ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ರಿವೋಲ್ಟ್ ಸಂಸ್ಥೆಯು ಮೊನ್ನೆಯಷ್ಟೇ ತನ್ನ ಬಹುನೀರಿಕ್ಷಿತಿ ಆರ್‌ವಿ400 ಮತ್ತು ಆರ್‌ವಿ300 ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ತಾಂತ್ರಿಕ ವಿಭಿನ್ನವಾಗಿರುವ ಈ ಬೈಕ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ ಎನ್ನುವ ಕುರಿತಾದ ಮಾಹಿತಿ ತಿಳಿಯಿರಿ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಪುಣೆ ಮೂಲದ ರಿವೋಲ್ಟ್ ಮೋಟಾರ್ ಸಂಸ್ಥೆಯು ದೇಶದಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ದಿಪಡಿಸಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಯಂತೆ ಆಕರ್ಷಕ ಬೆಲೆ, ಅತ್ಯುತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಆರ್‌ವಿ300 ಮತ್ತು ಆರ್‌ವಿ400 ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. ವಿನ್ಯಾಸದಲ್ಲಿ ಎರಡು ಬೈಕ್ ಒಂದೇ ರೀತಿ ಎನ್ನಿಸಿದರೂ ಸಹ ತಾಂತ್ರಿಕವಾಗಿ ಭಿನ್ನತೆ ಹೊಂದಿರುವ ಈ ಬೈಕ್‌ಗಳಲ್ಲಿ ಗ್ರಾಹಕರ ಆಯ್ಕೆಗೆ ಯಾವುದು ಉತ್ತಮ ಎಂದು ಇಲ್ಲಿ ಚರ್ಚಿಸಲಾಗಿದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಜಿಎಸ್‌ಟಿಯಲ್ಲಿ ಇಳಿಕೆ, ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಆಕರ್ಷಕ ಎಲೆಕ್ಟ್ರಿಕ್ ಬೈಕ್ ಉತ್ಪನ್ನಗಳೊಂದಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ರಿವೋಲ್ಟ್ ಸಂಸ್ಥೆಯು ಮೊದಲ ಪ್ರಯತ್ನದಲ್ಲೇ ವಿನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ರಿವೋಲ್ಟ್ ಸಂಸ್ಥೆಯು ಒಟ್ಟು ಎರಡು ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಆರ್‌ವಿ300 ಹಾಗೂ ಆರ್‌ವಿ400 ಬೈಕಿನಲ್ಲಿ ಬೆಸ್ ಮತ್ತು ಪ್ರೀಮಿಯಂ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ದರಗಳು

ವಿಶೇಷ ಅಂದರೆ ರಿವೋಲ್ಟ್ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ಬೈಕ್‌‌ಗಳನ್ನು ತಿಂಗಳು ಇಎಂಐ ಆಧಾರದ ಮೇಲೆ ಬಿಡುಗಡೆ ಮಾಡಿದ್ದು, 37 ತಿಂಗಳ ಅವಧಿಗೆ ಆರಂಭಿಕವಾಗಿ ರೂ.2999(ಆರ್‌ವಿ300), ರೂ.3499(ಆರ್‌ವಿ400 ಬೆಸ್) ಮತ್ತು ರೂ.3999(ಆರ್‌ವಿ400 ಪ್ರೀಮಿಯಂ) ದರ ನಿಗದಿ ಮಾಡಿದೆ. ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಣೆ ಹೊಂದಿರುವ ಆರ್‌ವಿ300 ಹಾಗೂ ಆರ್‌ವಿ400 ಬೈಕ್‌ಗಳು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಮೈಲೇಜ್ ಹೊಂದಿವೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಬ್ಯಾಟರಿ ವೈಶಿಷ್ಟ್ಯತೆ ಮತ್ತು ಮೈಲೇಜ್

ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 156ಕಿ.ಮಿ ಮೈಲೇಜ್ ನೀಡುತ್ತವೆ ಎಂದು ರಿವೋಲ್ಟ್ ಸಂಸ್ಥೆಯು ಅಧಿಕೃತವಾಗಿ ಹೇಳಿಕೊಂಡಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಬೈಕ್ ತಾಂತ್ರಿಕ ಸೌಲಭ್ಯಗಳು

ಇದರೊಂದಿಗೆ ಹೊಸ ಬೈಕ್‌ಗಳಲ್ಲಿ ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ರಿವೋಲ್ಟ್ ಹೊಸ ಬೈಕಿನಲ್ಲಿವೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಆರ್‌ವಿ300 ಹಾಗೂ ಆರ್‌ವಿ400 ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಲಭ್ಯ ನೀಡಿರುವ ರಿವೋಲ್ಟ್ ಸಂಸ್ಥೆಯು, ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳಲು ಮಾತ್ರವಲ್ಲದೇ, ತೆಗೆದು ಹಾಕಬಹುದಾದ ಬ್ಯಾಟರಿ ಜೊತೆಗೆ ಬ್ಯಾಟರಿ ಸ್ಟೆಷನ್ ಮೂಲಕ ನಿಮ್ಮ ಅಗತ್ಯ ಸ್ಥಳಗಳಿಗೆ ಬ್ಯಾಟರಿ ಸೇವೆಗಳನ್ನು ನೀಡಲಿದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಈ ಮೂಲಕ ಸಾಮಾನ್ಯ ಬೈಕ್‌ಗಳಿಂತಲೂ ವಿಶೇಷ ಎನ್ನಿಸಲಿರುವ ರಿವೋಲ್ಟ್ ಆರ್‌ವಿ300 ಹಾಗೂ ಆರ್‌ವಿ400 ಬೈಕ್‌ಗಳು ಅತಿ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಭಾರೀ ಬೇಡಿಕೆ ಪಡೆಯುವ ಗುಣಲಕ್ಷಣಗಳನ್ನು ಹೊಂದಿದ್ದು, ಮೊದಲ ಹಂತವಾಗಿ ಪುಣೆ ಮತ್ತು ದೆಹಲಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಿರುವ ಹೊಸ ಬೈಕ್‌ಗಳು ವರ್ಷಾಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ರಿವೋಲ್ಟ್ ಭರವಸೆ ನೀಡಿದೆ.

ರಿವೋಲ್ಟ್ ಆರ್‌ವಿ400 v/s ಆರ್‌ವಿ300- ಖರೀದಿಗೆ ಯಾವ ಬೈಕ್ ಬೆಸ್ಟ್?

ಹಾಗಾದ್ರೆ ಖರೀದಿಗೆ ಯಾವುದು ಉತ್ತಮ?

ಮೇಲೆ ನೀಡಿದ ಮಾಹಿತಿ ಆಧಾರದ ಮೇಲೆ ಗರಿಷ್ಠ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗೆ ಆರ್‌ವಿ300 ಆಯ್ಕೆ ಉತ್ತಮವಾಗಿದೆ. ಹಾಗೆಯೇ ಫರ್ಪಾಮೆನ್ಸ್ ಕುರಿತು ಗಮನಹರಿಸಿದ್ದಲ್ಲಿ ಗರಿಷ್ಠ ಬ್ಯಾಟರಿ ಸಾಮರ್ಥ್ಯದೊಂದಿಗೆ ಉತ್ತಮ ಟಾಪ್ ಸ್ಪೀಡ್ ಹೊಂದಿರುವ ಆರ್‌ವಿ400 ಬೈಕ್ ಮಾದರಿಯು ಖರೀದಿಗೆ ಉತ್ತಮ ಎನ್ನಬಹುದು.

More from DriveSpark

Article Published On: Saturday, August 31, 2019, 13:41 [IST]
English summary
Revolt RV400 Vs RV300: What Is The Difference?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+