ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‌ಫೀಲ್ಡ್‌ನ ಹೊಸ ಸಿ‍ಇ‍ಒ ವಿನೋದ್ ದಾಸರಿರವರು, ವಾಹನ ಉದ್ಯಮದಲ್ಲಿ ನಿಧಾನಗತಿಯ ಪ್ರಗತಿಯು ಮುಕ್ತಾಯವಾಗಿದೆ ಹಾಗೂ ಇನ್ನು ಮುಂದೆ ವಾಹನ ಮಾರಾಟದ ಸಂಖ್ಯೆಯು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಎಕನಾಮಿಕ್ ಟೈಮ್ಸ್ ಆಟೋಗೆ ನೀಡಿದ ಸಂದರ್ಶನದಲ್ಲಿ ಅಕ್ಟೋಬರ್ ತಿಂಗಳ ಮಾರಾಟವು ರಾಯಲ್ ಎನ್‍‍ಫೀಲ್ಡ್ ಕಂಪನಿಯ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದರು. ರಾಯಲ್ ಎನ್‌ಫೀಲ್ಡ್ ಕಂಪನಿಯ ಪ್ರತಿ ತಿಂಗಳ ಮಾರಾಟವು ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷದ ಜುಲೈನಲ್ಲಿ ಕುಸಿದಿತ್ತು.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಜುಲೈ ತಿಂಗಳಿನಲ್ಲಿ 49,182 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. 2018ರ ಜುಲೈ ತಿಂಗಳಿಗೆ ಹೋಲಿಸಿದರೆ 27%ನಷ್ಟು ಕುಸಿತ ಕಂಡಿತ್ತು. ಆಗಸ್ಟ್ ತಿಂಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಮಾರಾಟವು ಹೆಚ್ಚುವರಿ 24%ನಷ್ಟು ಕುಸಿದಿತ್ತು.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಎರಡು ಅಂಕಿಗಳ ಬೆಳವಣಿಗೆ ಕಾಣಲಿದೆ ಎಂದು ದಾಸರಿರವರು ಹೇಳುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನಿಯ ಉತ್ಪನ್ನಗಳು ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿವೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಬೇಡಿಕೆಯ ಭಾರಿ ಹೆಚ್ಚಳದಿಂದಾಗಿ ಅದರಲ್ಲೂ 650 ಟ್ವಿನ್ ಬೈಕುಗಳಿಗಿರುವ ಬೇಡಿಕೆಯಿಂದಾಗಿ ರಾಯಲ್ ಎನ್‌ಫೀಲ್ಡ್ ಹೆಚ್ಚು ಪ್ರಗತಿಯನ್ನು ಸಾಧಿಸುವುದಾಗಿ ದಾಸರಿರವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ದಾಸರಿರವರು ಹೇಳಿದರು.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಹೊಸ 350 ಸಿಸಿ ಹಾಗೂ ಅಪ್‍‍ಡೇಟ್ ಮಾಡಲಾದ ಹಿಮಾಲಯನ್ ಬೈಕುಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ ತಿಳಿಸಿದರು. ರಾಯಲ್ ಎನ್‌ಫೀಲ್ಡ್‌ನ ಹೊಸ ಸಿಇಒರವರು, ನಾವು ಕೆಳಭಾಗವನ್ನು ಮುಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಬಿಡುಗಡೆಯಾಗಲಿರುವ ವಾಹನಗಳನ್ನು ಗಮನಿಸಿದರೆ, ಎರಡು ಅಂಕಿಯ ಬೆಳವಣಿಗೆಯ ದರವು ಸಾಧ್ಯವಿದೆ. ಕುಸಿತದ ಸಮಯದಲ್ಲಿ ಹೈ ಎಂಡ್ ವಾಹನಗಳು ಹೆಚ್ಚು ಮಾರಾಟವಾಗಿರಲಿಲ್ಲ. ಆದರೆ ಪರಿಸ್ಥಿತಿ ಸುಧಾರಿಸಿದ ನಂತರ ವೇಗವಾಗಿ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಮಾರಾಟದ ಏರಿಕೆಯ ಹೊರತಾಗಿ, ರಾಯಲ್ ಎನ್‌ಫೀಲ್ಡ್ ಕಂಪನಿಯ ರಫ್ತು ಪ್ರಮಾಣವು 987%ನಷ್ಟು ಹೆಚ್ಚಾಗಿದೆ. ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ 5,000 ಬೈಕುಗಳನ್ನು ರಫ್ತು ಮಾಡಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಇದರಲ್ಲಿ ಇಂಟರ್‍‍ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ ಟ್ವಿನ್ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿವೆ. ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ಭಾರತದ ಹೊರಗೆ ತನ್ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಜಗತ್ತಿನಾದ್ಯಂತ ಇನ್ನೂ ಅನೇಕ ಘಟಕಗಳನ್ನು ಸ್ಥಾಪಿಸಲು ಯೋಜಿಸಿದೆ. ಇದರ ಜೊತೆಗೆ, ಕಂಪನಿಯು ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಿ, ತನ್ನ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವತ್ತ ಗಮನ ಹರಿಸಿದೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಕುಸಿತ ಕಂಡುಬಂದ ಕಾರಣ, ನಾವು ನಮ್ಮ ಬಂಡವಾಳ ಹೂಡಿಕೆಯನ್ನು ಕಡಿತಗೊಳಿಸಲಿಲ್ಲ. ಯಾವುದೇ ದೊಡ್ಡ ಸೌಲಭ್ಯಕ್ಕಾಗಿ ನಾವು ಇನ್ನು ಮುಂದೆ ಖರ್ಚು ಮಾಡುವುದಿಲ್ಲ. ನಮ್ಮ ಹೆಚ್ಚಿನ ಹೂಡಿಕೆಯು ಉತ್ಪಾದನಾ ಘಟಕ, ಹೊಸ ಉತ್ಪನ್ನ, ವಿದ್ಯುತ್ ಹಾಗೂ ಇನ್ನಿತರ ವಿಷಯಗಳ ಮೇಲಿರಲಿದೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಇದು ಪ್ರಪಂಚದಾದ್ಯಂತವಿರುವ ಸಣ್ಣ ಘಟಕಗಳಿಗೂ ಅನ್ವಯವಾಗುತ್ತದೆ ಎಂದು ದಾಸರಿರವರು ಹೇಳಿದರು. ರಾಯಲ್ ಎನ್‌ಫೀಲ್ಡ್ ಕಂಪನಿಯು, ರಾಯಲ್ ಎನ್‌ಫೀಲ್ಡ್ 2.0 ಎಂಬ ಹೊಸ ಜಾಗತಿಕ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಇದು - ವಾಹನಗಳ ಶ್ರೇಣಿಯನ್ನು ವಿಸ್ತರಿಸುವುದು, ಭೌಗೋಳಿಕ ವ್ಯಾಪ್ತಿ, ಪರಿಹಾರ ಮಾರಾಟ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಭಾರತದ ಹೊರಗೆ ಜಾಗತಿಕ ಗ್ರಾಹಕ ಬ್ರಾಂಡ್ ನಿರ್ಮಾಣ ಸೇರಿದಂತೆ ನಾಲ್ಕು ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ.

ಎರಡಂಕಿ ಬೆಳವಣಿಗೆಯತ್ತ ರಾಯಲ್ ಎನ್‍‍ಫೀಲ್ಡ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ವಾಹನ ತಯಾರಕ ಕಂಪನಿಗೆ ಇದೊಂದು ಶುಭ ಸುದ್ದಿ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ 500 ಸಿಸಿ ಸರಣಿಯ ಬೈಕುಗಳನ್ನು ಅಪ್‌ಗ್ರೇಡ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಶೀಘ್ರದಲ್ಲೇ ಹೊಸ 350 ಸಿಸಿ ಹಾಗೂ ಬಲಶಾಲಿಯಾದ ಹಿಮಾಲಯನ್ ಬೈಕುಗಳನ್ನು ನಾವು ನಿರೀಕ್ಷಿಸಬಹುದು.

Most Read Articles

Kannada
English summary
Royal Enfield Headed To Double Digit Growth Says New CEO Vinod Dasari - Read in Kannada
Story first published: Saturday, November 23, 2019, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X