ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

2019ರ ರೈಡರ್ ಮೇನಿಯಾದ ಮೊದಲ ದಿನ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಸ್ಲೈಡ್ ಸ್ಕೂಲ್ ಅನ್ನು ಆರಂಭಿಸುವುದಾಗಿ ಘೋಷಿಸಿತು. ಇದರ ಜೊತೆಗೆ ಕಸ್ಟಮ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಫ್ಲಾಟ್ ಟ್ರ್ಯಾಕರ್ ಬೈಕ್ ಅನ್ನು ಅನಾವರಣಗೊಳಿಸಿತು.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಫ್ಲಾಟ್ ಟ್ರ್ಯಾಕರ್ ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಹಿಮಾಲಯನ್ 401 ಬೈಕಿನ ಮಾಡಿಫೈ ಆವೃತ್ತಿಯಾಗಿದೆ. ಕಸ್ಟಮ್ ಬೈಕ್ ಅನ್ನು ಅಮೇರಿಕಾ ಮೂಲದ ಎಸ್ ಅಂಡ್ ಎಸ್ ಸೈಕಲ್ಸ್ ನಿರ್ಮಿಸಿದೆ. ಈ ಕಂಪನಿಯು ಹಾರ್ಲೆ ಡೇವಿಡ್ಸನ್ ಹಾಗೂ ರಾಯಲ್ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ 650 ಟ್ವಿನ್ ಬೈಕುಗಳಿಗೆ ಪರ್ಫಾಮೆನ್ಸ್ ಭಾಗಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಕಸ್ಟಮ್ ಹಿಮಾಲಯನ್ ಫ್ಲಾಟ್ ಟ್ರ್ಯಾಕರ್ ಬೈಕ್, ಎತ್ತರದಲ್ಲಿ ಮೌಂಟ್ ಮಾಡಲಾದ ಎಕ್ಸಾಸ್ಟ್, ಫ್ಲಾಟ್ ಟ್ರ್ಯಾಕಿಂಗ್‌ಗಾಗಿ ವಿನ್ಯಾಸಗೊಳಿಸಲಾದ ಸ್ಪ್ರಾಕೆಟ್ ಸಿಸ್ಟಂ, ಹಗುರವಾದ ಕಾರ್ಬನ್ ಫೈಬರ್ ಸೀಟ್, ಮುಂಭಾಗ ಹಾಗೂ ಹಿಂಭಾಗದಲ್ಲಿ 18 ಇಂಚಿನ ಸ್ಪೋಕ್ ರಿಮ್‌ಗಳನ್ನು ಹೊಂದಿದೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಸಸ್ಪೆಂಷನ್ ಕಿಟ್‍‍ನಲ್ಲಿ ಯಾವುದೇ ಮೆಕಾನಿಕಲ್ ಅಂಶಗಳ ಬದಲಾವಣೆಗಳಾಗಿಲ್ಲ. ಫ್ರೇಮ್‍ನಲ್ಲಿಯೂ ಯಾವುದೇ ಬದಲಾವಣೆಗಳಾಗಿಲ್ಲ. ಈ ಬೈಕ್ ಮಾರುಕಟ್ಟೆಯಲ್ಲಿರುವ ಬೈಕಿಗಿಂತ 30 ಕೆ.ಜಿ ಕಡಿಮೆ ತೂಕವನ್ನು ಹೊಂದಿದ್ದು, ಒಟ್ಟಾರೆ 164 ಕೆ.ಜಿ ತೂಕವನ್ನು ಹೊಂದಿದೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ರಾಯಲ್ ಎನ್‌ಫೀಲ್ಡ್ ಆರಂಭಿಸಿರುವ ಸ್ಲೈಡ್ ಸ್ಕೂಲ್ ಫ್ಲಾಟ್ ಟ್ರ್ಯಾಕ್ ತರಬೇತಿ ಅಕಾಡೆಮಿಯಾಗಿದ್ದು, ಆರಂಭಿಕರಿಗಾಗಿ ಹಾಗೂ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಫ್ಲಾಟ್ ಟ್ರ್ಯಾಕ್ ರೇಸಿಂಗ್ ಎಂಬುದು ಮೋಟಾರ್‌ಸ್ಪೋರ್ಟ್‌ನ ಒಂದು ಸ್ಥಾಪಿತ ರೂಪವಾಗಿದೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಇದನ್ನು ಅಮೇರಿಕಾ ಹಾಗೂ ಯುರೋಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಲಾಗುತ್ತದೆ. ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಮೊದಲ ರಾಯಲ್ ಎನ್‌ಫೀಲ್ಡ್ ಸ್ಲೈಡ್ ಸ್ಕೂಲ್, ಬಿಗ್ ರಾಕ್ ಮೋಟೋ ಪಾರ್ಕ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆಯಲಿದೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಈ ಸೌಲಭ್ಯವನ್ನು ಭಾರತದ ಉನ್ನತ ವೃತ್ತಿಪರ ಮೋಟಾರ್ ಸ್ಪೋರ್ಟ್ ರೇಸರ್ ಸಿಎಸ್ ಸಂತೋಷ್ ಹಾಗೂ ಅನೇಕ ರಾಷ್ಟ್ರೀಯ ಸೂಪರ್ ಕ್ರಾಸ್, ಮೊಟೊಕ್ರಾಸ್ ಚಾಂಪಿಯನ್‍‍ಗಳು ನಡೆಸುತ್ತಿದ್ದಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಫ್ಲಾಟ್ ಟ್ರ್ಯಾಕ್ ರೇಸಿಂಗ್‌ನಲ್ಲಿ ಓವಲ್ ಟ್ರ್ಯಾಕ್‌ನ ಸುತ್ತಲೂ ಸಡಿಲವಾದ ಮಣ್ಣು ಹಾಗೂ ಜಲ್ಲಿಕಲ್ಲುಗಳ ಮೇಲೆ ಓಡಬೇಕಾಗಿರುವುದರಿಂದ ಸವಾರರು ಹೆಚ್ಚಿನ ಶಕ್ತಿ ಹಾಗೂ ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಟ್ರ್ಯಾಕ್‌ಗಳಲ್ಲಿ ರೇಸರ್‌ಗಳು ಆ್ಯಂಟಿ ಕ್ಲಾಕ್ ವೈಸ್‍‍ನಲ್ಲಿ ಚಲಿಸಬೇಕಾಗುತ್ತದೆ. ಬೈಕುಗಳನ್ನು ಸರಿಯಾದ ದಿಕ್ಕಿನಲ್ಲಿಡಲು ಕೌಂಟರ್ ಸ್ಟಿಯರ್‍‍ನ ಅಗತ್ಯವಿರುತ್ತದೆ. ಫ್ಲಾಟ್ ಟ್ರ್ಯಾಕ್ ರೇಸಿಂಗ್ ಅಮೇರಿಕಾದ ಮೋಟಾರ್ಸ್ಪೋರ್ಟ್ ಆಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಈ ಸ್ಪೋರ್ಟ್ ನಡೆಯುವ ಸಮಯವನ್ನು ಅಮೇರಿಕನ್ ಫ್ಲಾಟ್ ಟ್ರ್ಯಾಕ್ ಸರಣಿ ಎಂದು ಕರೆಯಲಾಗುತ್ತದೆ. ಈ ಸರಣಿಯನ್ನು 1954ರಲ್ಲಿ ಅಮೇರಿಕನ್ ಮೋಟರ್ಸೈಕ್ಲಿಸ್ಟ್ ಅಸೋಸಿಯೇಷನ್ ಅನುಮೋದಿಸಿ, ​​ಸ್ಥಾಪಿಸಿತು.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಎಎಫ್‌ಟಿಯಲ್ಲಿ ಎಎಫ್‌ಟಿ ಟ್ವಿನ್ಸ್ ಪ್ರೀಮಿಯರ್ ಕ್ಲಾಸ್, ಯುವ ಚಾಲಕರಿಗಾಗಿ ಎಎಫ್‌ಟಿ ಸಿಂಗಲ್ ಕ್ಲಾಸ್, ಉತ್ಪಾದನಾ ಆಧಾರಿತ 649 ಸಿಸಿ -800 ಸಿಸಿ ಟ್ವಿನ್-ಸಿಲಿಂಡರ್ ಎಂಜಿನ್‌ಗಳನ್ನು ಒಳಗೊಂಡಿರುವ ಎಎಫ್‌ಟಿ ಪ್ರೊಡಕ್ಷನ್ ಟ್ವಿನ್ಸ್ ಕ್ಲಾಸ್ ಎಂಬ ವಿವಿಧ ಕ್ಲಾಸ್‍‍ಗಳಿವೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಕೆಟಿಎಂ, ಹೋಂಡಾ, ಸುಜುಕಿ, ಕವಾಸಕಿ, ಹುಸ್ಕ್ವರ್ಣ, ಯಮಹಾ, ಇಂಡಿಯನ್ ಹಾಗೂ ಹಾರ್ಲೆ ಡೇವಿಡ್ಸನ್ ಈ ಸರಣಿಯಲ್ಲಿ ಭಾಗವಹಿಸುವ ಕಂಪನಿಗಳಾಗಿವೆ.

ರೈಡರ್ ಮೇನಿಯಾದಲ್ಲಿ ಅನಾವರಣಗೊಂಡ ಹಿಮಾಲಯನ್ ಫ್ಲಾಟ್ ಟ್ರಾಕ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೊಡ್ಡ ದೊಡ್ಡ ಮೋಟಾರ್‌ಸ್ಪೋರ್ಟ್‌ಗಳು ಭಾರತಕ್ಕೆ ಬರುತ್ತವೆಂದು ಬಹಳ ಜನ ಕಾಯುತ್ತಿದ್ದಾರೆ. ಈಗ ಸರಿಯಾದ ಸಮಯದಲ್ಲಿ ಮೋಟಾರ್‌ಸ್ಪೋರ್ಟ್‌ ಭಾರತಕ್ಕೆ ಕಾಲಿಟ್ಟಿದೆ. ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಈ ಮೋಟಾರ್‍‍ಸ್ಪೋರ್ಟ್ ಅನ್ನು ತರಲು ಸಾಕಷ್ಟು ಆಸಕ್ತಿ ತೋರುತ್ತಿವೆ.

Most Read Articles

Kannada
English summary
Royal Enfield Unveils Custom Himalayan Flat Track Motorcycle At Rider Mania 2019 - Read in Kannada
Story first published: Saturday, November 23, 2019, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X