ರಾಯಲ್ ಎನ್‍ಫೀಲ್ಡ್ ಹೊಸ ಬೈಕಿನ ಹೆಸರೇನು ಗೊತ್ತಾ?
ಚೆನ್ನೈ ಮೂಲದ ಮೋಟಾರ್‍ಸೈಕಲ್ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಮಧ್ಯಮ ಗಾತ್ರದ ಸೆಗ್‍ಮೆಂಟಿನಲ್ಲಿಯೇ ಅತಿ ದೊಡ್ಡದಾದ ಮೋಟಾರ್‍ಸೈಕಲ್ ತಯಾರಿಸುವ ಹಾದಿಯಲ್ಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಇಂಟರ್‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ 650 ಜಿಟಿ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ.

ಇದರ ಮುಂದುವರೆದ ಭಾಗವಾಗಿರುವ 838 ಸಿಸಿ ಮೋಟಾರ್‍ಸೈಕಲ್ ಕೆಎಕ್ಸ್ ಕಾಂನೆಪ್ಟ್ ಅನ್ನು ಕೆಲವು ತಿಂಗಳ ಹಿಂದೆ ನಡೆದ ಇಐಸಿಎಂಎ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಗಿತ್ತು. ಯೂರೋಪಿಯನ್ ಯೂನಿಯನ್ ಇಂಟೆಲೆಕ್ಚುಯಲ್ ಪ್ರಾಪರ್ಟಿ ಕಚೇರಿಯಲ್ಲಿ ಸಲ್ಲಿಸಲಾಗಿರುವ ಪೇಟೆಂಟ್ ಅರ್ಜಿಯಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿಯು ಟ್ರೇಡ್‍ಮಾರ್ಕ್ ಪಡೆದು, ಹೊಸ ಹೆಸರನ್ನು ರಾಯಲ್ ಎನ್‍ಫೀಲ್ಡ್ ಮೆಟಿಯೊರ್ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದೆ.

ಆಟೊಮೋಬೈಲ್ ಇಂಡಸ್ಟ್ರಿಯಲ್ಲಿರುವ ಕೆಲವರ ಪ್ರಕಾರ ಈ ಹೆಸರು, 650 ಸಿಸಿಯಲ್ಲಿರುವ ಹೊಸ ಮಾದರಿ ಬೈಕುಗಳಿಗೆ ಇರಬಹುದೆಂದು ತಿಳಿಸಿದರೆ, ಇನ್ನೂ ಕೆಲವರ ಪ್ರಕಾರ ಈ ಹೆಸರನ್ನು 650 ಟ್ವಿನ್ ಮಾದರಿಯ ಬೈಕುಗಳಿಗೆ ಬಳಸುವುದಿಲ್ಲ, ಬದಲಿಗೆ ಹೊಸ ಮೋಟಾರ್‍ಸೈಕಲ್‍ಗೆ ಬಳಸಬಹುದು ಎಂದು ತಿಳಿದು ಬಂದಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ಯೂರೋಪಿಯನ್ ಪೇಟೆಂಟ್ ಕಚೇರಿಯಲ್ಲಿ ಮೆಟಿಯೋರ್ ಎಂಬ ಹೆಸರಿಗೆ ಟ್ರೇಡ್‍ಮಾರ್ಕ್ ಪಡೆದಿದೆ. ಈ ಪೇಟೆಂಟ್ ಅರ್ಜಿಯನ್ನು 2019ರ ಫೆಬ್ರವರಿ ತಿಂಗಳಿನಲ್ಲಿ ಸಲ್ಲಿಸಲಾಗಿದ್ದು, ಈ ಹೆಸರನ್ನು ಪಡೆಯಲು ಕಂಪನಿಯು 2019ರ ಜುಲೈ 3ರವರೆಗೆ ಕಾಯಬೇಕಾಗುತ್ತದೆ.

ಪೇಟೆಂಟ್ ಪಡೆದ ನಂತರ ರಾಯಲ್ ಎನ್‍ಫೀಲ್ಡ್ ಕಂಪನಿಯು ಮೆಟಿಯೋರ್ ಹೆಸರನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಬಹುದು. ತನ್ನ ಮೋಟಾರ್‍ಸೈಕಲ್ ಸರಣಿಗಳಿಗೆ ಹೆಸರನ್ನು ಇಡಲು, ಬಿಡಿ ಭಾಗಗಳಿಗೆ, ಆಕ್ಸೆಸರೀಸ್‍ಗಳಿಗೆ ಹೆಸರಿಡಲು ಮತ್ತು ಹೊಸ ರೈಡಿಂಗ್ ಗೇರ್‍ಗಳಿಗೆ ಹಾಗೂ ಇತರ ಅಪಾರೆಲ್‍ಗಳಿಗೆ ಹೆಸರಿಡಲು ಬಳಸಬಹುದು. ರಾಯಲ್ ಎನ್‍ಫೀಲ್ಡ್ ಕಂಪನಿಯು 1952ನೇ ಇಸವಿಯಲ್ಲಿ 500 ಸಿಸಿ ಸೆಗ್‍ಮೆಂಟಿನಲ್ಲಿ, ಪ್ಯಾರಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದ್ದ ಮೆಟಿಯೋರ್ ಎಂಬ ಮೋಟಾರ್‍ಸೈಕಲ್ ಅನ್ನು ಬಿಡುಗಡೆಗೊಳಿಸಿತ್ತು.

ಇದಾದ ನಂತರ 1953 ರಲ್ಲಿ ಮೆಟಿಯೋರ್ 700 ಹೆಸರಿನ ಬೈಕುಗಳನ್ನು ಬಿಡುಗಡೆಗೊಳಿಸಲಾಗಿತ್ತು. 1960ರಲ್ಲಿ ರಾಯಲ್ ಎನ್‍ಫೀಲ್ಡ್ ಇಂಟರ್‍ಸೆಪ್ಟರ್ ಬೈಕುಗಳನ್ನುಬಿಡುಗಡೆಗೊಳಿಸಲಾಗಿತ್ತು. 1960ರಲ್ಲಿ ಬಿಡುಗಡೆಯಾದ ಇಂಟರ್‍ಸೆಪ್ಟರ್ ಬೈಕ್, ಮೆಟಿಯೋರ್ 700 ಬೈಕುಗಳಿಗೆ ಅಂತ್ಯ ಹಾಡಿತ್ತು.

ರಾಯಲ್ ಎನ್‍ಫೀಲ್ಡ್ ಕಂಪನಿಯು ಎರಡು ವಿಷಯಗಳ ಬಗ್ಗೆ ಗಮನಹರಿಸುತ್ತಿದೆ. ಮೊದಲನೆಯದು ಮೆಟಿಯೋರ್ ಹೆಸರಿನಲ್ಲಿ ಎಂಟ್ರಿ ಲೆವೆಲ್‍ನಲ್ಲಿ ಟ್ವಿನ್ ಮೋಟಾರ್ ಸೈಕಲ್‍ಗಳನ್ನು ಬಿಡುಗಡೆ ಮಾಡುವುದು, ಇದು 1952ರಲ್ಲಿ ಬಿಡುಗಡೆಯಾದ 500 ಸಿಸಿಯ ಟ್ವಿನ್ ಬೈಕ್‍ಗಳಾಗಿರಬಹುದು ಅಥವಾ ಹೊಸ ಮಾದರಿಯ 650 ಟ್ವಿನ್ ಆಗಿರಬಹುದು. ಎರಡನೆಯದು, 838 ಸಿಸಿ ಸೆಗ್‍ಮೆಟಿನಲ್ಲಿ ಕೆಎಕ್ಸ್ ಕಾಂಸೆಪ್ಟ್ ನಲ್ಲಿ ದೊಡ್ಡ ಬೈಕ್ ಬಿಡುಗಡೆ ಮಾಡುವುದು.

ಒಂದು ವೇಳೆ ಮೆಟಿಯೋರ್ 838 ಸಿಸಿಯಲ್ಲಿ ಬಿಡುಗಡೆಗೊಂಡರೆ, ಅದು ರಾಯಲ್ ಎನ್‍ಫೀಲ್ಡ್ ಬಿಡುಗಡೆ ಮಾಡಲಿರುವ ಅತಿ ದೊಡ್ಡ ಬೈಕ್ ಆಗಿರಲಿದೆ. ಈ ಮೋಟಾರ್ ಸೈಕಲ್ 838 ಸಿಸಿಯ ಲಿಕ್ವಿಡ್ ಕೂಲ್‍ನ ಪ್ಯಾರೆಲೆಲ್ ಟ್ವಿನ್ ಎಂಜಿನ್ ಹೊಂದಿರಲಿದೆ. ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಇರಲಿದೆ. ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.
MOST READ: ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕಿನ ವಿಶೇಷತೆಗಳೇನು?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮೆಟಿಯೋರ್ ಎಂಬ ಹೆಸರಿಡುವುದುರ ಬಗ್ಗೆ ಖಚಿತತೆ ಇಲ್ಲ, ಏಕೆಂದರೆ ಮೆಟಿಯೋರ್ ಎಂಬುದರ ಅರ್ಥವು ಬೀಳುವುದು, ಸುಡುವುದು ಎಂದು ಆಗಿದೆ. ಆದರೆ 838 ಸಿಸಿಯ ಮೋಟಾರ್‍ಸೈಕಲ್ ಉತ್ಪಾದಿಸುವುದರಿಂದ ರಾಯಲ್ ಎನ್‍ಫೀಲ್ಡ್ ಮುಂದಿನ ದಿನಗಳಲ್ಲಿ ದೊಡ್ಡದಾದ, ಬಲಿಷ್ಟವಾದ ಬೈಕುಗಳನ್ನು ಉತ್ಪಾದಿಸುವ ಯೋಜನೆಗೆ ನಾಂದಿ ಹಾಡಲಿದೆ. ಈ ಯೋಜನೆಯ ಬಗ್ಗೆ ಹ್ಯಾರ್ಲಿ ಡೇವಿಡ್‍ಸನ್ ಕಂಪನಿಯು ತಲೆ ಕೆಡಿಸಿಕೊಳ್ಳುವುದು ಖಚಿತ.


Click it and Unblock the Notifications








