ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಬ್ಯಾಂಕಾಕ್‌ನಲ್ಲಿ ನಡೆದಿರುವ ಥೈಲ್ಯಾಂಡ್ ಆಟೋ ಎಕ್ಸ್‌ಪೋದಲ್ಲಿ ಬ್ರಿಟಿಷ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ತನ್ನ ಬಾಬ್ಬರ್ ಸ್ಪೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಅನಾವರಣ ಮಾಡಿದ್ದು, ಆರ್‌ಇ ಇದುವರೆಗೆ ನಿರ್ಮಾಣ ಮಾಡಿರುವ ಬೈಕ್ ಮಾದರಿಗಳಿಂತಲೂ ಇದು ಅತಿ ಹೆಚ್ಚು ಎಂಜಿನ್ ಸಾಮರ್ಥ್ಯದ ಬೈಕ್ ಮಾದರಿಯಾಗಿ ಹೊರಹೊಮ್ಮಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಜಗತ್ತಿನ ಅತಿದೊಡ್ಡ ಆಟೋ ಎಕ್ಸ್‌ಪೋಗಳಲ್ಲಿ ಒಂದಾಗಿರುವ ಬ್ಯಾಂಕಾಕ್ ಆಟೋ ಮೇಳವು ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ವಿಶ್ವದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯದಲ್ಲಿ ಬಿಡುಗಡೆಗೊಳಿಸುವ ಹೊಸ ವಾಹನ ಮಾದರಿಗಳನ್ನು ಅನಾವರಣಗೊಳಿಸುತ್ತವೆ. ಈ ವೇಳೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನ್ನು ಪ್ರದರ್ಶನ ಮಾಡಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೆ ನಿರ್ಮಾಣ ಮಾಡಿರುವ ಇತರೆ ಬೈಕ್ ಮಾದರಿಗಳಿಂತಲೂ ವಿಭಿನ್ನ ಎನ್ನಿಸುವ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಮಾದರಿಯು ವಿ-ಟ್ವಿನ್ ಎಂಜಿನ್ ವೈಶಿಷ್ಟ್ಯತೆಯೊಂದಿಗೆ ಟ್ವಿನ್ ಪೈಪ್ ಎಕ್ಸಾಸ್ಟ್‌ನೊಂದಿಗೆ ಮಿಂಚುತ್ತಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಸದ್ಯ ಜಾಗತಿಕವಾಗಿ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ಬಾಬ್ಬರ್ ಸ್ಟೈಲ್ ಮಾದರಿಯ ಬೈಕ್ ಉತ್ಪನ್ನ ಈಗಾಗಲೇ ಮಾರಾಟ ಮಾಡುತ್ತಿದ್ದರೂ ಸಹ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ಸ್ಟೈಲ್ ಹೊಸ ಬೈಕ್ ತಾಂತ್ರಿಕವಾಗಿ ಅವುಗಳಿಂತ ವಿಭಿನ್ನತೆಯನ್ನು ಹೊಂದಿರಲಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಇದಕ್ಕೆ ಕಾರಣ, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಹೊಸ ಬೈಕ್ ನಿರ್ಮಾಣಕ್ಕಾಗಿ ಯುಎಸ್ಎ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಇಂಡಿಯನ್ ಮೋಟಾರ್‌ಸೈಕಲ್(ಪೊಲಾರಿಸ್ ಇಂಡಸ್ಟ್ರೀಸ್) ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಇಂಡಿಯನ್ ಮೋಟಾರ್‌ಸೈಕಲ್ ಸಂಸ್ಥೆಯು ಆರ್‌ಇ ಹೊಸ ಬೈಕಿಗೆ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಸಿದ್ದಪಡಿಸುವ ಹೊಣೆ ಹೊತ್ತುಕೊಂಡಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಹೀಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಹೊಸ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಎಂಜಿನ್ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲು ಯುರೋ 6(ಇದು ಭಾರತದಲ್ಲಿ ಬಿಎಸ್ 6) ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ.

MOST READ: ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ತಪ್ಪದೇ ತಿಳಿಯಿರಿ..!

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಎಂಜಿನ್ ಸಾಮರ್ಥ್ಯ

ಆರ್‌ಇ ಹೊಸ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್‌ ಮಾದರಿಯು 883ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಗರಿಷ್ಠ ಮಟ್ಟದ 90-ಬಿಎಚ್‌ಪಿ ಹಾರ್ಸ್ ಪವರ್ ಉತ್ಪಾದನಾ ಗುಣಹೊಂದಿದ್ದು, ಎಲ್‌ಇಡಿ ಹೆಡ್‌ಲೈಟ್, ಫ್ಲ್ಯಾಟ್ ಹ್ಯಾಂಡಲ್‌ಬಾರ್, ಟ್ರಯಂಫ್ ಬೊನೆವಿಲ್ಲೆ ಮಾದರಿಯಲ್ಲಿ ಸಿಂಗಲ್ ಸೀಟು, ಮುಂಭಾಗದ ಚಕ್ರದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್, ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಬಿಡುಗಡೆ ಯಾವಾಗ?

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನ್ನು ಕೇವಲ ಅನಾವರಣ ಮಾಡಿದ್ದು, ಭಾರತದಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ಈ ಹೊಸ ಬೈಕ್ ಯುರೋಪ್ ರಾಷ್ಟ್ರಗಳಲ್ಲಿ 2020ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ರಾಯಲ್ ಎನ್‌ಫೀಲ್ಡ್ ನಿರ್ಮಾಣದ 883ಸಿಸಿ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನಾವರಣ

ಇದರಿಂದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್ ಅನ್ನು 2020ರ ಮಧ್ಯಂತರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಬೈಕಿನ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 9 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Sunday, March 31, 2019, 13:00 [IST]
English summary
Royal Enfield KX Concept Debuts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+