ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿ 6 ಸ್ಕೂಟರ್‍‍ಗಳನ್ನು ಹೊಂದಿದೆ. ಈ ಸ್ಕೂಟರ್‍‍ಗಳಲ್ಲಿ ಎಂಟ್ರಿ ಲೆವೆಲ್‍‍ನ 102 ಸಿಸಿಯ ಪ್ಲೆಶರ್ ಸ್ಕೂಟರ್‍‍‍ನಿಂದ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‍‍ಗಳು ಸೇರಿವೆ. ಹೀರೋ ಮೋಟೊಕಾರ್ಪ್ ಈ ವರ್ಷದ ಮೇ ತಿಂಗಳಿನಲ್ಲಿ ಎರಡು ಹೊಸ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿತ್ತು.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಹೀರೋ ಮೋಟೊಕಾರ್ಪ್, ತನ್ನ ಸ್ಕೂಟರ್‍‍ಗಳ ಸರಣಿಯಲ್ಲಿ ಎಂಟ್ರಿ ಲೆವೆಲ್‍‍ನ ಪ್ಲೆಷರ್, ಹೊಸದಾಗಿ ಬಿಡುಗಡೆಯಾದ ಪ್ಲೆಷರ್ ಪ್ಲಸ್, ಡ್ಯುಯೆಟ್, ಹೀರೋ ಮ್ಯಾಸ್ಟ್ರೋ ಎಡ್ಜ್ 110, ಹೀರೋ ಡೆಸ್ಟಿನಿ 125 ಹಾಗೂ ಮ್ಯಾಸ್ಟ್ರೋ ಎಡ್ಜ್ 125 ಎಫ್‌ಐ ಸ್ಕೂಟರ್‍‍ಗಳನ್ನು ಹೊಂದಿದೆ. ಹೀರೋ ಸ್ಕೂಟರ್ ಸರಣಿಯ ಮಾದರಿಗಳ ಬಗ್ಗೆ ಹಾಗೂ ಬೆಲೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

1. ಹೀರೋ ಪ್ಲೆಷರ್

ಎಂಟ್ರಿ ಲೆವೆಲ್‍‍ನ ಸ್ಕೂಟರ್ ಆದ ಪ್ಲೆಷರ್ ಸ್ಕೂಟರ್‍ ಅನ್ನು 2017ರಲ್ಲಿ ಕೆಲವು ಕಾಸ್ಮೆಟಿಕ್ ಹಾಗೂ ಮೆಕಾನಿಕಲ್ ಅಂಶಗಳಿಂದ ನವೀಕರಣಗೊಳಿಸಲಾಗಿತ್ತು. ಪ್ಲೆಷರ್ ಸ್ಕೂಟರ್ 102 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ ಬಿಎಸ್4 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇದ್ದು, 6.9ಬಿ‍‍ಹೆ‍‍ಚ್‍‍ಪಿ ಪವರ್ ಹಾಗೂ 8.1 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಈ ಸ್ಕೂಟರ್‍‍ನಲ್ಲಿ ಬ್ರೇಕಿಂಗ್ ಕಾರ್ಯಗಳಿಗಾಗಿ ಎರಡೂ ತುದಿಗಳಲ್ಲಿ 130 ಎಂಎಂ ಡ್ರಂ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಪ್ಲೆಷರ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದ್ದರೆ, ವ್ಹೀಲ್ ಹಾಗೂ ಎಕ್ಸಾಸ್ಟ್ ಯೂನಿಟ್‍‍ಗಳು ಕಪ್ಪು ಬಣ್ಣವನ್ನು ಹೊಂದಿವೆ. ಸೆಲ್ಫ್ ಸ್ಟಾರ್ಟ್ ಡ್ರಮ್ ಬ್ರೇಕ್ ಹೊಂದಿರುವ ಈ ಸ್ಕೂಟರ್‍‍ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.47,100ಗಳಾಗಿದೆ. ಸೆಲ್ಫ್ ಸ್ಟಾರ್ಟ್ ಡ್ರಂ ಬ್ರೇಕ್ ಹಾಗೂ ಶೀಟ್ ಮೆಟಲ್ ವ್ಹೀಲ್ ಹೊಂದಿರುವ ಮಾದರಿಯ ಬೆಲೆಯು ಎಕ್ಸ್‌ಶೋರೂಂ ದರದಂತೆ ರೂ. 45,100ಗಳಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

2. ಹೀರೋ ಪ್ಲೆಷರ್ ಪ್ಲಸ್ 110

ಹೀರೋ ಈ ವರ್ಷದ ಮೇ 13ರಂದು ದೇಶಿಯ ಮಾರುಕಟ್ಟೆಯಲ್ಲಿ ಪ್ಲೆಷರ್ ಪ್ಲಸ್ 110 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತು. ಹೊಸ ಸ್ಕೂಟರ್ ತನ್ನ ಹಿಂದಿನ ಮಾದರಿಯ ಸ್ಕೂಟರ್‍‍ಗಿಂತ ಹೆಚ್ಚಿನ ಅಪ್‍‍‍ಡೇಟ್‍‍ಗಳನ್ನು ಹೊಂದಿದೆ. ಹೊಸ ವಿನ್ಯಾಸದ ಜೊತೆಗೆ, ಹೊಸ ಬಣ್ಣ ಹಾಗೂ ಹೆಚ್ಚಿನ ಫೀಚರ್‍‍ಗಳನ್ನು ಹೊಂದಿದೆ. ಹೊಸ ಪ್ಲೆಷರ್ ಪ್ಲಸ್ ಹಳೆಯ ಸ್ಕೂಟರಿನಲ್ಲಿದ್ದ 102 ಸಿಸಿಯ ಎಂಜಿನ್ ಬದಲಿಗೆ 110 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಹೊಂದಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಈ ಎಂಜಿನ್ 8 ಬಿಹೆಚ್‌ಪಿ ಪವರ್ ಹಾಗೂ 8.7 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಸ್ಕೂಟರ್‍‍ನ ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಪ್ಲೆಷರ್ ಪ್ಲಸ್ ಸ್ಕೂಟರ್‍‍ನಲ್ಲಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (ಐಬಿಎಸ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹೀರೋ ಪ್ಲೆಷರ್ ಪ್ಲಸ್ 110 ಬೇಸ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 47,300ಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.49,300ಗಳಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

3. ಹೀರೋ ಮ್ಯಾಸ್ಟ್ರೋ ಎಡ್ಜ್ 110

ಹೀರೋ ಕಂಪನಿಯು ತನ್ನ ಸರಣಿಯ ಎಲ್ಲಾ ಸ್ಕೂಟರ್‍‍ಗಳನ್ನು ಬಿಎಸ್ 4 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಲು 2017ರಲ್ಲಿ ನವೀಕರಿಸಿತ್ತು. ಪ್ಲೆಷರ್ ಹಾಗೂ ಡ್ಯುಯೆಟ್ ಹೀರೋ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸುವುದರ ಜೊತೆಗೆ ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಸಹ ನವೀಕರಿಸಿದೆ. ಹೊಸ ಸ್ಕೂಟರ್‍‍ನಲ್ಲಿ ಅಪ್‍‍ಡೇಟ್ ಮಾಡಲಾದ 110.9 ಸಿಸಿಯ ಏರ್ ಕೂಲ್ಡ್, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಬಿಎಸ್4 ಆಧಾರಿತ ಎಂಜಿನ್ ಅಳವಡಿಸಲಾಗಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಈ ಎಂಜಿನ್ 7500 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಪವರ್ ಹಾಗೂ 5500 ಆರ್‌ಪಿಎಂನಲ್ಲಿ 8.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಸೆಟಪ್ ಹಾಗೂ ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಎರಡೂ ಕಡೆ 130 ಎಂಎಂ ಡ್ರಮ್ ಬ್ರೇಕ್‍‍ಗಳಿವೆ. ಡ್ರಮ್ ಬ್ರೇಕ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿರುವ ಹೀರೋ ಮ್ಯಾಸ್ಟ್ರೋ ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.51,530ಗಳಾದರೆ, ಡ್ರಮ್ ಬ್ರೇಕ್ ಅಲಾಯ್ ವ್ಹೀಲ್‌ ಹಾಗೂ ಡ್ಯುಯಲ್ ಟೋನ್ ಕಲರ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.52,930ಗಳಾಗಿದೆ.

MOST READ: ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

4. ಹೀರೋ ಡ್ಯುಯೆಟ್

ಹೀರೋ ಕಂಪನಿಯು 2015ರ ಕೊನೆಯ ಭಾಗದಲ್ಲಿ ಡ್ಯುಯೆಟ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಸ್ಕೂಟರ್‍‍ನಲ್ಲಿ ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿದ್ದಂತಹ 110.9 ಸಿಸಿ ಏರ್ ಕೂಲ್ಡ್, 4 - ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅಳವಡಿಸಲಾಗಿದೆ.

MOST READ: ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಈ ಎಂಜಿನ್ 7500 ಆರ್‌ಪಿಎಂನಲ್ಲಿ8 ಬಿಹೆಚ್‌ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ರೇಕಿಂಗ್‍‍ಗಳಿಗಾಗಿ ಎರಡೂ ಕಡೆ 130 ಎಂಎಂ ಡ್ರಮ್ ಬ್ರೇಕ್‌ಗಳಿವೆ. ಹೀರೋ ಡ್ಯುಯೆಟ್‍‍ನಲ್ಲಿರುವ ಸ್ಟೀಲ್ ಬಾಡಿಯ ಕಾರಣದಿಂದಾಗಿ ಮ್ಯಾಸ್ಟ್ರೋ ಎಡ್ಜ್ ಸ್ಕೂಟರಿಗಿಂತ 6 ಕೆ.ಜಿ ಅಧಿಕ ತೂಕವನ್ನು ಹೊಂದಿದೆ. ಹೀರೋ ಡ್ಯುಯೆಟ್ ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 47,680ಗಳಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

5. ಹೀರೋ ಡೆಸ್ಟಿನಿ 125

ಹೀರೋ ಮೋಟೊಕಾರ್ಪ್ 2018ರ ಆಟೋ ಎಕ್ಸ್‌ಪೋದಲ್ಲಿ ಡೆಸ್ಟಿನಿ 125 ಸ್ಕೂಟರ್ ಅನ್ನು ಅನಾವರಣಗೊಳಿಸಿತ್ತು. ಈ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸ್ಕೂಟರ್ ಅನ್ನು ಬೇಸ್ ಎಲ್ಎಕ್ಸ್ ಹಾಗೂ ಡಿಲಕ್ಸ್ ವಿಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಡೆಸ್ಟಿನಿ 125 ಸ್ಕೂಟರಿನಲ್ಲಿ 124.6 ಸಿಸಿಯ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಈ ಎಂಜಿನ್ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 10.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಬ್ರೇಕಿಂಗ್‍‍ಗಳಿಗಾಗಿ ಎರಡೂ ತುದಿಗಳಲ್ಲಿ 130 ಎಂಎಂ ಡ್ರಮ್ ಬ್ರೇಕ್‍‍ಗಳಿವೆ. ಈ ಸ್ಕೂಟರ್‍ ಐ3ಎಸ್ ಸ್ಟಾರ್ಟ್ ಸ್ಟಾಪ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ಉತ್ತಮವಾದ ಫ್ಯೂಯಲ್ ಎಫಿಶಿಯನ್ಸಿ ಪಡೆಯಲು ಸಾಧ್ಯವಾಗಲಿದೆ. ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಡೆಸ್ಟಿನಿ 125 ಸ್ಕೂಟರಿನಲ್ಲಿ ಅಂಡರ್ ಸೀಟ್ ಬೂಟ್ ಲೈಟ್, ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲರ್ ಕ್ಯಾಪ್ ಹಾಗೂ ಎಲ್ಇಡಿ ಟೇಲ್‍‍ಲೈಟ್‍‍ಗಳಿವೆ. ಹೀರೋ ಡೆಸ್ಟಿನಿ ಎಲ್‍ಎಕ್ಸ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ 55,080ಗಳಾದರೆ, ವಿ‍ಎಕ್ಸ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.57,930ಗಳಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

6. ಹೀರೋ ಮ್ಯಾಸ್ಟ್ರೋ ಎಡ್ಜ್ 125 ಎಫ್‌ಐ

ಹೀರೋ ಮೋಟೊಕಾರ್ಪ್ ಮ್ಯಾಸ್ಟ್ರೋ ಎಡ್ಜ್ 125 ಎಫ್‌ಐ ಸ್ಕೂಟರ್ ಅನ್ನು ಈ ವರ್ಷದ ಮೇ 13ರಂದು, ಪ್ಲೆಷರ್ ಪ್ಲಸ್ 110 ಸ್ಕೂಟರಿನ ಜೊತೆಗೆ ಬಿಡುಗಡೆಗೊಳಿಸಿತು. ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್, ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಅನ್ನು ಹೋಲುತ್ತದೆ. ಮ್ಯಾಸ್ಟ್ರೋ 125 ಸ್ಕೂಟರಿನಲ್ಲಿ ಮ್ಯಾಸ್ಟ್ರೋ 110 ಸ್ಕೂಟರಿಗಿಂತ ಹೆಚ್ಚು ಶಕ್ತಿಶಾಲಿಯಾದ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಇದರ ಜೊತೆಗೆ ಮ್ಯಾಸ್ಟ್ರೋ ಎಡ್ಜ್ 125 ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜೆಯನ್ನು ಹೊಂದಿದೆ. ಈ ಸ್ಕೂಟರಿನಲ್ಲಿರುವ 125 ಸಿಸಿ ಎಂಜಿನ್ 8.5 ಬಿಹೆಚ್‌ಪಿ ಪವರ್ ಹಾಗೂ 10.2 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍‍ನಲ್ಲಿ ಸಿವಿಟಿ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಸ್ಕೂಟರ್‍‍ನಲ್ಲಿನ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರ್‍‍ನಲ್ಲಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಹೀರೋ ಮೋಟೊಕಾರ್ಪ್‍‍ನ ಆರು ಸ್ಕೂಟರ್‍‍ಗಳಿವು

ಸೆಲ್ಫ್ ಸ್ಟಾರ್ಟ್, ಡ್ರಮ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‌ಗಳನ್ನು ಹೊಂದಿರುವ ಹೀರೋ ಮ್ಯಾಸ್ಟ್ರೋ ಎಡ್ಜ್ 125 ಎಫ್‍ಐ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.58,500ಗಳಾದರೆ, ಸೆಲ್ಫ್ ಸ್ಟಾರ್ಟ್ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‌ಗಳನ್ನು ಹೊಂದಿರುವ ಮಾದರಿಯ ಬೆಲೆಯು ಎಕ್ಸ್‌ಶೋರೂಂ ದರದಂತೆ ರೂ.60,000ಗಳಾಗಲಿದೆ.

Article Published On: Friday, August 16, 2019, 13:15 [IST]
English summary
Six scooters of Hero Motocorp - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+