ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕಿನ ವಿಶೇಷತೆಗಳೇನು?
ಜಪಾನಿನ ದ್ವಿಚಕ್ರವಾಹನ ತಯಾರಕ ಕಂಪನಿಯಾದ ಸುಜುಕಿ ತನ್ನ ಹೊಸ ಜಿಕ್ಸರ್ ಎಸ್‍ಎಫ್250 ವಾಹನವನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಹೊಸ ವಾಹನ ಬಿಡುಗಡೆಯ ಪೂರ್ವಭಾವಿಯಾಗಿ ಸುಜುಕಿ ಜಿಕ್ಸರ್ ಎಸ್‍ಎಫ್ 250 ವಾಹನದ ವಿಶೇಷತೆಗಳು ಮತ್ತು ಚಿತ್ರಗಳನ್ನು ಮೋಟೊರಾಯ್ಡ್ಸ್ ಅಂತರ್‍ಜಾಲದಲ್ಲಿ ಸೋರಿಕೆ ಮಾಡಿದೆ.

ಸೋರಿಕೆಯಾದ ಚಿತ್ರದಲ್ಲಿ ಸುಜುಕಿ ಜಿಕ್ಸರ್ 250 ವಾಹನವು ಬಿಳಿಯ ಬಣ್ಣದಲ್ಲಿದೆ. ಈ ಬೈಕ್, ಬೈಕಿನ ಪಕ್ಕದಲ್ಲಿರುವ ಎಂಜಿನ್‍ಅನ್ನು ಸೇರಿದಂತೆ ಪೂರ್ತಿ ಹೊಳಪನ್ನು ಹೊಂದಿದೆ. ಬೀಕ್‍ನ ಮಾದರಿಯಲ್ಲಿರುವ ಹೆಡ್‍ಲ್ಯಾಂಪ್ ಯೂನಿಟ್ ಹೊಂದಿದ್ದು, ಇದು ಎಲ್‍ಇಡಿ ಆಗಿರುವ ಸಾಧ್ಯತೆಗಳಿವೆ, ಇದರ ಜೊತೆಗೆ ಹಿಂಭಾಗದಲ್ಲಿ, ಹೊಳಪಾಗಿರುವ ಮೌಂಟೆಡ್ ಮಿರರ್‍ಗಳು ಮತ್ತು ಟಿಂಟೆಡ್ ವಿಂಡ್‍ಸ್ಕ್ರೀನ್‍ಗಳಿವೆ.

ಸುಜುಕಿ ಜಿಕ್ಸರ್‍ನಲ್ಲಿರುವ ಇತರ ಫೀಚರ್‍ಗಳೆಂದರೆ - ಹ್ಯಾಂಡಲ್‍ಬಾರ್ ಮೇಲೆ ಕ್ಲಿಪ್ ಹೊಂದಿದ್ದು, ಜೊತೆಯಲ್ಲಿ ರೇರ್ ಸೆಟ್ ಫುಟ್‍ಪೆಗ್ ಹೊಂದಿದೆ. ಇದರಲ್ಲಿರುವ ಸ್ಪ್ಲಿಟ್ ಸೀಟುಗಳ ವಿನ್ಯಾಸವು ಈ ಬೈಕಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಈ ಬೈಕಿನಲ್ಲಿರುವ ಡಬಲ್ ಬ್ಯಾರೆಲ್ ಎಕ್ಸಾಸ್ಟ್, ಹಿಂದಿನ ಜಿಕ್ಸರ್ ಎಸ್‍ಎಫ್‍ನಲ್ಲಿದ್ದಂತೆ ಇದೆ. ಹೊಸ ಜಿಕ್ಸರ್ 250 ಎಸ್‍ಎಫ್‍ನಲ್ಲಿ ಸಣ್ಣ ಟೇಲ್ ಸೆಕ್ಷನ್ ಇದ್ದು, ಇದು ಎಲ್‍ಇಡಿ ಟೇಲ್ ಲೈಟ್ ಆಗಿರುವ ಸಾಧ್ಯತೆಯಿದೆ. ಹಿಂಭಾಗದಲ್ಲಿ, ಹಿಂಬದಿ ಸವಾರರಿಗಾಗಿ, ಸ್ಪ್ಲಿಟ್ ಗ್ರಾಬ್ ರೇಲ್‍ಗಳಿವೆ.

ಸೋರಿಕೆಯಾಗಿರುವ ಚಿತ್ರವು ಬೈಕಿನ ಬಗ್ಗೆ, ಬೈಕಿನ ಬೆಲೆಯನ್ನು ಹೊರತುಪಡಿಸಿ, ಸಂಪೂರ್ಣವಾದ ವಿಶೇಷತೆಗಳನ್ನು ತೋರಿಸುತ್ತದೆ. ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕ್, ಆಯಿಲ್ ಕೂಲ್‍ನ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಫ್ಯೂಯಲ್ ಇಂಜೆಕ್ಟೆಟೆಡ್‍ನ ಪವರ್ ಪ್ಲಾಂಟ್, 26.1 ಬಿಹೆಚ್‍ಪಿಯನ್ನು 9,000 ಆರ್‍ಪಿಎಂ ನಲ್ಲಿ ಉತ್ಪಾದಿಸಿದರೆ, 22.6 ಎನ್‍ಎಂ ಟಾರ್ಕ್‍ಅನ್ನು 7,500 ಆರ್‍ಪಿಎಂ ನಲ್ಲಿ ಉತ್ಪಾದಿಸಿ 6 ಸ್ಪೀಡಿನ ಮ್ಯಾನುಯಲ್ ಗೇರ್‍ಬಾಕ್ಸ್ ಮತ್ತು ಚೈನ್ ಡ್ರೈವ್ ಮೂಲಕ ಹಿಂದಿನ ವ್ಹೀಲ್‍ಗೆ ಕಳುಹಿಸುತ್ತದೆ.

ಜಿಕ್ಸರ್ ಎಸ್‍ಎಫ್ 250 ಬೈಕ್ 12 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ.
MOST READ: ಪ್ರೀಮಿಯಂ ಕಾರುಗಳ ಲೀಸ್ ಸೇವೆ ಆರಂಭಿಸಲಿದೆ ಫಿಯೆಟ್

ಭಾರತದ ಮಾರುಕಟ್ಟೆಗೆಂದು ತಯಾರಿಸಲಾಗಿರುವ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕ್ 2,010 ಎಂಎಂ ಉದ್ದ, 740 ಎಂಎಂ ಅಗಲ ಮತ್ತು 1,035 ಎಂಎಂ ಎತ್ತರವನ್ನು ಹೊಂದಿದೆ. ಜಿಕ್ಸರ್ ಎಸ್‍ಎಫ್ 250 ಬೈಕಿನ ವ್ಹೀಲ್ ಬೇಸ್ 1,345 ಎಂಎಂ ಉದ್ದವಿದ್ದರೆ, ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಇದೆ. ಇನ್ನೂ ಸುಜುಕಿ ಜಿಕ್ಸರ್ ಎಸ್‍ಎಫ್ 250 ಸೀಟಿನ ಎತ್ತರವು 800 ಎಂಎಂ ಇದ್ದರೆ, ಬೈಕಿನ ತೂಕವು 161 ಕೆ.ಜಿ ತೂಕವನ್ನು ಹೊಂದಿದೆ.

ಸೋರಿಕೆಯಾಗಿರುವ ಚಿತ್ರದ ಪ್ರಕಾರ ಸುಜುಕಿ ಜಿಕ್ಸರ್ 250 ಬೈಕ್ ಮುಂಭಾಗದಲ್ಲಿ ಆಯಿಲ್ ಡ್ಯಾಂಪ್‍ನ ಟೆಲಿಸ್ಕೋಪಿಕ್ ಫೋರ್ಕ್ ಹೊಂದಿದ್ದರೆ, ಹಿಂಭಾಗದಲ್ಲಿ ಮೋನೊಶಾಕ್ ಹೊಂದಿದೆ. ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕ್, 17 ಇಂಚಿನ ಅಲಾಯ್ ವ್ಹೀಲ್‍ಗಳ ಕೂರುತ್ತದೆ. ಮುಂಭಾಗದ ಟಯರ್ 110/70 ಆರ್17 ಆಗಿದ್ದರೆ, ಹಿಂಭಾಗದ ಟಯರ್ 150/60-ಆರ್17 ಟ್ಯೂಬ್‍ಲೆಸ್ ಆಗಿರುತ್ತದೆ.


Click it and Unblock the Notifications








