ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಸುಜುಕಿ ಮೋಟಾರ್‍‍ಸೈಕಲ್ಸ್ ಇಂಡಿಯಾ ಇತ್ತೀಚಿಗೆ ಬಿಡುಗಡೆಯಾದ ಜಿಕ್ಸರ್ ಎಸ್‍ಎಫ್ 250 ಬೈಕಿನ ಮೋಟೊ ಜಿಪಿ ಎಡಿಷನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ ಎಡಿಷನ್ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.71 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ ಎಡಿಷನ್ ಬೈಕುಗಳು ಕಂಪನಿಯ ರೇಸಿಂಗ್ ಟೀಂ ಬಣ್ಣ ಹಾಗೂ ಸ್ಪಾನ್ಸರ್ ಡೆಕಾಲ್‌ಗಳನ್ನು ಹೊಂದಿವೆ. ಇವು 2019ರ ಜಿಎಸ್ಎಕ್ಸ್-ಆರ್‍ಆರ್ ಬೈಕಿನ ಸುಜುಕಿ ರೇಸಿಂಗ್ ಬ್ಲೂ ಪೇಂಟ್ ಯೋಜನೆಯನ್ನು ಒಳಗೊಂಡಿದೆ. ಈ ಬೈಕ್ ಎಕ್ಸ್ಟಾರ್ ಡೆಕಾಲ್ಸ್ ಜೊತೆಗೆ ವ್ಹೀಲ್‍‍ಗಳ ಮೇಲೆ ವಿಶಿಷ್ಟವಾದ ಪಿನ್‌ಸ್ಟ್ರೈಪಿಂಗ್‌ ಹೊಂದಿರಲಿದೆ. ಈ ಬೈಕಿನ ಬಿಡುಗಡೆಯ ನಂತರ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈ. ಲಿಮಿಟೆಡ್‍‍ನ ಉಪಾಧ್ಯಕ್ಷರಾದ ಶ್ರೀ ದೇವಶಿಶ್ ಹಂಡಾರವರು ಮಾತನಾಡಿದ್ದಾರೆ.

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಜಿಕ್ಸರ್ ಎಸ್‌ಎಫ್ 250 ಬೈಕಿನ ಯಶಸ್ಸಿನ ನಂತರ, ಸುಜುಕಿಯ ರೇಸಿಂಗ್ ಅನ್ನು ಮುಂದುವರೆಸಲು ಜಿಕ್ಸರ್ ಎಸ್‌ಎಫ್ 250 ಮೋಟೋ ಜಿಪಿ ಎಡಿಷನ್ ಆರಂಭಿಸಲಾಗಿದೆ. ಸುಜುಕಿ ಕಂಪನಿಯ ರೇಸಿಂಗ್ ನೀಲಿ ಬಣ್ಣವು, ಸುಜುಕಿಯ ಸ್ಪಿರಿಟ್ ಹಾಗೂ ರೇಸಿಂಗ್‍‍ನ ಉತ್ಸಾಹವನ್ನು ಸೂಚಿಸುತ್ತದೆ.

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಸಮಕಾಲೀನ ಸ್ಟೈಲಿಂಗ್ ಜೊತೆಗೆ ಸ್ಪೋರ್ಟಿ ವಿನ್ಯಾಸ ಹಾಗೂ ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ಎಂಜಿನ್, ಹೊಸ ಎಸ್‌ಒಸಿಎಸ್ ಟೆಕ್ನಾಲಜಿಯ ಜೊತೆಗೆ ಬೈಕಿನ ರೇಸಿಂಗ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜಿಕ್ಸರ್‍‍ನ ಇತರ ಮಾದರಿಗಳಂತೆ ಈ ಬೈಕ್ ಅನ್ನು ಸಹ ಅದೇ ಉತ್ಸಾಹದಿಂದ ಮಾರಾಟವಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು.

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಹೊಸ ಫ್ಯಾಕ್ಟರಿ ರೇಸಿಂಗ್ ಟೀಂ ಪ್ರೇರಿತವಾದ ಲಿವರಿ ಹಾಗೂ ಡೆಕಾಲ್‌ಗಳನ್ನು ಹೊರತುಪಡಿಸಿ, ಜಿಕ್ಸರ್ ಎಸ್‌ಎಫ್ 250 ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕಿನಲ್ಲಿಯೂ ಸಹ ಅದೇ 249 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್‍‍ಪಿ‍ಎಂನಲ್ಲಿ 26.5 ಬಿ‍‍ಹೆ್ಚ್‍‍ಪಿ ಪವರ್ ಹಾಗೂ 7500 ಆರ್‍‍ಪಿ‍ಎಂನಲ್ಲಿ 22.6 ಎನ್‍ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗೆ ಆರು ಸ್ಪೀಡ್‍‍ನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಜಿಕ್ಸರ್ ಎಸ್‌ಎಫ್ 250 ಮೋಟೋ ಜಿಪಿ ಎಡಿಷನ್ ಬೈಕ್, ಸ್ಟ್ಯಾಂಡರ್ಡ್ ಮಾದರಿಯ ಬೈಕಿನಲ್ಲಿರುವಂತಹ ಸಸ್ಪೆಂಷನ್ ಹಾಗೂ ಬ್ರೇಕ್‌ಗಳನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಒಂದೇ ಡಿಸ್ಕ್ ಎರಡೂ ತುದಿಯಲ್ಲಿರುವ ಬ್ರೇಕಿಂಗ್‍‍ಗಳನ್ನು ನಿರ್ವಹಿಸುತ್ತದೆ. ಇದನ್ನು ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಬೆಂಬಲಿಸುತ್ತದೆ. ಈ ಬೈಕ್ ಮುಂಭಾಗದಲ್ಲಿ 110/70 ಹಾಗೂ ಹಿಂಭಾಗದಲ್ಲಿ 150/60 ಪ್ರೊಫೈಲ್‌‍‍ನ, 17 ಇಂಚಿನ ರೇಡಿಯಲ್ ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿದೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಅವುಗಳೆಂದರೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೇಲ್‌ಲೈಟ್, ಸ್ಪೋರ್ಟಿ ಡ್ಯುಯಲ್ ಮಫ್ಲರ್, ಬ್ರಷ್ಡ್ ಫಿನಿಶ್ ಹೊಂದಿರುವ ಅಲಾಯ್ ವ್ಹೀಲ್ಸ್, ರೇರ್ ಟಯರ್ ಹಗ್ಗರ್ ಹಾಗೂ ಪೂರ್ಣ ಪ್ರಮಾಣದ ಡಿಜಿಟಲ್ ಸ್ಪೀಡೊಮೀಟರ್‍‍ಗಳು.

MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಬಿಡುಗಡೆಯಾಯ್ತು ಜಿಕ್ಸರ್ ಎಸ್‍ಎಫ್ 250 ಮೋಟೊ ಜಿಪಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕ್ ಅನ್ನು ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಕ್ವಾರ್ಟರ್ ಲೀಟರ್ ಬೈಕ್ ಆಗಿದೆ. ಜಪಾನ್ ಮೂಲದ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಈ ಬೈಕಿನ ಮೋಟೋ ಜಿಪಿ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹೊಸ ಸುಜುಕಿ ಜಿಕ್ಸರ್ 250 ಮೋಟೊ ಜಿಪಿ ಎಡಿಷನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಹೋಂಡಾ ಸಿಬಿಆರ್ 250 ಆರ್, ಟಿವಿಎಸ್ ಅಪಾಚೆ ಆರ್‍‍ಆರ್ 310, ಕೆಟಿಎಂ ಆರ್‍‍ಸಿ 200 ಹಾಗೂ ಯಮಹಾ ಎಫ್‍‍ಝಡ್ 25 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, August 7, 2019, 18:28 [IST]
English summary
Suzuki Gixxer SF 250 MotoGP Edition Launched In India: Priced At Rs 1.71 Lakh - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+