Just In
- 17 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮತ್ತಷ್ಟು ದುಬಾರಿಯಾದ ರಾಯಲ್ ಎನ್ಫೀಲ್ಡ್ ಬುಲೆಟ್ 350
ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬುಲೆಟ್ 350 ಎಬಿಎಸ್ ಮಾದರಿ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಬುಲೆಟ್ 350 ಎಬಿಎಸ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಇಎಸ್(ಎಲೆಕ್ಟ್ರಿಕ್ ಸ್ಟಾರ್ಟ್) ಎಂಬ ಎರಡು ರೂಪಾಂತರಗಳನ್ನು ಒಳಗೊಂಡಿದೆ. ಈ ಎರಡು ರೂಪಾಂತರಗಳ ಬೆಲೆಯನ್ನು ರೂ.4,000ದವರೆಗೆ ಹೆಚ್ಚಿಸಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನ ಬುಲೆಟ್ 350 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬುಲೆಟ್ 350 ಮಾದರಿಯ ಸ್ಟಾಂಡರ್ಡ್ ರೂಪಾಂತರದ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.12 ಲಕ್ಷಗಳಾದರೆ ಇಎಸ್ ಬೈಕ್ ರೂ.1.26 ಲಕ್ಷ ಬೆಲೆಯನ್ನು ಹೊಂದಿದೆ.

ರಾಯಲ್ ಎನ್‍ಫೀಲ್ಡ್ ಬೆಲೆಯನ್ನು ಹೆಚ್ಚಿಸಿದ ಬಳಿಕ ಬುಲೆಟ್ 350 ಎಬಿಎಸ್ ಸ್ಟ್ಯಾಂಡರ್ಡ್ ಹೊಸ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.14 ಲಕ್ಷಗಳಾದರೆ ಬುಲೆಟ್ 350 ಎಬಿಎಸ್ ಇಎಸ್ ರೂಪಾಂತರವು ರೂ.1.30 ಲಕ್ಷ ಬೆಲೆಯನ್ನು ಹೊಂದಿರಲಿದೆ.

ಬೆಲೆಗಳ ಹೆಚ್ಚಳವನ್ನು ಹೊರತುಪಡಿಸಿ, ಬುಲೆಟ್ 350 ಎರಡೂ ರೂಪಾಂತರಗಳಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬುಲೆಟ್ 350 ಬೈಕ್ ಅದೇ 349 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍ಪಿಎಂನಲ್ಲಿ 19.8 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍ಪಿಎಂನಲ್ಲಿ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ ಶೀಘ್ರದಲ್ಲೇ ತನ್ನ ಸರಣಿಯ ಎಲ್ಲಾ ಬೈಕುಗಳನ್ನು ಬಿಎಸ್-6 ಎಂಜಿನ್‍ಗಳಾಗಿ ನವೀಕರಿಸಲಿದೆ ಎಂದು ನಿರೀಕ್ಷಿಸಬಹುದು. 2020ರ ಏಪ್ರಿಲ್ 1ರವರೆಗೆ ಬಿಎಸ್- ಮಾಲಿನ್ಯ ಗಡುವನ್ನು ಹೊಂದಿದ್ದು, ಇದಕ್ಕೂ ಮೊದಲು ರಾಯಲ್ ಎನ್‍ಫೀಲ್ಡ್ ತನ್ನ ಸರಣಿಯ ಬೈಕುಗಳನ್ನು ಬಿಎಸ್-6 ಎಂಜಿನ್‍ನಲ್ಲಿ ನವೀಕರಿಸಬಹುದು.

ಬಿಎಸ್-6 ಎಂಜಿನ್ ಆಗಿ ನವೀಕರಿಸಿದ ಬಳಿಕ ಬುಲೆಟ್ 350 ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‍ಫೀಲ್ಡ್ ಎಲ್ಲಾ ಸರಣಿಗಳ ಬೆಲೆಯನ್ನು ಮತ್ತಷ್ಟು ಏರಿಸುವ ಸಾಧ್ಯತೆಗಳಿವೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ರಾಯಲ್ ಎನ್‍ಫೀಲ್ಡ್ ಯಾಂತ್ರಿಕ ನವೀಕರಣವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ರಾಯಲ್ ಎನ್ಫೀಲ್ಡ್ ಬುಲೆಟ್ 350 ಬ್ರ್ಯಾಂಡ್‍ನ ಸರಣಿಯಲ್ಲಿ ಅತ್ಯಂತ ಉತ್ತಮ ಕ್ಷಮತೆ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಸಣ್ಣ ಮಟ್ಟದ ಬೆಲೆ ಏರಿಕೆಯ ಹೊರತಾಗಿ ಬುಲೆಟ್ 350 ಮಾದರಿಯು ರಾಯಲ್ ಎನ್‍ಫೀಲ್ಡ್ ಬೈಕು ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಬುಲೆಟ್ 350 ಬೈಕು ಆಕರ್ಷಕ ಲುಕ್‍ನೊಂದಿಗೆ ಹಲವು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸ್ಟ್ಯಾಂಡರ್ಡ್ ಬುಲೆಟ್ 350 ಬೈಕ್ ಓನಿಕ್ಸ್ ಬ್ಲಾಕ್, ಬ್ಲ್ಯಾಕ್, ಬುಲೆಟ್ ಸಿಲ್ವರ್ ಮತ್ತು ಸಫೈರ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನೂ ರಾಯಲ್ ಎನ್ಫೀಲ್ಡ್ ಬುಲೆಟ್ 350 ಇಎಸ್ ಐದು ವಿಭಿನ್ನ ಬಣ್ಣಗಳನ್ನು ಹೊಂದಿದ್ದು, ಇದರಲ್ಲಿ ಮರೂನ್, ಸಿಲ್ವರ್, ಜೆಟ್ ಬ್ಲ್ಯಾಕ್, ರೀಗಲ್ ರೆಡ್ ಮತ್ತು ರಾಯಲ್ ಬ್ಲೂ ಬಣ್ಣಗಳು ಸೇರಿವೆ.
MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍ನ ಉತ್ತಮ ಬೈಕುಗಳಲ್ಲಿ ಒಂದಾಗಿದೆ. ಹಲವು ಬಣ್ಣಗಳನ್ನು ಹೊಂದಿರುವ ಬುಲೆಟ್ 350 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಬೈಕು ಕೇವಲ ಯುವಜನತೆಯನ್ನು ಮಾತ್ರವಲ್ಲದೇ ಹಿರಿಯರ ಗಮನವನ್ನೂ ಸೆಳೆಯುವಲ್ಲಿ ಯಶ್ವಸಿಯಾಗಿದೆ. ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕು, ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಬೈಕುಗಳು ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳಿಗೆ ಪೈಪೋಟಿ ನೀಡುತ್ತದೆ.