ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಆಫ್ ರೋಡ್ ಆಧಾರಿತ ಬೈಕ್ ಆದ ಹಿಮಾಲಯನ್ 2019ರ ಜುಲೈ ತಿಂಗಳಿನಲ್ಲಿ 99%ನಷ್ಟು ಹೆಚ್ಚು ಮಾರಾಟವಾಗಿದೆ. 2018ರ ಜುಲೈನಲ್ಲಿ 811 ಬೈಕುಗಳ ಮಾರಾಟವಾಗಿದ್ದರೆ, ಈ ವರ್ಷದ ಜುಲೈನಲ್ಲಿ 1619 ಬೈಕುಗಳ ಮಾರಾಟವಾಗಿದೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ವರ್ಷದ ಮಾರಾಟದ ಪ್ರಕಾರ 99%ನಷ್ಟು ಏರಿಕೆಯಾಗಿದ್ದರೆ, ತಿಂಗಳ ಮಾರಾಟದ ಲೆಕ್ಕದಲ್ಲಿ 32%ನಷ್ಟು ಏರಿಕೆಯಾಗಿದೆ. ಆಟೋಮೊಬೈಲ್ ಉದ್ಯಮವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಮಾರಾಟ ಪ್ರಮಾಣವು ರಾಯಲ್ ಎನ್‍‍ಫೀಲ್ಡ್ ಕಂಪನಿಗೆ ಹೊಸ ಚೈತನ್ಯ ನೀಡಲಿದೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಹಿಮಾಲಯನ್ ಬೈಕುಗಳ ಜೊತೆಗೆ 650 ಟ್ವಿನ್ ಬೈಕುಗಳೂ ಸಹ ಉತ್ತಮ ಪ್ರಮಾಣದಲ್ಲಿ ಮಾರಾಟವಾಗಿವೆ. ತಿಂಗಳ ಮಾರಾಟದ ಆಧಾರದ ಮೇಲೆ 650 ಟ್ವಿನ್ ಬೈಕುಗಳು 27% ಏರಿಕೆಯನ್ನು ದಾಖಲಿಸಿವೆ. ಈ ವರ್ಷದ ಜೂನ್ ತಿಂಗಳಿನಲ್ಲಿ 1,751 ಟ್ವಿನ್ ಬೈಕುಗಳ ಮಾರಾಟವಾಗಿದ್ದರೆ, ಜುಲೈ ತಿಂಗಳಿನಲ್ಲಿ 2,225 ಬೈಕುಗಳು ಮಾರಾಟವಾಗಿವೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಕಂಪನಿಯ ಜನಪ್ರಿಯ ಬೈಕ್ ಆದ ಕ್ಲಾಸಿಕ್ 350 ಮಾರಾಟವು ಜುಲೈ ತಿಂಗಳಿನಲ್ಲಿ 33%ನಷ್ಟು ಕುಸಿತ ಕಂಡಿದೆ. ಜುಲೈ 2018ರಲ್ಲಿ 44,054 ಬೈಕುಗಳ ಮಾರಾಟವಾಗಿದ್ದರೆ, ಕಳೆದ ಜುಲೈನಲ್ಲಿ 33,790 ಬೈಕುಗಳು ಮಾರಾಟವಾಗಿವೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಕಂಪನಿಯ ಎರಡನೇ ಅತಿ ಹೆಚ್ಚು ಮಾರಾಟವಾಗುವ ಬುಲೆಟ್ 350 ಬೈಕ್, ಮಾರಾಟದಲ್ಲಿ 17%ನಷ್ಟು ಕುಸಿತವನ್ನು ದಾಖಲಿಸಿದೆ. 2018ರ ಜುಲೈನಲ್ಲಿ 10,442 ಬೈಕುಗಳು ಮಾರಾಟವಾಗಿದ್ದವು. ಈ ವರ್ಷದ ಜುಲೈನಲ್ಲಿ 10,000 ಬೈಕುಗಳ ಮಾರಾಟವಾಗಿವೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೇರೆ ಬೈಕುಗಳ ಮಾರಾಟದಲ್ಲಿಯೂ ಕುಸಿತ ಉಂಟಾಗಿದೆ. ಥಂಡರ್‍‍ಬರ್ಡ್ 350 ಬೈಕ್ 27%ನಷ್ಟು ಹಾಗೂ ಥಂಡರ್‍‍‍ಬರ್ಡ್ 500 ಬೈಕುಗಳು 83%ನಷ್ಟು ಕುಸಿತವನ್ನು ಕಂಡಿವೆ. ಒಟ್ಟಾರೆಯಾಗಿ ಕಂಪನಿಯು 27%ನಷ್ಟು ಕುಸಿತವನ್ನು ಕಂಡಿದೆ. 2018ರ ಜುಲೈನಲ್ಲಿ 67,001 ಬೈಕುಗಳು ಮಾರಾಟವಾಗಿದ್ದವು. ಈ ವರ್ಷ 49,182 ಬೈಕುಗಳು ಮಾರಾಟವಾಗಿವೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಕೆಲ ಬೈಕುಗಳ ಮಾರಾಟದಲ್ಲಿ ಏರಿಕೆಯಾಗಿದ್ದರೂ, ಕಂಪನಿಯು ದೇಶದ ಆಟೋ ಮೊಬೈಲ್ ಉದ್ಯಮ ಎದುರಿಸುತ್ತಿರುವ ನಿಧಾನಗತಿಯನ್ನು ಎದುರಿಸುತ್ತಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಸದ್ಯಕ್ಕೆ ತನ್ನ ಎಲ್ಲಾ ಬೈಕುಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿದೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಹಲವು ಮಾದರಿಗಳನ್ನು ಅಪ್‍‍ಡೇಟ್ ಮಾಡಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಪೇಟೆಂಟ್‍‍ಗೆ ಸಂಬಂಧಪಟ್ಟಂತೆ ಫ್ಲಾಶ್ ಎಲೆಕ್ಟ್ರಾನಿಕ್ಸ್ ಕಂಪನಿಯು ರಾಯಲ್ ಎನ್‍‍ಫೀಲ್ಡ್ ಕಂಪನಿಯ ವಿರುದ್ಧ ದಾವೆಯನ್ನು ಹೂಡಿರುವ ಕಾರಣ ಕಂಪನಿಯು ತನ್ನ ಹೊಸ ವಾಹನಗಳನ್ನು ನಿಧಾನಗತಿಯಲ್ಲಿ ಉತ್ಪಾದಿಸುತ್ತಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಿಮಾಲಯನ್ ಬೈಕ್ ಆರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತು. ಇದಾದ ನಂತರ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಗ್ರಾಹಕರ ಮಾತಿಗೆ ಮನ್ನಣೆ ನೀಡಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಹಿಮಾಲಯನ್ ಬೈಕ್ ಗಮನಾರ್ಹವಾಗಿದ್ದು, ಉತ್ತಮವಾದ ಪರ್ಫಾಮೆನ್ಸ್ ಹೊಂದಿದೆ. ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್

ಹಿಮಾಲಯನ್ ಬೈಕ್ ಅನ್ನು ಆಫ್ ರೋಡ್ ಆವೃತ್ತಿಯ ಬೈಕ್ ಎಂದು ಬಿಡುಗಡೆಗೊಳಿಸಲಾಗಿದ್ದರೂ, ಅದು ಬಹುತೇಕ ಬೈಕ್ ಪ್ರಿಯರ ನೆಚ್ಚಿನ ಬೈಕ್ ಆಗಿದೆ. ತನ್ನ ಒರಟು ಲುಕ್ ಹಾಗೂ ಆರಾಮದಾಯಕ ಸವಾರಿಯಿಂದಾಗಿ ಈ ಬೈಕ್ ತನ್ನ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ.

Most Read Articles

Kannada
English summary
Royal Enfield Himalayan Sales In July: Registers 99% Growth With 1619 Units Of Sales - Read in kannada
Story first published: Wednesday, August 28, 2019, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X