ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

ಕಳೆದ ಕೆಲವು ತಿಂಗಳುಗಳಿಂದ, ಕೆಟಿಎಂ ಇಂಡಿಯಾ ಬೈಕುಗಳ ಮಾರಾಟದಲ್ಲಿ ಏರಿಕೆಯಾಗಿ ಎರಡು ಅಂಕಿಗಳ ಹೆಚ್ಚಳವನ್ನು ದಾಖಲಿಸಿದೆ. ನವೆಂಬರ್ 2018 ರಲ್ಲಿ ಡ್ಯೂಕ್ 125 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಕಳೆದ ತಿಂಗಳು ಆರ್‍‍ಸಿ 125 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಇದರಿಂದಾಗಿ ಕೆಟಿಎಂ ಇಂಡಿಯಾದ ಮಾರಾಟ ಪ್ರಮಾಣವು ಹೆಚ್ಚಾಗುವ ನಿರೀಕ್ಷೆಯಿದೆ. 2019ರ ಜೂನ್‍ ತಿಂಗಳಿನಲ್ಲಿ ಕೆಟಿಎಂ ಇಂಡಿಯಾ ಮಾರಾಟವು 2018ರ ಜೂನ್‌ಗೆ 4,133 ಯುನಿಟ್‌ಗಳ ಮಾರಾಟಕ್ಕಿಂತ 19.14%ನಷ್ಟು ಏರಿಕೆಯಾಗಿ 4,924 ಯುನಿಟ್‍‍ಗಳ ಮಾರಾಟವಾಗಿದೆ.

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

ಕೆಟಿಎಂ 125 ಸಿಸಿ ಸರಣಿಯಲ್ಲಿ ಡ್ಯೂಕ್ 125 ಹಾಗೂ ಆರ್‌ಸಿ 125 ಬೈಕುಗಳು ಸೇರಿವೆ. 2019ರ ಜೂನ್‌ನಲ್ಲಿ ಈ ಎರಡೂ ಬೈಕ್ ಮಾದರಿಗಳು ಒಟ್ಟಾರೆಯಾಗಿ 2,108 ಯುನಿಟ್‌ಗಳ ಮಾರಾಟವನ್ನು ದಾಖಲಿಸಿವೆ. ಮೇ 2019ರಲ್ಲಿ, ಆರ್‌ಸಿ 125 ರ ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದ್ದಾಗ, ಇವರೆಡೂ ಬೈಕುಗಳ ಮಾರಾಟವು ಒಟ್ಟಾರೆಯಾಗಿ 2,228 ಯುನಿಟ್‌ಗಳಷ್ಟಿತ್ತು. ಕೆಟಿಎಂ 200 (ಡ್ಯೂಕ್ ಹಾಗೂ ಆರ್‌ಸಿ) ಮಾರಾಟವು 2019ರ ಜೂನ್‌ನಲ್ಲಿ 33.18 ರಷ್ಟು ಕುಸಿದು 1,891 ಬೈಕುಗಳ ಮಾರಾಟವಾಗಿದೆ.

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

2018ರ ಜೂನ್‌ನಲ್ಲಿ 2,830 ಕೆಟಿ‍ಎಂ ಬೈಕುಗಳ ಮಾರಾಟವಾಗಿತ್ತು. 2019ರ ಮೇ ತಿಂಗಳಲ್ಲಿ 2,246 ಬೈಕುಗಳ ಮಾರಾಟವಾಗಿದ್ದರೆ, 2019ರ ಜೂನ್‌ನಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದ ಬೈಕುಗಳ ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೆಟಿಎಂ 250 ಹಾಗೂ 390 ಬೈಕುಗಳೂ ಸಹ ಜೂನ್ ತಿಂಗಳಿನಲ್ಲಿ ಕಡಿಮೆ ಮಾರಾಟವನ್ನು ದಾಖಲಿಸಿವೆ. 2018ರ ಜೂನ್‌ನಲ್ಲಿ ಕೆಟಿಎಂ 250ಯ 601 ಬೈಕುಗಳ ಮಾರಾಟವಾಗಿದ್ದರೆ, 2019ರ ಜೂನ್‌ನಲ್ಲಿ ಮಾರಾಟ ಪ್ರಮಾಣವು ಕುಸಿದು, 570 ಬೈಕುಗಳ ಮಾರಾಟವಾಗಿದೆ.

ಕೆ‍‍ಟಿ‍ಎಂ ಜೂನ್-19

ಜೂನ್-18

ವ್ಯತ್ಯಾಸ %

125

2,108

-

-

200

1,891

2,830

-33.18

250

570

601 -5.16

390

355

702

-49.43

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

2019ರ ಮೇ ತಿಂಗಳಲ್ಲಿ 681 ಬೈಕುಗಳ ಮಾರಾಟವಾಗಿತ್ತು. ಕೆಟಿಎಂ 390ಯ ಆರ್‌ಸಿ ಹಾಗೂ ಡ್ಯೂಕ್ ಬೈಕುಗಳ ಮಾರಾಟವು ಜೂನ್ 2018ಕ್ಕೆ ಹೋಲಿಸಿದರೆ, ಜೂನ್ 2019ರ ಅವಧಿಯಲ್ಲಿ 49.43%ನಷ್ಟು ಕುಸಿದಿದೆ. 2018ರ ಜೂನ್‍‍ನಲ್ಲಿ 702 ಯುನಿಟ್‌ಗಳ ಮಾರಾಟವಾಗಿದ್ದರೆ, ಕಳೆದ ತಿಂಗಳಲ್ಲಿ ಕೇವಲ 355 ಯುನಿಟ್‌ಗಳ ಮಾರಾಟವಾಗಿದೆ. ಕೆಟಿಎಂ ದೇಶಿಯ ಮಾರುಕಟ್ಟೆಯಲ್ಲಿ 7 ವಿವಿಧ ಮಾದರಿಯ ಬೈಕುಗಳನ್ನು ಮಾರಾಟ ಮಾಡುತ್ತಿದೆ.

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

ಪರ್ಫಾಮೆನ್ಸ್ ಬೈಕುಗಳ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕೆಟಿಎಂ ಬೈಕಿನ ಬೆಲೆಯು, ಕೆಟಿಎಂ 125 ಡ್ಯೂಕ್‌, ರೂ.1.25 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಇದು ಅಗ್ಗದ ಮಾದರಿಯಾಗಿದ್ದು, ಅತ್ಯಂತ ದುಬಾರಿ ಕೆಟಿಎಂ 390 ಡ್ಯೂಕ್ ಬೆಲೆ ರೂ.2.48 ಲಕ್ಷಗಳಾಗಿದೆ. ಡ್ಯೂಕ್ 200 ಬೆಲೆ ರೂ.1.52 ಲಕ್ಷ ಹಾಗೂ ಡ್ಯೂಕ್ 250 ಬೆಲೆ ರೂ.1.81 ಲಕ್ಷಗಳಾಗಿದ್ದರೆ, ಕೆಟಿಎಂ ಆರ್‍‍ಸಿ 200 ಬೆಲೆ ರೂ.1.79 ಲಕ್ಷ ಹಾಗೂ ಆರ್‍‍ಸಿ 390 ಬೆಲೆ ರೂ.2.44 ಲಕ್ಷಗಳವರೆಗೆ ಇದೆ.

ಕೆಟಿ‍ಎಂ ದೆಹಲಿಯ ಎಕ್ಸ್ ಶೋರೂಂ ದರ

ಡ್ಯೂಕ್ 125

ರೂ.1.3 ಲಕ್ಷ

ಆರ್‍‍ಸಿ 125

ರೂ.1.47 ಲಕ್ಷ

ಡ್ಯೂಕ್ 200

ರೂ.1.51 ಲಕ್ಷ

ಆರ್‍‍ಸಿ 200

ರೂ.1.9 ಲಕ್ಷ

ಡ್ಯೂಕ್ 250

ರೂ.1.8 ಲಕ್ಷ

ಡ್ಯೂಕ್ 390

ರೂ.2.48 ಲಕ್ಷ

ಆರ್‍‍ಸಿ 390

ರೂ.2.44 ಲಕ್ಷ

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಜೂನ್ 2019ರಲ್ಲಿ ಬಿಡುಗಡೆಯಾದ ಹೊಸ ಕೆಟಿಎಂ ಆರ್‌ಸಿ 125 ಬೈಕ್ ರೂ.1.47 ಲಕ್ಷ ಬೆಲೆಯನ್ನು ಹೊಂದಿದೆ. ದೇಶದಲ್ಲಿರುವ ಎಲ್ಲಾ ಡೀಲರ್‍‍ಗಳ ಬಳಿ ಈ ಬೈಕಿನ ಡೆಲಿವರಿ ಪ್ರಾರಂಭವಾಗಿದೆ. ಈ ಬೈಕ್ 124 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 14.3 ಬಿಹೆಚ್‌ಪಿ ಪವರ್ ಹಾಗೂ 6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 6 ಸ್ಪೀಡ್‍‍ನ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಏರಿಕೆ ಕಂಡ ಕೆಟಿ‍ಎಂ ಡ್ಯೂಕ್125 ಮಾರಾಟ

ಹೊಸ ಕೆಟಿಎಂ ಆರ್‍‍ಸಿ 125 ಬೈಕಿನ ಮುಂಭಾಗದಲ್ಲಿ ಡಬ್ಲ್ಯೂಪಿ ಯುಎಸ್‍‍ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ ಬೈಬ್ರೆ 300 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಗಳಿವೆ. ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ವೈಜೆಡ್ ಆರ್15 ವಿ3 ಬೈಕಿಗೆ ಪೈಪೋಟಿ ನೀಡುತ್ತದೆ.

Article Published On: Monday, July 29, 2019, 12:50 [IST]
English summary
KTM Duke 125 and RC 125 best selling KTM in India – June 2019 sales - Read in kannada
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+