ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ರಾಯಲ್ ಎನ್‍‍ಫೀಲ್ಡ್ ಕಂಪನಿಯು 2019ರ ಜುಲೈ ತಿಂಗಳಿನ ಮಾರಾಟದ ಅಂಕಿ ಅಂಶವನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯ ಮಾರಾಟದಲ್ಲಿ 27%ನಷ್ಟು ಕುಸಿತ ಉಂಟಾಗಿದೆ. ಜುಲೈ ತಿಂಗಳಿನಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ 49,192 ಬೈಕುಗಳ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 67,001 ಬೈಕುಗಳು ಮಾರಾಟವಾಗಿದ್ದವು.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಚೆನ್ನೈ ಮೂಲದ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಪ್ರತಿ ವರ್ಷದ ವಹಿವಾಟನ್ನು ಗಮನಿಸುವುದಾದರೆ, 2018-19ರ ಆರ್ಥಿಕ ವರ್ಷದಲ್ಲಿ 2,86,726 ಬೈಕುಗಳ ಮಾರಾಟವಾಗಿದ್ದರೆ, 2019-20ರ ಆರ್ಥಿಕ ವರ್ಷದಲ್ಲಿ 2,23,612 ಬೈಕುಗಳ ಮಾರಾಟವಾಗಿ, 22%ನಷ್ಟು ಕುಸಿತ ಉಂಟಾಗಿದೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಆದರೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬೈಕುಗಳ ರಫ್ತಿನಲ್ಲಿ ಹೆಚ್ಚಿನ ವಹಿವಾಟು ನಡೆಸಿದೆ. ಕಂಪನಿಯ ರಫ್ತು ಪ್ರಮಾಣವು ಜುಲೈ ತಿಂಗಳಿನಲ್ಲಿ 143%ನಷ್ಟು ಏರಿಕೆಯಾಗಿದೆ. 2018ರ ಜುಲೈನಲ್ಲಿ 2,062 ಬೈಕುಗಳನ್ನು ರಫ್ತು ಮಾಡಲಾಗಿದ್ದರೆ, ಈ ವರ್ಷದ ಜುಲೈನಲ್ಲಿ 5,003 ಬೈಕುಗಳನ್ನು ರಫ್ತು ಮಾಡಲಾಗಿದೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಪ್ರತಿ ವರ್ಷದ ಪ್ರಗತಿಯಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯು 84%ನಷ್ಟು ಏರಿಕೆ ಕಂಡಿದೆ. 2019ರ ಆರ್ಥಿಕ ವರ್ಷದಲ್ಲಿ 14,162 ಬೈಕುಗಳನ್ನು ರಫ್ತು ಮಾಡಲಾಗಿದೆ. 2018ರ ಆರ್ಥಿಕ ವರ್ಷದಲ್ಲಿ 7,698 ಬೈಕುಗಳನ್ನು ರಫ್ತು ಮಾಡಲಾಗಿತ್ತು.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ 650 ಸಿಸಿಯ ಟ್ವಿನ್ ಬೈಕುಗಳಾದ ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‍‍ಸೆಪ್ಟರ್ 650ಗಳಿಂದಾಗಿ ರಫ್ತಿನಲ್ಲಿ ಹೆಚ್ಚಿನ ಪ್ರಮಾಣದ ಯಶಸ್ಸನ್ನು ಸಾಧಿಸಿದೆ. ಈ ಎರಡೂ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ದ್ವಿ ಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ಬೈಕುಗಳಾಗಿವೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಕೈಗೆಟಕುವ ದರ ಹಾಗೂ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬ್ರಾಂಡ್‍‍ನಿಂದಾಗಿ ಈ ಎರಡೂ ಬೈಕುಗಳು ದೇಶಿಯ ಹಾಗೂ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಹೊಂದಿವೆ. ಇಂಟರ್‍‍ಸೆಪ್ಟರ್ 650 ಬೈಕಿನ ಬೆಲೆ ರೂ.2.50 ಲಕ್ಷಗಳಾಗಿದ್ದರೆ, ಕಾಂಟಿನೆಂಟಲ್ ಜಿಟಿ 650 ಬೈಕಿನ ಬೆಲೆ ರೂ.2.65 ಲಕ್ಷಗಳಾಗಿದೆ. ಈ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಈ ಎರಡೂ ಬೈಕುಗಳಲ್ಲಿ 649 ಸಿಸಿಯ ಪ್ಯಾರಲೆಲ್ ಟ್ವಿನ್ ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 47 ಬಿ‍‍ಹೆಚ್‍‍ಪಿ ಪವರ್ ಹಾಗೂ 52 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡ್‍‍ನ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಈ ಎರಡೂ ಬೈಕುಗಳ ಯಶಸ್ಸಿನ ನಂತರವೂ ರಾಯಲ್ ಎನ್‍‍ಫೀಲ್ಡ್ ಕಂಪನಿಯು, 54,185 ಬೈಕುಗಳ ಮಾರಾಟದೊಂದಿಗೆ 22%ನಷ್ಟು ಕುಸಿತ ಕಂಡಿದೆ. ಇವುಗಳಲ್ಲಿ 2019ರ ಜುಲೈ ತಿಂಗಳಿನ ರಫ್ತು ಹಾಗೂ ದೇಶಿಯ ಮಾರುಕಟ್ಟೆಯ ಮಾರಾಟ ಪ್ರಮಾಣಗಳು ಸೇರಿವೆ. ಪ್ರತಿ ವರ್ಷದ ಮಾರಾಟ ಪ್ರಮಾಣವು ಸಹ 19%ನಷ್ಟು ಕುಸಿತ ಕಂಡಿದೆ.

ಜುಲೈ ತಿಂಗಳಿನಲ್ಲಿ ಭಾರೀ ಕುಸಿತ ಕಂಡ ರಾಯಲ್ ಎನ್‍‍ಫೀಲ್ಡ್ ಮಾರಾಟ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಭಾರತದಲ್ಲಿರುವ ಜನಪ್ರಿಯ ದ್ವಿ ಚಕ್ರ ವಾಹನ ಕಂಪನಿಗಳ ಪೈಕಿ ಒಂದಾಗಿದೆ. ಕಂಪನಿಯು 350 ಸಿಸಿ ಹಾಗೂ 500 ಸಿಸಿ ಸೆಗ್‍‍ಮೆಂಟುಗಳಲ್ಲಿ ಹೆಚ್ಚಿನ ಪ್ರಮಾಣದ ಬೈಕುಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. 650 ಸಿಸಿಯ ಟ್ವಿನ್ ಬೈಕುಗಳು ಕಂಪನಿಯ ಪ್ರಮುಖ ಬೈಕುಗಳಾಗಿದ್ದು, ದೇಶಿಯ ಹಾಗೂ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪರ್ಧಾತ್ಮಕ ದರಗಳ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

Most Read Articles

Kannada
English summary
Royal Enfield Sales In India For July 2019 — 27% Decline In Domestic Market Sales - Read in kannada
Story first published: Saturday, August 3, 2019, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X