ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ದ್ವಿಚಕ್ರ ವಾಹನಗಳಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಹೀರೋ ಮೊಟೊಕಾರ್ಪ್ ಸಂಸ್ಥೆಯು ಸುಜುಕಿ ಮೋಟಾರ್‌ಸೈಕಲ್ ಎದುರು ಭಾರೀ ಹಿನ್ನಡೆ ಅನುಭವಿಸಿದ್ದು, ಹೋಂಡಾ ಮತ್ತು ಟಿವಿಎಸ್ ನಂತರ ಸುಜುಕಿ ಸಂಸ್ಥೆಯು ಇದೇ ಮೊದಲ ಬಾರಿಗೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಗ್ರಾಮೀಣ ಭಾಗದ ಗ್ರಾಹಕಗಿಂತ ನಗರ ಪ್ರದೇಶದ ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ಸ್ಕೂಟರ್ ಮಾದರಿಗಳು ಭಾರೀ ವಹಿವಾಟಿಗೆ ಕಾರಣವಾಗಿದ್ದು, ಮೊದಲ ಸ್ಥಾನದಲ್ಲಿದ್ದ ಹೋಂಡಾ ಮತ್ತು ಎರಡನೇ ಸ್ಥಾನದಲ್ಲಿರುವ ಟಿವಿಎಸ್ ನಂತರ ಇದೀಗ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಹೀರೋ ಸಂಸ್ಥೆಯನ್ನು ಹಿಂದಿಕ್ಕಿ ಸುಜುಕಿ ಸಂಸ್ಥೆಯು ಮೂರನೇ ಸ್ಥಾನಕ್ಕೇರಿದೆ. 2019-20ರ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಶೇ.17.16ರಷ್ಟು ಮುನ್ನಡೆ ಕಾಯ್ದುಕೊಂಡಿರುವ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಸ್ಕೂಟರ್ ಪ್ರಿಯರ ನೆಚ್ಚಿನ ಮಾದರಿಯಾಗಿ ಹೊರಹೊಮ್ಮಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

2019-20ರ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಹೀರೋ ಮೊಟೊಕಾರ್ಪ್ ಸಂಸ್ಥೆಯು ಶೇ.34ರಷ್ಟು ಕುಸಿತ ಕಂಡಿದ್ದು, ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 2,49,365 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಸುಜುಕಿ ಸಂಸ್ಥೆಯು 2019 ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 3,41,928 ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ 2018ರ ಅವಧಿಯ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ಮಾರಾಟವಾಗಿದ್ದ 2,91,847 ದಾಖಲೆಯನ್ನು ಸರಿಗಟ್ಟಿ ಶೇ.17.16ರಷ್ಟು ಮುನ್ನಡೆ ಕಾಯ್ದುಕೊಂಡಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಹೀರೋ ಸಂಸ್ಥೆಯು ಕಳೆದ ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ಮಾರಾಟವಾಗಿದ್ದ 3,91,019 ಸ್ಕೂಟರ್‌ಗಳ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗದೇ ಈ ಬಾರಿ ಹಿನ್ನಡೆ ಅನುಭವಿಸಿದ್ದು, ಒಟ್ಟು 2,49,365 ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕನೇ ಮೂರನೇ ಸ್ಥಾನದಿಂದ ಕುಸಿತ ಕಂಡಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಸದ್ಯ ಹೋಂಡಾ ಸಂಸ್ಥೆಯು 2019ರ ಮೊದಲಾರ್ಧ ವರ್ಷದಲ್ಲಿ 17,32,759 ಸ್ಕೂಟರ್‌ಗಳನ್ನು ಮಾರಾಟ ಮೂಲಕ ಶೇ.40ರಷ್ಟು ಸ್ಕೂಟರ್ ಮಾರಾಟದ ಪಾಲನ್ನು ತನ್ನದಾಗಿಸಿಕೊಂಡಿದ್ದು, ನಂತರದ ಸ್ಥಾನದಲ್ಲಿರುವ ಟಿವಿಎಸ್ ಮತ್ತು ಇದೀಗ ಮೂರನೇ ಸ್ಥಾನಕ್ಕೇರಿರುವ ಸುಜುಕಿ ಸಂಸ್ಥೆಗಳ ಸ್ಕೂಟರ್ ಮಾರಾಟ ಪೈಪೋಟಿಯಲ್ಲಿ ಹಿಂದೆಬಿದ್ದಿರುವ ಹೀರೋ ಮೊಟೊಕಾರ್ಪ್ ಸಂಸ್ಥೆಯು ಭಾರೀ ಹಿನ್ನಡೆಯೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳು ಸುಜುಕಿ ಸಂಸ್ಥೆಯ ಸ್ಕೂಟರ್ ಮಾರಾಟದಲ್ಲಿ ಶೇ.80 ಪಾಲನ್ನು ಹೊಂದಿದ್ದು, 2007ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಆಕ್ಸೆಸ್ 125 ಸ್ಕೂಟರ್ ಮಾದರಿಯು ಕಳೆದ 12 ವರ್ಷಗಳಿಂದ ಸತತ ಬೇಡಿಕೆಯಲ್ಲಿರುವ ಪ್ರಮುಖ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಹಾಗೆಯೇ ಕಳೆದ ವರ್ಷ ಬಿಡುಗಡೆ ಮಾಡಲಾದ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಸಹ ಪ್ರೀಮಿಯಂ ಸ್ಕೂಟರ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಟಾಪ್ 7 ಸ್ಕೂಟರ್ ಮಾರಾಟ ಸಂಸ್ಥೆಗಳ ಪಟ್ಟಿಯಲ್ಲಿ ಸುಜುಕಿ ಮಾತ್ರವೇ ಅಧಿಕ ಬೆಳವಣಿಗೆ ಕಂಡ ಆಟೋ ಉತ್ಪಾದನಾ ಸಂಸ್ಥೆಯಾಗಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ಸಹ 2019ರ ಮೊದಲಾರ್ಧ ವರ್ಷದಲ್ಲಿ 17,32,759 ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದರೂ ಸಹ ಕಳೆದ 2018ರ ಅವಧಿಗೆ ಹೋಲಿಕೆ ಮಾಡಿದ್ದಲ್ಲಿ ಶೇ.20ರಷ್ಟು ಕುಸಿತ ಕಂಡಲ್ಲಿ, ಟಿವಿಎಸ್ ಮೋಟಾರ್ ಸಂಸ್ಥೆಯು ಶೇ.7.19ರಷ್ಟು, ಹೀರೋ ಸಂಸ್ಥೆಯು ಶೇ.36.23ರಷ್ಟು, ಯಮಹಾ ಶೇ.20.62ರಷ್ಟು ಕುಸಿತ ಕಂಡಿವೆ.

MOST READ: ಹೋಂಡಾ ಮೋಟಾರ್‍‍ಸೈಕಲ್ ನೀಡುತ್ತಿದೆ ಭರ್ಜರಿ ಆಫರ್

ಸ್ಕೂಟರ್ ಮಾರಾಟದಲ್ಲಿ ಹೀರೋ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಸುಜುಕಿ

ಆದರೆ ಸ್ಕೂಟರ್ ಮಾರಾಟದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆ ಮಾತ್ರವೇ ಶೇ.17ರಷ್ಟು ಸ್ಕೂಟರ್ ಮಾರಾಟದಲ್ಲಿ ಬೆಳವಣಿಗೆ ಕಾಣುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಆಕ್ಸೆಸ್ 125 ಸ್ಕೂಟರ್ ಮಾರಾಟದಲ್ಲಿ ಮತ್ತಷ್ಟು ಬದಲಾವಣೆಯ ನೀರಿಕ್ಷೆಗಳೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

Most Read Articles

Kannada
English summary
Suzuki Access 125 & Burgman 125 Sales Help Overtake Hero MotoCorp. Read in Kannada.
Story first published: Monday, October 14, 2019, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X