ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ನಂ.1 ಸ್ಕೂಟರ್ ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಹೋಂಡಾ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಲಿಮಿಟೆಡ್ ಎಡಿಷನ್ ಮಾದರಿಗಳು ಗ್ರಾಹಕರ ಆಕರ್ಷಣೆ ಕಾರಣವಾಗಿವೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೋಂಡಾ ಸಂಸ್ಥೆಯ ಜನಪ್ರಿಯ ಆಕ್ಟಿವಾ 5ಜಿ ಮಾದರಿಗಳಿಗೆ ಭಾರೀ ಬೇಡಿಕೆಯಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 2.50 ಲಕ್ಷ ಯುನಿಟ್‌ಗಳು ಮಾರಾಟವಾಗುತ್ತಿವೆ. ಹೀಗಿರುವಾಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹೋಂಡಾ ಸಂಸ್ಥೆಯು ಸೀಮಿತ ಅವಧಿಗಾಗಿ ಆಕ್ಟಿವಾ 5ಜಿ ಮತ್ತು 125 ಸಿಸಿ ಬೈಕ್‌ಗಳಲ್ಲಿ ನಂ.1 ಸ್ಥಾನದಲ್ಲಿರುವ ಸಿಬಿ ಶೈನ್ ಮಾದರಿಗಳಲ್ಲಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಆಕ್ಟಿವಾ 5ಜಿ ಸ್ಪೆಷಲ್ ಎಡಿಷನ್ ಮಾದರಿಯು ಈಗಾಗಲೇ ದೇಶದ ಪ್ರಮುಖ ಹೋಂಡಾ ದ್ವಿಚಕ್ರ ವಾಹನ ಡೀಲರ್ಸ್‌ಗಳನ್ನು ತಲುಪಿದ್ದು, ಗ್ರಾಹಕರ ಬೇಡಿಕೆಯೆಂತೆ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ವಿಶೇಷ ಬಣ್ಣಗಳ ಆಯ್ಕೆಯಲ್ಲಿ ನೀಡಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಸ್ಪೆಷಲ್ ಎಡಿಷನ್ ಮಾದರಿಯು ಡ್ಯಯಲ್ ಕಲರ್ ಆಯ್ಕೆಯನ್ನು ಹೊರತುಪಡಿಸಿ ಈ ಹಿಂದಿನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸಿಲ್ಪರ್/ಬ್ಲ್ಯಾಕ್ ಮತ್ತು ಪರ್ಲ್ ವೈಟ್/ಗೋಲ್ಡ್ ಬಣ್ಣಗಳಲ್ಲಿ ಸ್ಪೆಷಲ್ ಎಡಿಷನ್ ಮಿಂಚಲಿವೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಹಾಗೆಯೇ ಸಿಬಿ ಶೈನ್ ಮಾದರಿಯು ಸಹ ಲಿಮಿಟೆಡ್ ಎಡಿಷನ್‌ಗೆ ತಕ್ಕಂತೆ ಹೊಸ ವಿನ್ಯಾಸದ ಗ್ರಾಫಿಕ್ಸ್ ಡಿಸೈನ್ ಪಡೆದುಕೊಂಡಿದ್ದು, ಬ್ಲ್ಯಾಕ್ ಜೊತೆ ಇಂಪೀರಿಯರ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ಜೊತೆ ಸ್ಪೆರ್ ಜೊತೆ ಸಿಲ್ವರ್ ಮೆಟಾಲಿಕ್ ಬಣ್ಣದ ಆಯ್ಕೆಗಳಲ್ಲಿ ಸಿಬಿ ಶೈನ್ ಲಭ್ಯವಿರಲಿದೆ. ಜೊತೆಗೆ ಸ್ಕೂಟರ್ ಮತ್ತು ಬೈಕ್ ಟ್ಯಾಂಕ್ ಬದಿಯಲ್ಲಿ ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಹಾಕಲಾಗಿದ್ದು, ಕಪ್ಪು ಬಣ್ಣದ ವೀಲ್ಹ್‌ಗಳನ್ನು ಹೊಸ ಸ್ಕೂಟರ್‌ಗಳಲ್ಲಿ ನೋಡಬಹುದಾಗಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಆಕ್ಟಿವಾ 5ಜಿ ಸ್ಕೂಟರ್‌ಗಳು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಲಿಮಿಟೆಡ್ ಎಡಿಷನ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.55,032(ಎಸ್‌ಟಿಡಿ ವೆರಿಯೆಂಟ್) ಮತ್ತು ಟಾಪ್ ಎಂಡ್ ಮಾದರಿಗೆ ರೂ.56,897(ಡಿಎಲ್ಎಕ್ಸ್ ವೆರಿಯೆಂಟ್)ಕ್ಕೆ ಲಭ್ಯವಿರಲಿವೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಹಾಗೆಯೇ ಸಿಬಿ ಶೈನ್ ಮಾದರಿಯ ಲಿಮಿಟೆಡ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ, 59,083 ಬೆಲೆ ಪಡೆದುಕೊಂಡಿದ್ದು, ಈ ಹಿಂದಿನಂತೆಯೇ 124.6-ಸಿಸಿ ಏರ್-ಕೂಲ್ಡ್ ಎಂಜಿನ್‌ನೊಂದಿಗೆ 10.16-ಬಿಎಚ್‌ಪಿ ಮತ್ತು 10.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಆಕ್ಟಿವಾ 5ಜಿ ಮಾದರಿಗಿಂತ ಕೇವಲ ರೂ.400 ಹೆಚ್ಚುವರಿ ಬೆಲೆ ಹೊಂದಿರುವ ಸ್ಪೆಷಲ್ ಎಡಿಷನ್ ಆಕ್ಟಿವಾ 5ಜಿ ಮಾದರಿಯು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರುವುದು ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಆದ್ರೆ ಸಿಬಿ ಶೈನ್ ಮಾದರಿಯು ಸಾಮಾನ್ಯ ಮಾದರಿಗಿಂತ ಲಿಮಿಟೆಡ್ ಎಡಿಷನ್ ಮಾದರಿಯು ರೂ.1,300 ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಗ್ರಾಫಿಕ್ಸ್ ವಿನ್ಯಾಸವು ಲಿಮಿಟೆಡ್ ಎಡಿಷನ್‌ಗೆ ಭಾರೀ ಬೇಡಿಕೆ ಸೃಷ್ಠಿಯಾಗುವ ನೀರಿಕ್ಷೆಯಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಇದರ ಹೊರತವಾಗಿ ಸ್ಪೆಷಲ್ ಎಡಿಷನ್ ಮಾದರಿಗಳು ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಪಡೆದುಕೊಳ್ಳುತ್ತಿರುವ ಸುಜುಕಿ ಅಕ್ಸೆಸ್, ಟಿವಿಎಸ್ ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳಿಗೆ ಲಿಮಿಟೆಡ್ ಎಡಿಷನ್ ಆಕ್ಟಿವಾ 5ಜಿ ಮಾದರಿಯು ಮತ್ತಷ್ಟು ಟಕ್ಕರ್ ನೀಡಲಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

MOST READ: ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಪ್ರಮುಖ ಬಣ್ಣಗಳಲ್ಲಿ ಲಭ್ಯವಿರಲಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಎಲ್ಇಡಿ ಹೆಡ್‍ಲೈಟ್‍ಗಳನ್ನು ಹೊರತುಪಡಿಸಿ ಆಕ್ಟಿವಾ 5ಜಿ ಸ್ಕೂಟರಿನಲ್ಲಿ ಅನುಕೂಲಕರ 4 ಇನ್ 1 ಲಾಕ್ ಸಿಸ್ಟಂ ಹೊಂದಿದ್ದು, ಇದರಲ್ಲಿ ಸೀಟ್-ರಿಲೀಸ್ ಬಟನ್, ಇಗ್ನೀಷನ್ ಮತ್ತು ಇನ್ನಿತರೆ ಅನುಕೂಲತೆಗಳನ್ನು ಪಡೆದಿದೆ. ಇನ್ನು ಆಕ್ಟಿವಾ 4ಜಿ ಸ್ಕೂಟರ್‍‍ನಲ್ಲಿ ಇರುವ ಹಾಗೆಯೇ 5ಜಿ ಸ್ಕೂಟರ್‌ನಲ್ಲೂ ಕೂಡಾ ಚಾರ್ಜಿಂಗ್ ಸಾಕೆಟ್ ಅನ್ನು ಇರಿಸಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಈ ಸ್ಕೂಟರಿನಲ್ಲಿ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಪುನರಾವರ್ತಿಸಿದ್ದು, ಸೆಮಿ-ಡಿಜಿಟಲ್ ಆಯ್ಕೆಯನ್ನು ಪಡೆದಿದೆ. ಇನ್ನು ಇದರಲ್ಲಿ ಚಾಲಕರು ಸರ್ವಿಸ್ ಇಂಟರ್‍‍ವಲ್ ಮತ್ತು ಇಕೊ ಸ್ಪೀಡ್ ಇಂಡಿಕೇಟರ್ ಹೊಸದಾಗಿ ಕಾಣಬಹುದಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 60 ಕಿ.ಮಿ ಮೈಲೇಜ್ ಸಾಮರ್ಥ್ಯದೊಂದಿಗೆ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.

More from DriveSpark

Article Published On: Monday, May 27, 2019, 19:06 [IST]
English summary
Honda Activa 5G & CB Shine Limited Edition Launched In India — Prices Start At Rs 55,032. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+