Just In
- 17 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಹೋಂಡಾ ಮೋಟಾರ್‍ಸೈಕಲ್ ನೀಡುತ್ತಿದೆ ಭರ್ಜರಿ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ ಲಿಮಿಟೆಡ್ ಹೊಸ ಗ್ರಾಹಕರಿಗಾಗಿ ಕಂಪ್ಲಿಮೆಂಟ್ರಿ ಲಾಯಲ್ಟಿ ಕ್ಲಬ್ ಸದಸ್ಯತ್ವ ಘೋಷಿಸಿದೆ. ಹೋಂಡಾ ಜಾಯ್ ಕ್ಲಬ್ ಎಂಬ ಲಾಯಲ್ಟಿ ಕಾರ್ಯಕ್ರಮವನ್ನು 2018ರಲ್ಲಿ ಪ್ರಾರಂಭಿಸಲಾಗಿತ್ತು. ಆ ಸಂದರ್ಭದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದಾಗಿ ಕಂಪನಿ ಹೇಳಿದೆ.

ಯಾದ್ವಿಂದರ್ ಸಿಂಗ್ ಗುಲೇರಿಯಾ ಅವರು ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆ ಪಡೆಯುವುದಕ್ಕೆ ಕಂಪನಿಯು ಹೆಮ್ಮೆ ಮತ್ತು ಸಂತಸ ಪಡುತ್ತದೆ ಎಂದು ಹೇಳಿದರು. ಹೋಂಡಾ ಜಾಯ್ ಕ್ಲಬ್ ಲಾಯಲ್ಟಿ ಕಾರ್ಯಕ್ರಮದೊಂದಿಗೆ 5 ಲಕ್ಷ ಸದಸ್ಯರನ್ನು ಪಡೆದಿದೆ.

ಹೋಂಡಾ ಜಾಯ್ ಕ್ಲಬ್ ಅನೇಕ ರಿಟೈಲ್ ಮತ್ತು ಇ-ಕಾಮರ್ಸ್ ಪ್ಲಾಟ್‍ಫಾರ್ಮ್‍ಗಳಲ್ಲಿ ರಿಯಾಯಿತಿಗಳನ್ನು ನೀಡುತ್ತದೆ. ಇದು ವಾಹನ ಸೇವೆಗಳು, ಬಿಡಿಭಾಗಗಳು, ಪರಿಕರಗಳ ಮೇಲೆ ಆಫರ್‍ಗಳನ್ನು ನೀಡುತ್ತದೆ ಮತ್ತು ವಾಹನ ವಾಷ್ ಮಾಡುವುದು, ಪಿಕ್ ಮತ್ತು ಡ್ರಾಪ್ ನೀಡುವ ಸೇವೆಗಳನ್ನು ನೀಡುತ್ತದೆ.

ಸದಸ್ಯತ್ವ ಪಡೆದವರು ರೂ.2,100 ದವರೆಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತು 72 ಗಂಟೆಗಳ ಒಳಗೆ ಅಥವಾ ನೋಂದಣಿಯಲ್ಲಿ ರೂ.349 ಹೋಂಡಾ ಕರೆನ್ಸಿಯಾಗಿ ಪಡೆಯಬಹುದು. ಏರ್ ಟೆಲ್ ಪಾವತಿ ಬ್ಯಾಂಕುಗಳು ಮತ್ತು ಮೊಬಿವಿಕಿ ಮೂಲಕ ರೂ.200, ದೇಶೀಯ ವಿಮಾನ ಟೆಕೆಟ್‍ಗಳಿಗಾಗಿ ಕ್ಯಾಶ್ ಬ್ಯಾಕ್ ಸೌಲಭ್ಯಗಳು ಲಭಿಸುತ್ತವೆ.

ಇದರೊಂದಿಗೆ ಹೋಂಡಾ ಕಂಪನಿಯು ಜಾಯ್ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ, ವೈಯಕ್ತಿಕ ಅಪಘಾತಗಳಿಗೆ ರೂ.1 ಲಕ್ಷ ಮರಣ ವಿಮೆ, ಮೂರು ವರ್ಷದ ಸ್ಮಾರ್ಟ್ ಹೆಲ್ತೆಕೇರ್ ಸದಸ್ಯತ್ವ ಮತ್ತು ರೂ.500 ಹೆಚ್‍ಡಿ ಮತ್ತು ಎಸ್‍ಡಿ ಸೆಟ್ ಬಾಕ್ಸ್ ನೀಡಲಾಗುತ್ತದೆ.

ಹೋಂಡಾ ಜಾಯ್ ಸದ್ಯರಿಗೆ ಲೈಫ್‍ಸ್ಟೈಲ್ ಬ್ರ್ಯಾಂಡ್‍ಗಳಾದ ಬುಕ್‌ಮೈಶೋ, ಸೆಂಟ್ರಲ್, ಲೈಫ್‌ಸ್ಟೈಲ್, ಸ್ವಿಗ್ಗಿ, ಫ್ಲಿಪ್‌ಕಾರ್ಟ್, ಲೆವಿಸ್, ಫಾಸ್ಟ್‌ಟ್ರಾಕ್, ಟೈಟಾನ್, ಬಾಟಾ, ಓಯೋ ಮತ್ತು ವೆಸ್ಟ್ ಸೈಡ್‌ಗಳಲ್ಲಿ ಶೇ.15 ರಷ್ಟು ವಿಶೇಷ ರಿಯಾಯಿತಿ ಲಭಿಸುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೋಂಡಾ ಕರೆನ್ಸಿ , ಹೋಂಡಾದ ಅಧಿಕೃತ ನೆಟ್‌ವರ್ಕ್‌ನಲ್ಲಿ ವಹಿವಾಟು ನಡೆಸುವಾಗ ಗಳಿಸಿದ ಅಂಕಗಳಿಗೆ ಬದಲಾಗಿ ವರ್ಚುವಲ್ ಕರೆನ್ಸಿಯು ಕ್ರೆಡಿಟ್ ಆಗುತ್ತದೆ. ಈ ಕರೆನ್ಸಿಯನ್ನು ವರ್ಗಾಯಿಸಲಾಗುವುದಿಲ್ಲ, ಹಣಕ್ಕಾಗಿ ವಿನಿಮಯ ಮಾಡಲು ಆಗುವುದಿಲ್ಲ ಆದರೆ ಹೋಂಡಾದ ದ್ವಿಚಕ್ರ ವಾಹನ ಅಧಿಕೃತ ನೆಟ್‌ವರ್ಕ್‌ನಲ್ಲಿ ಅದನ್ನು ಪುನಃ ಪಡೆದುಕೊಳ್ಳಬಹುದಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೋಂಡಾ ಜಾಯ್ ಕ್ಲಬ್‍ನಲ್ಲಿ ಸದಸ್ಯರಿಗೆ ಹಲವು ಸೇವೆಗಳು ಮತ್ತು ಭರ್ಜರಿ ಆಫರ್ ಅನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಡೆಲಿವರಿಗಾಗಿ ಸ್ವಿಗ್ಗಿ ಮತ್ತು ಫ್ಲಿಪ್‌ಕಾರ್ಟ್ ಬಳಸುತ್ತಾರೆ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು ಬುಕ್‌ಮೈಶೋ ಅನ್ನು ಬಳಸುತ್ತಾರೆ. ಇದಕ್ಕಾಗಿ ಶೇ.15 ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು.