ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಸುಜುಕಿ ಮೋಟಾರ್‍‍ಸೈಕಲ್ ಮೇ 20ರಂದು ಹೊಸ ಜಿಕ್ಸರ್ ಎಸ್‍ಎಫ್ 250 ಬೈಕ್ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ಬೈಕಿನ ಪರೀಕ್ಷೆ ನಡೆಸುತ್ತಿದೆ. ಟೀಸರ್‍‍ನ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಈ ವೀಡಿಯೋದಲ್ಲಿ ಬೈಕ್ ಕಾಣದೇ ಇದ್ದರೂ, ಬೈಕ್ ಮಾಡುತ್ತಿರುವ ಶಬ್ದದ ಬಗ್ಗೆ ಕೇಳಬಹುದು. ಇದರಿಂದಾಗಿ ಹೊಸ ಕ್ವಾರ್ಟರ್ ಲೀಟರ್ ಎಂಜಿನ್ ಹೇಗೆ ಶಬ್ದ ಮಾಡಲಿದೆ ಎಂಬುದು ತಿಳಿಯಲಿದೆ. ಈ ಶಬ್ದವನ್ನು ಕೇಳಿದರೆ ಹೊಸ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ ಸಿಂಗಲ್ ಸಿಲಿಂಡರ್ ಎಂಜಿನ್ ಇದೆಯೆಂದು ನಂಬಲು ಕಷ್ಟವಾಗುತ್ತದೆ. ಈ ಮೊದಲು ಸೋರಿಕೆಯಾದ ದಾಖಲೆಗಳ ಪ್ರಕಾರ ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕ್, 249.ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ ಎಂಜಿನ್ ಹೊಂದಿದೆ.

ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಈ ಎಂಜಿನ್ 26.1 ಬಿಹೆಚ್‍‍ಪಿ ಪವರ್ ಅನ್ನು 9,000 ಆರ್‍‍ಪಿ‍ಎಂ ನಲ್ಲಿ ಮತ್ತು 22.6 ಎನ್‍ಎಂ ಟಾರ್ಕ್ ಅನ್ನು 7,500 ಆರ್‍‍ಪಿ‍ಎಂ ನಲ್ಲಿ ಉತ್ಪಾದಿಸಲಿದೆ. ಈ ಎಂಜಿನ್‍‍ನಲ್ಲಿ ಎಸ್‍ಒ‍‍ಹೆಚ್‍‍ಸಿ ಮತ್ತು 4 ವಾಲ್ವ್ ಗಳಿದ್ದು, 6 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್ ಸಿಸ್ಟಂ ಗಳನ್ನು ಅಳವಡಿಸಲಾಗಿದೆ. ಸಸ್ಪೆಂಷನ್ ಕಾರ್ಯಗಳನ್ನು ಮುಂಭಾಗದಲ್ಲಿರುವ ಟೆಲಿಸ್ಕೋಪಿಕ್, ಕಾಯಿಲ್ ಸ್ಪ್ರಿಂಗ್ ಮತ್ತು ಆಯಿಲ್ ಡ್ಯಾಂಪ್ಡ್ ಸಿಸ್ಟಂಗಳು ನಿಭಾಯಿಸಿದರೆ, ಹಿಂಭಾಗದಲ್ಲಿ ಸ್ವಿಂಗ್ ಆರ್ಮ್ ಟೈಪಿನ ಮೊನೊಶಾಕ್‍‍ಗಳು ನಿಭಾಯಿಸುತ್ತವೆ.

ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಈ ಮೋಟಾರ್ ಸೈಕಲ್‍‍ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್/ಡ್ಯೂಯಲ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಕ್ಯಾಲಿಪರ್‍‍ಗಳಿವೆ. ಎಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಹೊಸ ಸುಜುಕಿ ಜಿಕ್ಸರ್ 250 ಬೈಕಿನಲ್ಲರುವ ಹೆಡ್ ಲೈಟ್ ಅಸೆಂಬ್ಲಿಯನ್ನು ಜಿ‍ಎಸ್‍ಎಕ್ಸ್ - ಆರ್ 1000 ಬೈಕಿನಿಂದ ಪಡೆಯಲಾಗಿದೆ. ಈ ಬೈಕಿನಲ್ಲಿ ಡಬಲ್ ಬ್ಯಾರೆಲ್ ಎಕ್ಸ್ ಹಾಸ್ಟ್ ಪೈಪ್‍‍ಗಳು ಮತ್ತು ಸ್ಪ್ಲಿಟ್ ಸೀಟುಗಳಿವೆ. ಈ ಬೈಕಿನ ವಿನ್ಯಾಸವು ಅದೇ ರೀತಿಯಲ್ಲಿದ್ದರೂ, ಹೊಸ ಮಾಡೆಲ್ ಶಾರ್ಪ್ ಮತ್ತು ಕ್ಲಿನ್ ಆಗಿದೆ.

ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕ್ - ಗ್ರೇ, ಬ್ಲೂ ಮತ್ತು ಸಿಲ್ವರ್ - ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತದೆ. ನಾವು ಈ ಬೈಕಿನ ಬಿಡುಗಡೆಯ ಸಂಪೂರ್ಣ ಚಿತ್ರಣದ ಜೊತೆಗೆ, ಬೈಕಿನ ರೈಡ್, ಬೆಲೆ, ಹ್ಯಾಂಡ್ಲಿಂಗ್ ಗುಣಮಟ್ಟದ ವಿಷಯಗಳನ್ನು ನಿಮಗೆ ತಲುಪಿಸುತ್ತೇವೆ.

MOST READ: ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಹೊಸ ಜಿಕ್ಸರ್ 250 ಬೈಕಿನ ಟೀಸರ್ ಬಿಡುಗಡೆ ಮಾಡಿದ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೈಕ್ ಅನ್ನು ಮೊದಲ ಬಾರಿಗೆ ಚಲಾಯಿಸುತ್ತಿರುವವರಿಗೆ ಎಂಜಿನ್ ಮತ್ತು ಎಕ್ಸಾಸ್ಟ್ ನ ಶಬ್ದವು ರೋಚಕ ಅನುಭವನ್ನು ನೀಡುತ್ತದೆ. ಈ ಬೈಕ್ ಉಂಟು ಮಾಡುವ ಶಬ್ದವನ್ನು ಕೇಳಿದರೆ, ಸಿಂಗಲ್ ಸಿಲಿಂಡರ್ ಎಂಜಿನ್‍ ಹೊಂದಿದೆ ಎನಿಸುವುದಿಲ್ಲ. ಎಕ್ಸಾಸ್ಟ್ ಶಬ್ದವನ್ನು ಕೇಳಿದ ನಂತರ ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ.

Article Published On: Saturday, May 18, 2019, 10:13 [IST]
English summary
Suzuki Drops Teaser Of The New Gixxer SF 250 — Oh The Sound! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+