ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಸುಜುಕಿ ಮೋಟಾರ್‍‍‍ಸೈಕಲ್ ಇಂಡಿಯಾ ಅಕ್ಸಿಸ್ 125 ಸ್ಕೂಟರ್ ಅನ್ನು ಈ ಹಿಂದೆಯೆ ಬಿಡುಗಡೆಗೊಳಿಸಿ, ಸ್ಕೂಟರ್ ಮಾರಾಟದ ವಿಭಾಗದಲ್ಲೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ವಿಷಯ ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಂಸ್ಥೆಯು ತಮ್ಮ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍‍ಗಳಲ್ಲಿನ ಡ್ರಂ ಬ್ರೇಕ್ ಆವೃತ್ತಿಗಳಿಗೆ ಇನ್ನಷ್ಟು ಸುರಕ್ಷತೆ ವೈಶಿಷ್ಟ್ಯತೆಯನ್ನು ನೀಡುವ ಅನುಸಾರ ಹೊಸ ಟೆಕ್ನಾಲಜಿಯನ್ನು ಅಳವಡಿಸಿ ಬಿಡುಗಡೆಗೊಳಿಸಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಹೌದು, ಸುಜುಕಿ ಸಂಸ್ಥೆಯು ತಮ್ಮ ಆಕ್ಸಿಸ್ 125 ಡ್ರಂ ಬ್ರೇಕ್ ಮಾದರಿಯ ಸ್ಕೂಟರ್‍‍ಗಳಿಗೆ ಈ ಬಾರಿ ಚಾಲಕರ ಸುರಕ್ಷತೆಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲಾಗಿದ್ದು, ಎಪ್ರಿಲ್ 1, 2019ರ ನಂತರ ಜಾರಿಯಾಗಲಿರುವ ಹೊಸ ನಿಯಮಗಳ ಪ್ರಕಾರಾ ಸ್ಕೂಟರ್‍‍ಗಳಿಗೆ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದ ಆಕ್ಸಿಸ್ 125 ಸ್ಕೂಟರ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 56,667 ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಸಿಬಿಎಸ್ ಅನ್ನು ಹೊರತುಪಡಿಸಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ನಲ್ಲಿ ಬೇರಾವುದೇ ಬದಲಾವಣೆಗಳನ್ನು ಕಾಣಲಾಗದಾಗಿದ್ದು, ಸಿಬಿಎಸ್ ರಹಿತ ಆಕ್ಸಿಸ್ 125 ಸ್ಕೂಟರ್‍‍ಗಳು ಎಕ್ಸ್ ಶೋರಂ ಪ್ರಕಾರ ರೂ. 55,977 ಬೆಲೆಯನ್ನು ಪಡೆದುಕೊಂಡಿದೆ. ಹಾಗೆಯೆ ನಾನ್ ಸಿಬಿಎಸ್ ಮಾದರಿಗಳು ಕೇವಲ 2019ರ ಮಾರ್ಚ್ ಅಂತ್ಯದ ವರೆಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಸುಜುಕಿ ಆಕ್ಸಿಸ್ 125 ಸ್ಕೂಟರ್‍ 125ಸಿಸಿ ಸ್ಕೂಟರ್‍ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಆಕರ್ಷಕವಾದ ವಿನ್ಯಾಸದೊಂದಿಗೆ ಒಟ್ಟು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇಷ್ಟೆ ಅಲ್ಲದೆ ಈ ಸ್ಕೂಟರ್ ಸುಮಾರು 101 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಆಕ್ಸಿಸ್ 125 ಸ್ಕೂಟರ್‍‍ನಲ್ಲಿ ಅಲಾಯ್ ವ್ಹೀಲ್ಸ್, ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಒನ್-ಪುಷ್ ಸೆಂಟರ್ಲ್ ಲಾಕಿಂಗ್ ಸಿಸ್ಟಂ, ಫ್ರಂಟ್ ಪಾಕೆಟ್ ಮತ್ತು ಚಾರ್ಜಿಂಗ್ ಸಾಕೆಟ್ ಎಂಬ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳು 5.6 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದ್ದು, ಇನ್ನು ಪ್ರತೀ ಲೀಟರ್ ಪೆಟ್ರೋಲ್‍ಗೆ ಸುಮಾರು 60 ಕಿಲೋಮೀಟರ್‍‍‍ನ ಮೈಲೇಜ್ ಅನ್ನು ನೀಡುತ್ತದೆ. ಆದುದರಿಂದ ಇದನ್ನು ಮಧ್ಯಮವರ್ಗದ ಜನರು ಮತ್ತು ವ್ಯಾಪಾರ ಮಾಡುವವರು ಇದನ್ನು ಹೆಚ್ಚು ಖರೀದಿಸುತ್ತಾರೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಎಂಜಿನ್ ಸಾಮರ್ಥ್ಯ

2019ರ ಹೊಸ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍‍ಗಳು 125ಸಿಸಿ ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.4 ಬಿಹೆಚ್‍ಪಿ ಮತ್ತು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಇದೇ ಎಂಜಿನ್ ಅನ್ನು ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿದ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍‍ನಲ್ಲಿಯು ಕಾಣಬಹುದಾಗಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳು ಸುಜುಕಿ ಸಂಸ್ಥೆಯ ಮಾರಾಟದ ಮಟ್ಟವನ್ನು ಅಧಿಕವಾಗಿಸಿದ್ದು, ಪ್ರತೀ ತಿಂಗಳಿಗೆ ಸುಮಾರು 40,000 ಯೂನಿಟ್‍ನಷ್ಟು ಮಾರಾಟವಾಗುತ್ತಿದೆ ಎಂದರೆ ನಂಬಲೇಬೇಕು. 2018ರ ಡಿಸೆಂಬರ್ ತಿಂಗಳಿನಲ್ಲಿ ಸುಮಾರು 39,163 ಯೂನಿಟ್ ಅನ್ನು ಮಾರಾಟ ಮಾಡಿದೆ.

ಹೊಸ ಅಪ್ಡೆಟ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಕೂಟರ್

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಸುಜುಕಿ ಆಕ್ಸಿಸ್ 125 ಸಿಂಪಲ್ ಡಿಸೈನ್ ಅನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳು ಮಾರರುಕಟ್ಟೆಯಲ್ಲಿರುವ ಹೋಂಡಾ ಆಕ್ಟೀವಾ 125, ಹೀರೋ ಡೆಸ್ಟಿನಿ 125 ಮತ್ತು ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತಿವೆ.

More from DriveSpark

Article Published On: Tuesday, March 26, 2019, 9:26 [IST]
English summary
Suzuki Access 125 Drum Brake variant gets Combined Braking System. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+