ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಸುಜುಕಿ ಇಂಟ್ರೂಡರ್ 150 ಬೈಕ್
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್‍ಸೈಕಲ್ಸ್ ತಮ್ಮ ಜನಪ್ರಿಯ ಇಂಟ್ರೂಡರ್ 150 ಬೈಕ್ ಅನ್ನು ಹಲವಾರು ಗುರುತರ ಬದಾಲವಣೆಗಳೊಂದಿಗೆ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.08 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಜಿಕ್ಸರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಹೊರತಂದ ನಂತರ ಜಪಾನ್ ದೈತ್ಯ ದ್ವಿಚಕ್ರ ವಾಹನ ಸಂಸ್ಧೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ವಿಭಾಗದಲ್ಲೂ ಸಹ ಹೊಸ ನಮೂನೆಯ ಇನ್‌ಟ್ರುಡರ್ ಪರಿಚಯಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

ಹೊಸ ಅಪ್ಡೇಟ್
ಇದೀಗ ಬಿಡುಗಡೆಗೊಂಡ ಹೊಸ ಸುಜುಕಿ ಇಂಟ್ರೂಡರ್ 150 ಬೈಕ್ ಮೆಟಾಲಿಕ್ ಮ್ಯಾಟ್ ಟೈಟಾನಿಯಂ ಪೆಯಿಂಟ್ ಸ್ಕೀಮ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬಾರಿ ಈ ಬೈಕಿನಲ್ಲಿ ಸುಧಾರಿತ ಬ್ರೇಕ್ ಪೆಡಲ್ ಮತ್ತು ನವೀಕರಿಸಲಾದ ಗೇರ್ ಶಿಫ್ಟ್ ಪ್ಯಾಟರ್ನ್ ಅನ್ನು ಅಳವಡಿಸಲಾಗಿದೆ. ಇದು ಒಟ್ಟಾರೆಯಾಗಿ ರೈಡರ್‍ನ ಪ್ರಯಾಣದ ಅನುಭವವನ್ನು ಅಭಿವೃದ್ದಿಗೊಳಿಸುವಲ್ಲಿ ಸಹಾಯಕವಾಗಿದೆ.

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯು ದೈನಂದಿನ ಸೇರಿದಂತೆ ವಾರಂತ್ಯದ ಪ್ರಯಾಣಕ್ಕೂ ಸೂಕ್ತವೆನಿಸಲಿದೆ. ಹಾಗೆಯೇ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿಂದಲೂ ಕೂಡಿದೆ.

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

ಇದಲ್ಲದೇ ಶಕ್ತಿಯುತವಾದ ವಿನ್ಯಾಸ, ಇಂಧನ ಟ್ಯಾಂಕ್, ಕಡಿಮೆ ಎತ್ತರದ ಸೀಟು, ಹ್ಯಾಂಡಲ್‌ಬಾರ್, ಫೂಟ್ ಪೆಗ್, ಆರಾಮದಾಯಕ ಸೀಟು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ. ಹೀಗಿದ್ದರೂ ಇನ್‌ಟ್ರುಡರ್ ವಿನ್ಯಾಸವು ಕೆಲವು ಬೈಕ್ ಪ್ರಿಯರಿಗೆ ಇಷ್ಟವಾಗಿಲ್ಲ ಎನ್ನುವುದು ಅದರ ಮಾರಾಟದ ಪ್ರಮಾಣವೇ ಸೂಚಿಸುತ್ತೆ.

ಇನ್ನು 154.9ಸಿಸಿ ಏರ್ ಕೂಲ್ಡ್, ಫ್ಯೂಲ್-ಇಂಜೆಕ್ಷ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ ಬೈಕ್, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 14.5 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇದರಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಅಂದ್ರೆ, ನಗರಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಡಿಸೈನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯಲ್ಲಿ ಎಸ್‌ಇಪಿ(ಸುಜುಕಿ ಇಕೋ ಪರ್ಫಾಮೆನ್ಸ್) ತಂತ್ರಜ್ಞಾನ ಹೊಂದಿರುವುದು ಬೈಕಿನ ಪರ್ಫಾಮನ್ಸ್ ಹೆಚ್ಚಿಸಿರುವುದಲ್ಲದೇ ಇಂಧನ ದಕ್ಷತೆಯನ್ನು ಸಹ ಹೆಚ್ಚಿಸಿದೆ.


Click it and Unblock the Notifications








