಿರುವ ಫೀಚರ್‍‍ಗಳು ಅದ್ಭುತವಾಗಿವೆ. ಈ ಆಪ್ ಅನ್ನು ಸವಾರರಿಗೆ ಸಹಾಯ ಮಾಡಲು ನಿರ್ಮಿಸಲಾಗಿದೆ.

More from DriveSpark

Article Published On: Thursday, August 29, 2019, 18:13 [IST]
English summary
Revolt Mobile Application Features Explained: Artificial Sounds, Booking Options & More - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+