ನಮ್ಮ ಬೆಂಗಳೂರಿನಲ್ಲೂ ಬಿಡುಗಡೆಯಾದ ಸುಜುಕಿ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250
ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಭಾರತದಲ್ಲಿನ ತನ್ನ ಬೈಕ್ ಸರಣಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಎಂಟ್ರಿ ಲೆವಲ್ ಸೆಗ್ಮೆಂಟ್‌ನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷವೇ ಜಿಕ್ಸರ್ 150 ಸರಣಿಯನ್ನು ಪರಿಚಯಿಸಿದ್ದ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಮಾದರಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಬೈಕ್‌ಗಳ ಭರ್ಜರಿ ಪ್ರದರ್ಶನದೊಂದಿಗೆ ಮಾರಾಟಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಯ್ತು. ಹೊಸ ಬೈಕ್‌ಗಳು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ಜಿಕ್ಸರ್ ಎಸ್ಎಫ್ ಮಾದರಿಯು ರೂ. 1,09,870 ಮತ್ತು ಜಿಕ್ಸರ್ ಎಸ್ಎಫ್ 250 ಮಾದರಿಯು ರೂ. 1,70,655 ಬೆಲೆ ಪಡೆದುಕೊಂಡಿವೆ.

ಕಡಿಮೆ ಎಂಜಿನ್ ಸಾಮರ್ಥ್ಯದಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳಾಗಿರುವ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್‌ಗಳು, ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಸ್ಪೋರ್ಟಿ ಡಿಸೈನ್ ಹೊಂದಿರುವ ಉತ್ಸಾಹಿ ಬೈಕ್ ಸವಾರರ ಗಮನಸೆಳೆಯಲಿವೆ.

ಹೊಸ ಬೈಕ್‍ಗಳ ವಿನ್ಯಾಸ
ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್ ಈ ಬಾರಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೊಸದಾಗಿ ಸ್ಪ್ಲಿಟ್ ಸೀಟ್ ಮತ್ತು ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಜಿಕ್ಸರ್ ಎಸ್ಎಫ್ 250 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೇ ಬಾಡಿ ಕಲರ್ ಗ್ರಾಫಿಕ್ಸ್, ಎಲ್ಇಡಿ ಹೆಡ್‍ಲ್ಯಾಂಪ್ಸ್ ಹಾಗೂ ಟೈಲ್ ಲೈಟ್ಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
2019ರ ಹೊಸ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್ ಮಾದರಿಯು 154.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 14.1-ಬಿಹೆಚ್‍ಪಿ ಮತ್ತು 14-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಹೊಸ ಎಂಜಿನ್ ಮಾದರಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಸುಜುಕಿ ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯು 249ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 26.5-ಬಿಹೆಚ್‍ಪಿ ಮತ್ತು 22.6-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿ ಹೊಂದಿದ್ದು, ಹೊಸ ಬೈಕ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ಬೈಕ್ ಮೈಲೇಜ್
ಸುಜುಕಿ ಜಿಕ್ಸರ್ ಎಸ್ಎಫ್ 250 ಬೈಕ್‍ಗಳು 12-ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತೀ ಲೀಟರ್‍ಗೆ 38.5 ಕಿಲೋ ಮೀಟರ್ ಮೈಲೇಜ್ ನೀಡಿದ್ದಲ್ಲಿ, ಜಿಕ್ಸರ್ ಎಸ್ಎಫ್ 150 ಬೈಕ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‍ಗೆ ಸುಮಾರು 45 ಕಿಲೋ ಮೀಟರ್ ಮೈಲೇಜ್ ಹಿಂದಿರುಗಿಸಬಲ್ಲವು.

ಇದಲ್ಲದೆ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾಕ್ ಅಬ್ಸಾರ್ಬರ್ ಅನ್ನು ಹೊಂದಿದ್ದು, ಜಿಕ್ಸರ್ ಎಸ್ಎಫ್ 250 ಬೈಕ್ ಮುಂಭಾಗದಲ್ಲಿ ಕೂಡಾ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಮೊನೋಶಾಕ್ ಅಬ್ಸಾರ್ಬರ್ ಅನ್ನು ಜೋಡಿಸಲಾಗಿದೆ.
MOST READ: ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಜೊತೆಗೆ ಹೊಸ ಸುರಕ್ಷಾ ನಿಯಮ ಅನುಸಾರವಾಗಿ ಜಿಕ್ಸರ್ ಎಸ್ಎಫ್ 250 ಮತ್ತು ಜಿಕ್ಸರ್ ಎಸ್ಎಫ್ 150 ಬೈಕ್‍ಗಳಲ್ಲಿ ಎರಡೂ ಬದಿಗಳಲ್ಲೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರಲ್ಲಿ ಜಿಕ್ಸರ್ ಎಸ್ಎಫ್ 150 ಮಾದರಿಯು ಸಿಂಗಲ್ ಚಾನಲ್ ಎಬಿಎಸ್ ಹೊಂದಿದ್ದಲ್ಲಿ ಜಿಕ್ಸರ್ ಎಸ್ಎಫ್ 250 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಾಗಿದೆ.

ಈ ಮೂಲಕ ಜಿಕ್ಸರ್ ಎಸ್ಎಫ್ 150 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಹೀರೋ ಎಕ್ಸ್‌ಟ್ರಿಮ್ 200ಎಸ್ ಮಾದರಿಗೆ ಪೈಪೋಟಿ ನೀಡಿಲಿದ್ದರೆ ಜಿಕ್ಸರ್ ಎಸ್ಎಫ್ 250 ಮಾದರಿಯು ಯಮಹಾ ಫೆಜರ್ 25, ಹೋಂಡಾ ಸಿಬಿಆರ್ 250ಆರ್, ಕೆಟಿಎಂ ಆರ್‌ಸಿ200 ಮತ್ತು ಬಜಾಜ್ ಪಲ್ಸರ್ ಆರ್‌ಎಸ್ 200 ಬೈಕ್‌ಗಳಿಗೆ ಪೈಪೋಟಿ ನೀಡಲಿವೆ.
MOST READ: ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ..!

ಹೊಸ ಬೈಕ್‌ಗಳ ಕುರಿತಂತೆ ಮಾತನಾಡಿದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾದ ದಕ್ಷಿಣ ವಿಭಾಗದ ಮುಖ್ಯಸ್ಥರಾದ ಕೋಯ್ಚಿರೋ ಹಿರಾವೊ ಮತ್ತು ಎಸ್‌ಎಂಐಪಿಎಲ್ ಉಪಾಧ್ಯಕ್ಷರಾದ ದೇವಶೀಶ್ ಅವರು, ಹೊಸ ಜಿಕ್ಸರ್ ಸರಣಿ ಮೂಲಕ ಮಾರುಕಟ್ಟೆಯಲ್ಲಿ ಸುಜುಕಿ ಪೋರ್ಟ್‌ಪೊಲಿಯೋ ಹೆಚ್ಚಿಸುವುದಲ್ಲದೇ ಎಂಟ್ರಿ ಲೆವೆಲ್ ಪರ್ಫಾಮೆನ್ಸ್ ಪ್ರಿಯರ ಸೆಳೆಯುವಲ್ಲಿ ವಿನೂತನ ತಂತ್ರಜ್ಞಾನ ಪ್ರೇರಿತ ಜಿಕ್ಸರ್ ಎಸ್ಎಫ್ ಆವೃತ್ತಿಗಳು ಹೊಸ ಸಂಚಲನಕ್ಕೆ ಕಾರಣವಾಗಲಿವೆ ಎಂದಿದ್ದಾರೆ.


Click it and Unblock the Notifications