ಸ್ಪಾಟ್ ಟೆಸ್ಟ್ ನಡೆಸಿದ ಬಜಾಜ್ ಅರ್ಬನೈಟ್?
ತಯಾರಕರು ಯಾರೆಂದು ತಿಳಿಯದ, ಮೂಲ ಮಾದರಿಯಲ್ಲಿರುವ ಸ್ಕೂಟರ್ ಅನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ವದಂತಿಗಳ ಪ್ರಕಾರ, ಇದು ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಆಗಿರಬಹುದಾದ ಸಾಧ್ಯತೆಗಳಿವೆ. ಬಜಾಜ್ ಕಂಪನಿಯ ಸ್ಕೂಟರ್ ಆದಲ್ಲಿ, ಅರ್ಬನೈಟ್ ಬ್ರಾಂಡಿನ ಅಡಿಯಲ್ಲಿ ಮಾರಾಟ ಮಾಡಲಾಗುವುದು.

ಫೆಬ್ರವರಿ ತಿಂಗಳಿನಲ್ಲಿ, ಬಜಾಜ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿತ್ತು. ಈಗ ಸ್ಪಾಟ್ ಟೆಸ್ಟ್ ಮಾಡಲಾಗಿರುವ ಸ್ಕೂಟರ್‍ನ ತಯಾರಕರು ಯಾರು ಎಂದು ತಿಳಿಯದಿದ್ದರೂ, ಬಜಾಜ್ ಆಟೊ ಅಥವಾ ಮಹೀಂದ್ರಾ ಕಂಪನಿಯ ಸ್ಕೂಟರ್ ಆಗಿರಬಹುದು. ಬಜಾಜ್ ಮತ್ತು ಮಹೀಂದ್ರಾ ಎರಡೂ ಕಂಪನಿಗಳು ಪುಣೆಯಲ್ಲಿ ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿವೆ. ಬಜಾಜ್ ಹಾಗೂ ಮಹೀಂದ್ರಾ ತಯಾರಿಸುತ್ತಿರುವ ಹೊಸ ಸ್ಕೂಟರ್ ಮಾದರಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಈಗ ಸ್ಪಾಟ್ ಟೆಸ್ಟ್ ಮಾಡಲಾಗಿರುವ ಸ್ಕೂಟರ್ ಬಜಾಜ್ ಕಂಪನಿಗೆ ಸೇರಿರಬಹುದೆಂದು ಉದ್ಯಮದ ಮೂಲಗಳ ಊಹೆಯಾಗಿದೆ.
ಟೀಮ್ ಬಿಹೆಚ್‍ಪಿ ವರದಿಗಳ ಪ್ರಕಾರ, ರಹಸ್ಯವಾಗಿ ಸೆರೆ ಹಿಡಿದಿರುವ ಚಿತ್ರಗಳಲ್ಲಿ ತೋರಿಸಲಾದ ಸ್ಕೂಟರ್‍ನ ಹಿಂಭಾಗದ ಎಡ ಭಾಗದಲ್ಲಿ ಎಂಜಿನ್‍ನಂತಿದ್ದು, ಬಲಭಾಗದಲ್ಲಿ ಎಕ್ಸಾಸ್ಟ್ ಸಿಸ್ಟಂನಂತಿದೆ. ಮರೆ ಮಾಡಿರುವ ಈ ಸ್ಕೂಟರ್ ಉತ್ಪಾದನಾ ಹಂತದಲ್ಲಿರುವಂತಿದೆ.
ಈ ಚಿತ್ರದಲ್ಲಿ ತೋರಿಸಲಾದಂತೆ ಸ್ಕೂಟರ್‍ನ ಹಿಂಬದಿಯಲ್ಲಿ ಬಾಗಿರುವ ಎರಡು ಟೇಲ್ ಲೈಟ್‍ಗಳು ಹಾಗೂ ಅಗಲವಾದ ಸೀಟುಗಳಿವೆ. ಈ ಎರಡೂ ಫೀಚರ್‍ಗಳಿಂದ ಈ ವರ್ಷದ ಆರಂಭದಲ್ಲಿ ಸೋರಿಕೆಯಾದ ಚಿತ್ರದಲ್ಲಿದ್ದ, ಬಜಾಜ್ ಅರ್ಬನೈಟ್ ಸ್ಕೂಟರಿನಂತೆ ಕಾಣುತ್ತದೆ.
ಅರ್ಬನೈಟ್ ಬ್ರಾಂಡಿನ ಸ್ಕೂಟರ್‍ಅನ್ನು ಈ ವರ್ಷದ ಕೊನೆಯಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಆದ ಕಾರಣ ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಬಜಾಜ್ ಕಂಪನಿಯು ಪೆಟ್ರೋಲ್ ಮಾದರಿಯ ಸ್ಕೂಟರ್‍ಗಳನ್ನು ಮತ್ತೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಜಾಜ್ ಕಂಪನಿಯು ಹಿಂದೆ ತನ್ನ ಗೇರ್ ಸ್ಕೂಟರ್ ಆದ ಚೇತಕ್‍ನಿಂದಾಗಿ ಖ್ಯಾತಿಗಳಿಸಿತ್ತು.

ಬಜಾಜ್ ಕಂಪನಿಯು ಪೆಟ್ರೋಲ್ ಸ್ಕೂಟರ್ ಅನ್ನು ಮರು ಬಿಡುಗಡೆ ಮಾಡಲು ಎರಡು ಕಾರಣಗಳಿವೆ. ಮೊದಲನೆಯದು, ಸ್ಕೂಟರ್‍ಗಳು ಭಾರತದ ಆಟೋಮೋಬೈಲ್ ಉದ್ಯಮದ ಬಹು ದೊಡ್ಡ ಭಾಗವಾಗಿವೆ ಹಾಗೂ ಬಜಾಜ್ ಕಳೆದು ಹೋಗಿರುವ ತನ್ನ ಗತ ವೈಭವವನ್ನು ಮರಳಿ ಪಡೆಯಲು ಬಯಸಿದೆ. ಎರಡನೇಯದು, ಸ್ಕೂಟರ್ ಸೆಗ್‍ಮೆಂಟಿನ ಭಾಗವಾಗಲು ಬಯಸಿರುವ ಹೂಡಿಕೆದಾರರು ಬಜಾಜ್ ಕಂಪನಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಆಟೋಮ್ಯಾಟಿಕ್ ಸ್ಕೂಟರ್‍ಗಳು ನಿಧಾನವಾಗಿ ಜನಪ್ರಿಯತೆಯನ್ನು ಪಡೆಯುತ್ತಿದ್ದು, ಪ್ರಯಾಣಿಕ ಮೋಟಾರ್‍ಸೈಕಲ್ ಸೆಗ್‍ಮೆಂಟಿನ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಬಜಾಜ್ ಕಂಪನಿಯು ಮೊದಲಿಗೆ ಇಂಟರ್ನಲ್ ಕಂಬಸ್ಜನ್ ಎಂಜಿನ್ ಹೊಂದಿರುವ ಸ್ಕೂಟರ್ ಬಿಡುಗಡೆಗೊಳಿಸಿ, ನಂತರ ಪೆಟ್ರೋಲ್ ಸ್ಕೂಟರ್ ಮಾರುಕಟ್ಟೆಯಲ್ಲಿ ನಿಯಂತ್ರಣ ಹೊಂದಲು ಬಯಸಿದೆ.
ಇದರಿಂದ ಬಜಾಜ್ ಕಂಪನಿಗೆ ಎಲೆಕ್ಟ್ರಿಕ್ ಸ್ಕೂಟರ್ ಸೆಗ್‍ಮೆಂಟಿನಲ್ಲಿ ಮೇಲೆಳಲು ಸಾಧ್ಯವಾಗುತ್ತದೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎಲ್ಲಾ ಮಾಹಿತಿಗಳಿಂದ ಈ ಚಿತ್ರದಲ್ಲಿರುವ ಸ್ಕೂಟರ್ ಬಜಾಜ್ ಅರ್ಬನೈಟ್ ಎಂದು ತಿಳಿದು ಬರುತ್ತದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಬೇಡಿಕೆ ಬರಲಿದ್ದು, ಈ ವಿಷಯವು ಬಜಾಜ್ ಕಂಪನಿಗೂ ತಿಳಿದಿರುವ ಕಾರಣ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬಿಡುಗಡೆ ಮಾಡಲು ಇದು ಸಕಾಲವೆಂದು ತಿಳಿದಿದೆ. ಈ ಚಿತ್ರದಲ್ಲಿರುವುದು ಅರ್ಬನೈಟ್ ಸ್ಕೂಟರ್ ಆಗಿರುವುದು ನಿಜವೇ ಆದರೆ, ಸ್ಕೂಟರ್ ಸೆಗ್‍ಮೆಂಟಿನಲ್ಲಿ ನಿಜವಾದ ಪೈಪೋಟಿ ಏರ್ಪಡಲಿದೆ.
Image Source: TeamBHP


Click it and Unblock the Notifications