ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಪ್ರೀಮಿಯಂ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ಮತ್ತಷ್ಟು ಹೊಸ ಯೋಜನೆಗಳನ್ನು ರೂಪಿಸಿದ್ದು, ಬೈಕ್ ಮಾರಾಟವನ್ನು ಹೆಚ್ಚಿಸುವ ಸಂಬಂಧ ಮಾರಾಟ ವಿಭಾಗದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಹೌದು, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಬೈಕ್ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವತ್ತ ವಿವಿಧ ಮಾದರಿಯ ಹೊಸ ಶೈಲಿಯ ಕ್ಲಾಸಿಕ್ ಬೈಕ್‌ಗಳನ್ನು ಪರಿಚಯಿಸಿದ್ದು, ಆರ್‌ಇ ಕೂಡಾ ಇದೇ ನಿಟ್ಟಿನಲ್ಲಿ ತನ್ನ ಬಹುನೀರಿಕ್ಷಿತ ಕಾಂಟಿನೆಂಟಲ್ ಜಿಟಿ ಮತ್ತು ಇಂಟರ್‌ಸೆಪ್ಟರ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ, ಹೊಸ ಬೈಕ್ ಮಾರಾಟಕ್ಕಾಗಿ ಮಾರಾಟ ಮಳಿಗೆಗಳ ಕೊರತೆ ಎದುರಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೆಟ್ರೋ ನಗರಗಳನ್ನು ಹೊರತುಪಡಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಸಣ್ಣಗಾತ್ರದ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಈ ಕುರಿತು ಯುಕೆನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿರುವ ಆರ್‌ಇ ಇಂಡಿಯಾ ಮುಖ್ಯಸ್ಥ ಸಿದ್ದಾರ್ಥ್ ಲಾಲ್ ಅವರು, ಭಾರತದಲ್ಲಿ ಪ್ರೀಮಿಯಂ ಬೈಕ್ ಮಾರಾಟವು ಹೆಚ್ಚುತ್ತಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮೆಟ್ರೋ ನಗರಗಳು ಅಷ್ಟೇ ಅಲ್ಲದೇ ಸಣ್ಣ ನಗರಗಳಲ್ಲೂ ಹೊಸ ಮಾರಾಟ ಮಳಿಗೆಗಳ ವಿಸ್ತರಣೆ ಅವಶ್ಯಕೆಯಿದೆ ಎಂದಿದ್ದಾರೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಹೀಗಾಗಿ ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು, ಪ್ರತಿಸ್ಪರ್ಧಿ ಜಾವಾ ಸಂಸ್ಥೆಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಹೊಸ ಬೈಕ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಹೊರತರುವ ಇರಾದೆಯಲ್ಲಿದೆ. ಇದಕ್ಕಾಗಿಯೇ ಚೆನ್ನೈ ಬಳಿಯ ವಲ್ಲಂ ವಡಗಾಲ್‌ನಲ್ಲಿರುವ ತನ್ನ ಬೈಕ್ ಉತ್ಪಾದನಾ ಘಟಕವನ್ನು ಸಹ ವಿಸ್ತರಣೆ ಮಾಡುತ್ತಿದ್ದು, ಬೈಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬೈಕ್ ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಮಹತ್ವದ ಯೋಜನೆಯಾಗಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಮಾತೃ ಸಂಸ್ಥೆಯಾಗಿರುವ ಐರಿಷ್ ಮೋಟಾರ್ ಲಿಮಿಟೆಡ್ ಸಂಸ್ಥೆಯ ಮಾರ್ಗದರ್ಶನದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದು, ಹೊಸ ಬೈಕ್‌ಗಳ ಅಭಿವೃದ್ಧಿ ಸುಧಾರಿತ ತಂತ್ರಜ್ಞಾನ ಬಳಕೆ ಮಾಡುವತ್ತ ಹೆಚ್ಚಿನ ಗಮನಹರಿಸುತ್ತಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಜೊತೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ತಂತ್ರಜ್ಞಾನ ಸೌಲಭ್ಯದಲ್ಲಿ ಸಾಕಷ್ಟು ಬದಲಾವಣೆಗೊಳ್ಳಲಿದ್ದು, ಇದಕ್ಕಾಗಿಯೇ ಐರಿಷ್ ಮೋಟಾರ್ ಸಂಸ್ಥೆಯು ರಾಯಲ್ ಎನ್‌ಫೀಲ್ಡ್ ಉಸ್ತುವಾರಿಗಾಗಿ ವಿನೋದ್ ಕೆ ದಾಸರಿ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಬಂಡವಾಳ ಹೂಡಿಕೆಯು ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಯೋಜನೆಗೆ ಸಾಕಷ್ಟು ಸಹಕಾರಿಯಾಗಿಯಾಗಿದೆ ಎನ್ನಬಹುದು.

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಹೊಸ ಬೈಕ್‌ಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರೆಟ್ರೋ ಲುಕ್ ಮೋಟಾರ್‌ಸೈಕಲ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಎನ್ನುವ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಮಾಡಿದೆ.

MOST READ: ದಯವಿಟ್ಟು ಇತ್ತ ಗಮನಿಸಿ- ವಾಹನಗಳ ವಿಮಾ ಮೊತ್ತದಲ್ಲಿ ಏರಿಕೆ..!

ಬೈಕ್ ಮಾರಾಟ ಹೆಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಈ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ 10 ಲಕ್ಷ ಬೈಕ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಗುರಿಹೊಂದಲಾಗಿದ್ದು, 2018-19 ರ ಅವಧಿಯಲ್ಲಿ ಒಟ್ಟು 8,26,098 ಬೈಕ್‌ಗಳನ್ನು ಮಾರಾಟ ಮಾಡಿತ್ತು.

Most Read Articles

Kannada
English summary
Royal Enfield Plans To Set Up Mini Dealerships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X